ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೀವ್ ಜಾಬ್ಸ್ ಕನಸು ನನಸಾಗಿಸಲು ಕಾಯುತ್ತಿರುವ ಕ್ಯಾಂಪಸ್

2011ರಲ್ಲಿ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಅಸುನೀಗಿದ ಸ್ಟೀವ್ ಜಾಬ್ಸ್ ಬದುಕಿದ್ದರೆ ಈ ಕ್ಯಾಂಪಸ್ 2015ರಲ್ಲೇ ತನ್ನ ಕೆಲಸಗಾರರಿಗೆ ಮುಕ್ತವಾಗಬೇಕಿತ್ತು. ಆದರೆ, ಅವರ ನಿಧನದಿಂದಾಗಿ ಈ ವರ್ಷ ಉದ್ಘಾಟನೆಯಾಗುವ ನಿರೀಕ್ಷೆಯಿದೆ.

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ ಕೋ, ಫೆಬ್ರವರಿ 7: ಪ್ರತಿಷ್ಠಿತ ಆ್ಯಪಲ್ ಕಂಪನಿಯು ಕ್ಯಾಲಿಫ್ ನ ಕ್ಯುಪರ್ಟಿನೊ ಪ್ರಾಂತ್ಯದಲ್ಲಿ 5 ಬಿಲಿಯನ್ ಡಾಲರ್ (ಸುಮಾರು 33,715 ಕೋಟಿ ರು.) ವೆಚ್ಚದಲ್ಲಿ ನಿರ್ಮಿಸಿರುವ ಕ್ಯಾಂಪಸ್ ಅನ್ನು ಶೀಘ್ರವೇ ಉದ್ಘಾಟನೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ, ಮಹಾನ್ ಕನಸುಗಾರ ಸ್ಟೀವ್ ಜಾಬ್ಸ್ ಅವರ ಕೊನೆಯ ಪ್ರಾಜೆಕ್ಟ್ ಇದಾಗಿದ್ದರಿಂದಾಗಿ ಈ ಕ್ಯಾಂಪಸ್ ಅನ್ನು ಅವರಿಗೇ ಸಮರ್ಪಣೆ ಮಾಡಲು ಆ್ಯಪಲ್ ಕಂಪನಿ ಮುಂದಾಗಿದೆ.

ಆ್ಯಪಲ್ ಕಂಪನಿಗಾಗಿ ಹಲವಾರು ಆ್ಯಪ್, ಪರಿಕರಗಳನ್ನು ಸೃಷ್ಟಿಸಿ ಜಗತ್ತಿನ ಇತಿಹಾಸದಲ್ಲೇ ಆ ಕಂಪನಿಗೆ ಚರಿತ್ರಾರ್ಹ ಹೆಗ್ಗುರತನ್ನು ತಂದುಕೊಟ್ಟ ಸ್ಟೀವ್ ಜಾಬ್ಸ್ ಅವರು ಮೇದೋಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಕ್ಯಾನ್ಸರ್ ನಿಂದಾಗಿ ಅವರು 2011ರಲ್ಲಿ ಅಸುನೀಗಿದರು.

Steve Jobs' Last Project: New Apple Campus, Reported Cost $5 Billion

ಹಾಗಾಗಿ, ಆ ಮಹಾನ್ ಕನಸುಗಾರನ ಕೊನೆಯ ಕನಸೊಂದು ಹಾಗೇ ಬಾಕಿ ಉಳಿದಿತ್ತು. ಅದೇ ಕ್ಯುಪರ್ಟಿನೊ ಪ್ರಾಂತ್ಯದಲ್ಲಿ ನಿರ್ಮಿಸಬೇಕೆಂದು ಉದ್ದೇಶಿಸಲಾಗಿದ್ದ ನೂತನ ಕೇಂದ್ರ ಕಚೇರಿ. ಅಚ್ಚುಕಟ್ಟಾದ ವಿನ್ಯಾಸ, ವೈವಿಧ್ಯಮಯ ಕುಸುರಿ ಕಲೆಯಿಂದ ಕಂಗೊಳಿಸುತ್ತಿರುವ ಈ ಕ್ಯಾಂಪಸ್ ನ ಕಾಮಗಾರಿಯ ಗುಣಮಟ್ಟ ಅತಿ ಉತ್ಕೃಷ್ಟವಾಗಿದೆಯೆಂದು ಮೂಲಗಳು ತಿಳಿಸಿವೆ.

ಪುಟ್ಟ ಪೈಪ್ ಲೈನ್ ಅಳವಡಿಸುವುದರಿಂದ ಹಿಡಿದು ಆ ಕಟ್ಟಡಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕ, ವೈಫೈ ನಂಥ ತಂತ್ರಜ್ಞಾನ ಅಳವಡಿಕೆ... ಹೀಗೆ ಯಾವುದೇ ವಿಚಾರದಲ್ಲಿ ಕೂದಲೆಳೆಯಷ್ಟೂ ದೋಷವನ್ನೂ ಹುಡುಕಲು ಸಾಧ್ಯವಿಲ್ಲ ಎಂದು ಈ ಪ್ರಾಜೆಕ್ಟ್ ನಲ್ಲಿ ದುಡಿದಿರುವ ಕೆಲವು ಹಾಲಿ ಹಾಗೂ ಮಾಜಿ ಇಂಜಿಯರ್ ಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಭವಿಷ್ಯದ ಎಲ್ಲಾ ತಂತ್ರಜ್ಞಾನಗಳಿಗೂ ಹೊಂದುವಂತೆ ಈ ಕಟ್ಟಡವನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವುದೇ ಇದರ ಅತಿ ಮಹತ್ವದ ವಿಶೇಷ ಎಂದಿದ್ದಾರೆ ಅವರು.

ಅಂದಹಾಗೆ, ಸ್ಟೀವ್ ಜಾಬ್ಸ್ ಅವರ ಈ ಕನಸಿನ ಕ್ಯಾಂಪಸ್ ಎಲ್ಲಾ ಅಂದುಕೊಂಡಿದ್ದಂತೆ ನಡೆದಿದ್ದರೆ 2015ರಲ್ಲೇ ಉದ್ಘಾಟನೆಗೊಳ್ಳಬೇಕಿತ್ತು. ಆದರೆ, ಬಾಬ್ಸ್ ಅವರ ನಿಧನ ಹಾಗೂ ಮತ್ತಿತರ ತಾಂತ್ರಿಕ ತೊಂದರೆಗಳಿಂದಾಗಿ ಈ ವರ್ಷ ಕಟ್ಟಡದ ಕಾಮಗಾರಿ ಮುಗಿದಿದ್ದು ಈ ವರ್ಷ ಅದು ಉದ್ಘಾಟನೆಗೊಳ್ಳಬೇಕಿದೆ ಎಂದು ಹೇಳಲಾಗಿದೆ.

English summary
Apple co-founder Steve Job's last work - Apple Inc's sprawling new headquarters in Cupertino, Calif. - will be a fitting tribute: a futuristic campus built with astonishing attention to detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X