ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯದಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯೂ ಸ್ಥಗಿತ: ಎಸ್‌ಬಿಐ ಇಂಗಿತ

|
Google Oneindia Kannada News

ಮುಂಬೈ, ಆಗಸ್ಟ್ 20: ಎಲ್ಲಾ ಕಡೆ ಸಾಮಾನ್ಯವಾಗಿ ಬಳಕೆಯಲ್ಲಿರುವ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದಲೇ ತೆಗೆದುಹಾಕಲು ಭಾರತೀಯ ಸ್ಟೇಟ್ ಬ್ಯಾಂಕ್ ಮುಂದಾಗಿದೆ. ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡಲು ಬಯಸಿರುವ ಎಸ್‌ಬಿಐ, ಪ್ಲಾಸ್ಟಿಕ್ ಕಾರ್ಡ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉದ್ದೇಶಿಸಿದೆ.

ದೇಶದ ಜನಸಂಖ್ಯೆಯ ಶೇ 5ರಷ್ಟು ಗ್ರಾಹಕರನ್ನು ಹೊಂದಿರುವ ಎಸ್‌ಬಿಐ, ದೊಡ್ಡ ಪ್ರಮಾಣದಲ್ಲಿ ಜನರು ಡೆಬಿಟ್ ಕಾರ್ಡ್‌ಗಳ ಮೇಲೆ ಅವಲಂಬಿತರಾಗಿದ್ದರೂ, ಅದರ ಬಳಕೆಯನ್ನು ಅಂತ್ಯಗೊಳಿಸಲು ತೀರ್ಮಾನಿಸಿದೆ.

ಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆ

'ಡೆಬಿಟ್ ಕಾರ್ಡ್‌ಗಳನ್ನು ನಿರ್ಮೂಲನೆ ಮಾಡುವುದು ನಮ್ಮ ಬಯಕೆ. ನಾವು ಅವುಗಳನ್ನು ಸ್ಥಗಿತಗೊಳಿಸುತ್ತೇವೆ ಎನ್ನುವುದು ಖಚಿತ' ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ಸೋಮವಾರ ವಾರ್ಷಿಕ ಕಾರ್ಯಕ್ರಮದಲ್ಲಿ ಹೇಳಿದರು.

State Bank Of India Wants To Eliminate The Debit Cards

ದೇಶದಾದ್ಯಂತ ಸುಮಾರು 90 ಕೋಟಿ ಡೆಬಿಟ್ ಕಾರ್ಡ್‌ಗಳ ಬಳಕೆಯಾಗುತ್ತಿದೆ. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮೂರು ಕೋಟಿ ಇದೆ. ಡೆಬಿಟ್ ಕಾರ್ಡ್ ರಹಿತ ದೇಶದ ಸಾಧನೆ ಮಾಡಲು ಎಸ್‌ಬಿಐಗೆ ತನ್ನದೇ ಆದ 'ಯೋನೋ' ವೇದಿಕೆಯಂತಹ ಪ್ರಮುಖ ಡಿಜಿಟಲ್ ಪರಿಹಾರಗಳಿವೆ ಎಂದು ತಿಳಿಸಿದರು,

ಯೋನೋ ವೇದಿಕೆ ಮೂಲಕ ಗ್ರಾಹಕರು ಎಟಿಎಂ ಮೂಲಕ ಹಣವನ್ನು ಪಡೆದುಕೊಳ್ಳಬಹುದು ಅಥವಾ ಕಾರ್ಡ್ ಇಲ್ಲದೆಯೂ ವ್ಯಾಪಾರ ಮಳಿಗೆಗಳಲ್ಲಿ ಖರೀದಿ ಮಾಡಿ ಪಾವತಿಸಬಹುದು ಎಂದು ಹೇಳಿದರು.

ಗ್ಲೋಬಲ್ ವಿಲೇಜ್ ಟೆಕ್ ಮಾರಾಟ, ತಗ್ಗಿದ ಕಾಫಿ ಡೇ ಸಾಲದ ಹೊರೆ ಗ್ಲೋಬಲ್ ವಿಲೇಜ್ ಟೆಕ್ ಮಾರಾಟ, ತಗ್ಗಿದ ಕಾಫಿ ಡೇ ಸಾಲದ ಹೊರೆ

ಎಸ್‌ಬಿಐ ಈಗಾಗಲೇ 68,000 ಯೋನೋ ಕ್ಯಾಶ್‌ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ಮುಂದಿನ 18 ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕ್ಯಾಶ್‌ ಪಾಯಿಂಟ್‌ಗಳನ್ನು ಸ್ಥಾಪಿಸುವ ಬೃಹತ್ ಯೋಜನೆ ಹೊಂದಿದೆ. ಇದರಿಂದ ಕಾರ್ಡ್ ಬಳಕೆ ಇನ್ನಷ್ಟು ಕಡಿಮೆಯಾಗಲಿದೆ ಎಂದರು.

State Bank Of India Wants To Eliminate The Debit Cards

ಇದರೊಂದಿಗೆ ಯೋನೋ ವೇದಿಕೆಯು ಕೆಲವು ನಿರ್ದಿಷ್ಟ ವ್ಯಾಪಾರಿಗಳಿಂದ ಖರೀದಿ ಮಾಡುವಾಗ ಸಾಲವನ್ನೂ ಒದಗಿಸುತ್ತದೆ. ಹೀಗಾಗಿ ಜೇಬಿನಲ್ಲಿರುವ ಕ್ರೆಡಿಟ್ ಕಾರ್ಡ್ ಬಳಕೆಯೂ ಕೆಲವೆಡೆ ಅಗತ್ಯವಿರುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಜೇಬಿನಲ್ಲಿ ಪ್ಲಾಸ್ಟಿಕ್ ಕಾರ್ಡ್‌ಗಳನ್ನು ಕೊಂಡೊಯ್ಯುವ ಅಗತ್ಯವೇ ಕಡಿಮೆಯಾಗಲಿದೆ. ವರ್ಚ್ಯುವಲ್ ಕೂಪನ್‌ಗಳು ಭವಿಷ್ಯದ ವಹಿವಾಟಿನ ಮೂಲವಾಗಲಿದೆ ಎಂದು ತಿಳಿಸಿದರು.

ಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿಅಂಬಾನಿ ಒಪ್ಪಂದದ ಪರಿಣಾಮ: ಭಾರತದ ತೈಲ ಪೂರೈಕೆಯಲ್ಲಿ ಮೊದಲ ಸ್ಥಾನಕ್ಕೆ ಮರಳಿದ ಸೌದಿ

ಪಾವತಿಗಳನ್ನು ಮಾಡಲು ಕ್ಯೂಆರ್ ಕೋಡ್‌ಗಳ ಬಳಕೆ ಕೂಡ ಕಡಿಮೆ ವೆಚ್ಚದಾಯಕವಾಗಲಿವೆ ಎಂದು ಹೇಳಿದರು.

English summary
State Bank of India (SBI) chairman Rajnish Kumar said that, the bank is aimed to eliminate the debit cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X