ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ ತಲ್ಲಣ : ಕೆಲ ನಿಮಿಷಗಳಲ್ಲೇ 3 ಲಕ್ಷ ಕೋಟಿ ನಷ್ಟ

|
Google Oneindia Kannada News

ಮುಂಬೈ, ಅಕ್ಟೋಬರ್ 11: ಬಾಂಬೆ ಸ್ಟಾಕ್ ಎಕ್ಸ್ ಚೇಂಜಿನಲ್ಲಿ ಗುರುವಾರದಂದು ಆರಂಭಿಕ ವಹಿವಾಟಿನಲ್ಲೇ ಸೂಚ್ಯಂಕ ನಿರಂತರ ಕುಸಿತ ಕಂಡಿದೆ. 1000ಕ್ಕೂ ಅಧಿಕ ಅಂಶ ಇಳಿಕೆಯಾಗಿದ್ದು, 34,000 ಗಡಿಯಲ್ಲಿ ಸೂಚ್ಯಂಕ ಕಂಡು ಬಂದಿದೆ. ಈ ತ್ವರಿತ ಏರಿಳಿತದಿಂದ ಹೂಡಿಕೆದಾರರು ಸರಿ ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಸ್ಥಿತಿ ಪಾತಾಳಕ್ಕೆ ಕುಸಿದಿತ್ತು. ಆದರೆ, ಬುಧವಾರ ವಹಿವಾಟು ಅಂತ್ಯಕ್ಕೆ ಸುಸ್ಥಿತಿ ಕಾಯ್ದುಕೊಂಡಿತ್ತು.

ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?ಷೇರು ಹೂಡಿಕೆದಾರರಿಗೆ ಸಾಲು ಸಾಲು ಕೆಟ್ಟ ಸುದ್ದಿ, ಇದೇನ್ ಬುದ್ದಿ?

ಐದೇ ನಿಮಿಷದಲ್ಲಿ ಬಿಎಸ್ಇ ಪಟ್ಟಿಯಲ್ಲಿರುವ ಅನೇಕ ಕಂಪನಿಗಳ ಮಾರುಕಟ್ಟೆ ಮೌಲ್ಯ ಕುಸಿದಿದ್ದು ಸುಮಾರು 134.38 ಲಕ್ಷ ಕೋಟಿ ರು ಗೆ ಇಳಿದಿದೆ. ಬುಧವಾರದಂದು ಬಿಎಸ್ಇ ಲಿಸ್ಟಿನಲ್ಲಿರುವ ಕಂಪನಿಗಳು ಸುಮಾರು 138,39,750 ಕೋಟಿ ಲಾಭ ಗಳಿಸಿತ್ತು. ಆಗಸ್ಟ್ 30ರಂದು ಅಂತೂ ಸಾರ್ವಕಾಲಿಕ ದಾಖಲೆಯ 1,59,34,696 ಕೋಟಿಯಷ್ಟು ಗಳಿಸಿತ್ತು. ಡಾಲರ್ ವಿರುದ್ಧ ರುಪಾಯಿ ಅಪಮೌಲ್ಯ ಮುಂದುವರೆದಿದ್ದು, ಪ್ರತಿ ಡಾಲರ್ ಗೆ ರುಪಾಯಿ 74.46 ನಷ್ಟಿದೆ.

Stock Market crash erodes Over Rs 3 Lakh investor wealth

ಷೇರುಗಳ ಕುಸಿತ : ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ವೇದಾಂತ, ರಿಲಯನ್ಸ್, ಟಾಟಾ ಸ್ಟೀಲ್, ಎಸ್ ಬಿಐ ಹಾಗೂ ಟಿಸಿಎಸ್ ಷೇರುಗಳು ಕುಸಿತ ಕಂಡಿವೆ.

800ಕ್ಕೂ ಹೆಚ್ಚು ಅಂಶ ಕುಸಿತ ಕಂಡ ಸೆನ್ಸೆಕ್ಸ್ ಸಾರ್ವಕಾಲಿಕ 13 ದಾಖಲೆ800ಕ್ಕೂ ಹೆಚ್ಚು ಅಂಶ ಕುಸಿತ ಕಂಡ ಸೆನ್ಸೆಕ್ಸ್ ಸಾರ್ವಕಾಲಿಕ 13 ದಾಖಲೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಹಾಗೂ ಇಂಡಿಯಾ ಬುಲ್ಸ್ ಕೂಡಾ ನಷ್ಟ ಅನುಭವಿಸಿವೆ. ಈ ಕುಸಿತದ ನಡುವೆಯೂ ಯೆಸ್ ಬ್ಯಾಂಕ್, ಒಎನ್ ಜಿಸಿ ಹಾಗೂ ಎಚ್ ಪಿ ಸಿಎಲ್ ಲಾಭ ಗಳಿಸಿವೆ.

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಸೂಚ್ಯಂಕ 476.24 ಅಂಕಗಳನ್ನು ಕಳೆದುಕೊಂಡು 34284.65ಗೆ ಬಂದಿದೆ. ನಿಫ್ಟಿ 141.30 ಅಂಕ ಕಳೆದುಕೊಂಡು 10318.80ಗೆ ಇಳಿದಿದೆ.

English summary
As the BSE benchmark index plummeted over 1,000 points during the morning trade on Thursday, investor wealth got eroded by over Rs 3 lakh crore. The BSE benchmark Sensex Thursday crashed over 1,000 points to slip below the key 34,000-mark in early trade, tracking a global sell-off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X