ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 05: ಸರಕು ಸೇವಾ ತೆರಿಗೆ (ಜಿಎಸ್ಟಿ) ಬಲವರ್ಧನೆಗಾಗಿ ಕೇಂದ್ರ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕ್ಯಾಶ್ ಬ್ಯಾಕ್ ಸೌಲಭ್ಯ ಜಾರಿಗೆ ತರಲು ನಿರ್ಧರಿಸಲಾಗಿದೆ.

ಕೇಂದ್ರದ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆಯ 29ನೇ ಸಲಹಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಸಭೆ ಸೆಪ್ಟೆಂಬರ್ 28, 29ರಂದು ಗೋವಾದಲ್ಲಿ ಮುಂದಿನ ಸಭೆ ನಡೆಯಲಿದೆ.

ಲೋಕಸಭೆ ಚುನಾವಣೆ ಹಿನ್ನಲೆ, ಜಿಎಸ್ಟಿಯಲ್ಲಿ ಭಾರಿ ಬದಲಾವಣೆ!ಲೋಕಸಭೆ ಚುನಾವಣೆ ಹಿನ್ನಲೆ, ಜಿಎಸ್ಟಿಯಲ್ಲಿ ಭಾರಿ ಬದಲಾವಣೆ!

ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ಪರಿಹಾರ ಮತ್ತು ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಕ್ಯಾಶ್​ಬ್ಯಾಕ್​ ಸೌಲಭ್ಯ ಜಾರಿಗೆ ತರಲು ನಿರ್ಧರಿಸಲಾಗಿದೆ.

States to test GST cashback payments via Rupay, BHIM app: Piyush Goyal

ಭೀಮ್ ಆಪ್(BHIM UPI) ಅಥವಾ ರುಪೇ ಮೂಲಕ ಸರಕು ಮತ್ತು ಸೇವೆಗಳಿಗೆ ಗ್ರಾಹಕರು ಪೇಮೆಂಟ್ ಮಾಡಿದ್ರೆ ಶೇ.20 ರಷ್ಟು ಕ್ಯಾಶ್​ಬ್ಯಾಕ್ ಪಡೆಯಬಹುದು. ಆದರೆ, ಕ್ಯಾಶ್​​ಬ್ಯಾಕ್​ಅನ್ನು ಗರಿಷ್ಠ 100ರೂ.ಗೆ ಮಿತಿಗೊಳಿಸಲಾಗಿದೆ. ಕ್ಯಾಶ್ ಬ್ಯಾಕ್ ಯೋಜನೆ ಕಾರ್ಯಗತಗೊಳಿಸಲು ಆಸಕ್ತಿ ತೋರುವ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುತ್ತೇವೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.

ಸಣ್ಣ, ಮಧ್ಯಮ ಕೈಗಾರಿಕೆಗಳ(MSME) ವಿಭಾಗದಲ್ಲಿ ನಗದು ರಹಿತ ವಹಿವಾಟು ಹೆಚ್ಚಿಸಲು ಈ ಕ್ಯಾಶ್​ಬ್ಯಾಕ್ ಸೌಲಭ್ಯ ನೀಡುತ್ತಿದ್ದೇವೆ ಎಂದು ಹೇಳಿದರು. ಸಭೆಯಲ್ಲಿ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾ ಸೇರಿದಂತೆ ಹಲವರು ಹಾಜರಿದ್ದರು.

English summary
States will roll out on pilot basis incentives for digital transactions through Rupay card and BHIM app under the GST, Finance Minister Piyush Goyal said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X