ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲ್ಕೋಹಾಲ್ ಹೋಂ ಡೆಲಿವರಿ ಬಗ್ಗೆ ಪರಿಗಣಿಸಿ: ಸುಪ್ರೀಂಕೋರ್ಟ್

|
Google Oneindia Kannada News

ನವದೆಹಲಿ, ಮೇ 8: ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ದೇಶದ ಹಲವೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಮದ್ಯ ಖರೀದಿಸಲು ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಹಲವು ನಿಬಂಧನೆಗಳ ನಡುವೆ ಮದ್ಯಪ್ರಿಯರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದು, ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಕೊರೋನಾ ಸೋಂಕು ಹರಡದಂತೆ ವಿಧಿಸಿರುವ ನಿಬಂಧನೆ ಮೀರಿದಂತಾಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡುವ ಬದಲು ಹೋಂ ಡೆಲಿವರಿ ಮಾಡುವುದು ಸೂಕ್ತ ಎಂದು ಹಲವು ರಾಜ್ಯಗಳಿಂದ ಮನವಿ ಬಂದಿದೆ. ಈ ಮನವಿಗೆ ಸುಪ್ರೀಂ ಕೋರ್ಟ್‌ ಕೂಡಾ ಸಮ್ಮತಿಸಿದೆ.

Recommended Video

ಇಂತವರನ್ನು ನೋಡಿ ಅಳುವುದೋ ನಗುವುದೋ ನೀವೇ ಹೇಳಿ | Oneindia kannada

ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅಶೋಕ್ ಭೂಷಣ್, ಜಸ್ಟೀಸ್ ಎಸ್ .ಕೆ ಕೌಲ್ ಹಾಗೂ ಬಿಆರ್ ಗವಾಯಿ ಅವರಿದ್ದ ನ್ಯಾಯಪೀಠವು, ಸುಪ್ರೀಂಕೋರ್ಟ್ ಈ ಬಗ್ಗೆ ಯಾವುದೇ ಆದೇಶ ನೀಡುವುದಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ನಿಯಮ ಪಾಲಿಸಲು ಆಯಾ ರಾಜ್ಯಗಳು ಗ್ರಾಹಕರ ಮನೆ ಬಾಗಿಲಿಗೆ ಮದ್ಯ ಪೂರೈಸುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದೆ.

ಎಣ್ಣೆ ಅಂಗಡಿ ಮುಂದೆ ಕ್ಯೂ ಯಾಕೆ; ಇನ್ಮುಂದೆ ಮನೆ ಬಾಗಿಲಿಗೆ ಮದ್ಯ! ಎಣ್ಣೆ ಅಂಗಡಿ ಮುಂದೆ ಕ್ಯೂ ಯಾಕೆ; ಇನ್ಮುಂದೆ ಮನೆ ಬಾಗಿಲಿಗೆ ಮದ್ಯ!

ಮದ್ಯ ಪೂರೈಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಹೀಗಾಗಿ, ಗೃಹ ಸಚಿವಾಲಯ ಈ ಕುರಿತಂತೆ ನೀಡಿರುವ ನಿಬಂಧನೆಗಳನ್ನು ಪಾಲಿಸದಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಸುಪ್ರೀಂಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು.

States Should Consider Home Delivery Of Liquor, Suggests Supreme Court

ಆದರೆ, ಪಿಐಎಲ್ ತಳ್ಳಿ ಹಾಕಿದ ಸುಪ್ರೀಂಕೋರ್ಟ್, ಹೋಂ ಡೆಲಿವರಿ ಬಗ್ಗೆ ಚರ್ಚೆ ನಡೆದಿದ್ದು, ಸರ್ಕಾರ ಈ ಬಗ್ಗೆ ಪರಿಗಣಿಸಲಿ, ನಾವು ಏನು ಮಾಡಬೇಕು? ಎಂದು ಜಸ್ಟೀಸ್ ಕೌಲ್ ಪ್ರಶ್ನಿಸಿದ್ದಾರೆ.

ಸದ್ಯ ಕಾನೂನಿನ ಪ್ರಕಾರ ಹೋಂ ಡೆಲಿವರಿ ಮಾಡಲು ಯಾವುದೇ ಆಸ್ಪದವಿಲ್ಲ. ಆದರೆ, ಜೋಮ್ಯಾಟೋ, ಇಂಟರ್ ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳು ಆನ್ ಲೈನ್ ಮಾರಾಟ, ಹೋಂ ಡೆಲಿವರಿಗೆ ಅನುಮತಿ ನೀಡುವಂತೆ ಒತ್ತಡ ಹೇರುತ್ತಿವೆ.

English summary
States have been advised to consider "indirect sale, home delivery" of liquor to ensure minimal crowds and enforcement of social distancing protocols at alcohol shops across the country, the Supreme Court said today, disposing off a PIL (public interest litigation) on the subject of liquor sales during the coronavirus lockdown "affecting the life of the common man".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X