ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಲ್ಲೂ ಇನ್ನು ಮುಂದೆ ಹಣ ವ್ಯವಹಾರಕ್ಕೆ ಕಟ್ಟಬೇಕು ಶುಲ್ಕ

ಇತ್ತೀಚೆಗಷ್ಟೇ ಸೇವಿಂಗ್ ಅಕೌಂಟ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟಿರದ ಗ್ರಾಹಕರಿಗೆ ದಂಡ ಹಾಕುವ ನಿರ್ಧಾರ ಕೈಗೊಂಡಿದ್ದ ಎಸ್ ಬಿಐನಿಂದ ಈಗ ಮತ್ತೊಂದು ಬಾಣ ಪ್ರಯೋಗ.

|
Google Oneindia Kannada News

ನವದೆಹಲಿ, ಮಾರ್ಚ್ 6: ಇತ್ತೀಚೆಗಷ್ಟೇ, ಖಾಸಗಿ ವಲಯಗಳ ಪ್ರಮುಖ ಬ್ಯಾಂಕುಗಳಾದ ಎಚ್ ಡಿಎಫ್ ಸಿ, ಐಸಿಐಸಿಐ, ಆ್ಯಕ್ಸಿಸ್ ಬ್ಯಾಂಕುಗಳು ತಮ್ಮಲ್ಲಿನ ಹಣದ ವ್ಯವಹಾರಗಳಿಗೆ ನಿರ್ದಿಷ್ಟ ಶುಲ್ಕವನ್ನು ನಿಗದಿಗೊಳಿಸುವ ಮೂಲಕ ಆ ಬ್ಯಾಂಕ್ ಗಳಲ್ಲಿ ವ್ಯವಹರಿಸುವ ಗ್ರಾಹಕರಿಗೆ ಶಾಕ್ ನೀಡಿದ್ದವು. ಇದೀಗ, ಅವುಗಳ ಸಾಲಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಸೇರಿಕೊಂಡಿದೆ.

ಮಾರ್ಚ್ 6ರಂದು ಬಿಡುಗಡೆಗೊಂಡಿರುವ ಎಸ್ ಬಿಐ ಪ್ರಕಟಣೆಯಲ್ಲಿ ಎಸ್ ಬಿಐನ ಯಾವುದೇ ಶಾಖೆಯಲ್ಲಿ ಉಚಿತವಾಗಿ ಹಣ ತುಂಬಿಸಲು ಕೇವಲ ಮೂರು ಅವಕಾಶಗಳನ್ನು ಮಾತ್ರ ನೀಡಲಾಗಿದ್ದು, ಆನಂತರದ ಎಲ್ಲಾ ಹಣದ ವ್ಯವಹಾರಗಳಿಗೆ (ಡೆಪಾಸಿಟ್ ಅಥವಾ ವಿತ್ ಡ್ರಾ) ನಿರ್ದಿಷ್ಠ ಶುಲ್ಕವನ್ನು ನಿಗದಿಗೊಳಿಸಿದೆ. ಈ ಹೊಸ ನಿಯಮ ಮುಂದಿನ ತಿಂಗಳ 1ನೇ ತಾರೀಖಿನಿಂದ (ಏಪ್ರಿಲ್ 1) ಜಾರಿಗೊಳ್ಳಲಿದೆ.[ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!]

State Bank of India to impose charges on cast transactions

ಇತ್ತೀಚೆಗಷ್ಟೇ, ತನ್ನಲ್ಲಿರುವ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರದ ಗ್ರಾಹಕರಿಗೆ ದಂಡ ವಿಧಿಸುವ ನಿಯಮವನ್ನು ಜಾರಿಗೊಳಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್, ಇದೀಗ, ತನ್ನ ಗ್ರಾಹಕರಿಗೆ ಮತ್ತೊಂದು ರೀತಿಯ ಬಿಸಿ ಮುಟ್ಟಿಸಿದೆ.

ವಿತ್ ಡ್ರಾ ಶುಲ್ಕ ಹೇಗೆ?

ಎಸ್ ಬಿಐ ಎಟಿಎಂಗಳ ಮೂಲಕ ಹಣ ಡ್ರಾ ಮಾಡುವುದಾದರೆ ತಿಂಗಳಿಗೆ ಐದು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದು. ಆರನೇ ವಹಿವಾಟಿನಿಂದ ಪ್ರತಿ ವ್ಯವಹಾರಕ್ಕೆ 10 ರು.ರಂತೆ ಶುಲ್ಕ ವಿಧಿಸಲಾಗುವುದು. ಆದರೆ, ಬ್ಯಾಂಕು ಖಾತೆಯಲ್ಲಿ 25,000 ರು.ಗಳಿಗಿಂತಲೂ ಹೆಚ್ಚು ಹಣ ಇಟ್ಟುಕೊಂಡಿರುವ ಗ್ರಾಹಕರಿಗೆ ಈ ನಿಯಮ ಅನ್ವಯವಾಗದು ಎಂದು ಇಂಟರ್ ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ಹೇಳಿದೆ.

ಇತರ ಎಟಿಎಂಗಳ ಮೂಲಕ ಡ್ರಾ: ಇತರ ಬ್ಯಾಂಕುಗಳ ಎಟಿಎಂಗಳಿಂದ ಎಸ್ ಬಿಐ ಖಾತೆಯ ಹಣ ತೆಗೆಯುವುದಾದರೆ ಅದಕ್ಕೆ ತಿಂಗಳಿಗೆ ಮೂರು ಬಾರಿ ಉಚಿತ ಅವಕಾಶವುಂಟು. ಅದನ್ನು ಮೀರಿದ ವಿತ್ ಡ್ರಾ ಗಳಿಗೆ ಪ್ರತಿ ವ್ಯವಹಾರಕ್ಕೂ 20 ರು. ಶುಲ್ಕ ವಿಧಿಸಲಾಗುತ್ತದೆ.

ಎಸ್ ಎಂಎಸ್ ಗಳಿಗೂ ಶುಲ್ಕ: ಎಸ್ ಬಿಐ ಖಾತೆಯ ಹಣದ ವ್ಯವಹಾರಗಳ ಬಗ್ಗೆ ಎಸ್ಎಂಎಸ್ ಅಲರ್ಟ್ ಇಟ್ಟುಕೊಂಡಿದ್ದಲ್ಲಿ ಅವರಿಗೂ ಶುಲ್ಕ ಬೀಳಲಿದೆ. ವರ್ಷದ ಪ್ರತಿ ಮೂರು ತಿಂಗಳಿಗೆ ಯಾರ ಅಕೌಂಟಿನಲ್ಲಿ ಸರಾಸರಿ 25,000 ರು. ಹಣವಿರುವುದಿಲ್ಲವೋ ಅಂಥವರು ಎಸ್ಎಂಎಸ್ ಅಲರ್ಟ್ ಸೌಲಭ್ಯ ಪಡೆದಿದ್ದಲ್ಲಿ ಅವರಿಗೆ ಆ ಮೂರು ತಿಂಗಳಿಗೆ 15 ರು. ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಪ್ರತಿ ತಿಂಗಳಿಗೆ 5 ರು. ಶುಲ್ಕ ವಿಧಿಸಿದಂತಾಗುತ್ತದೆ.

English summary
The State Bank of India (SBI) became the first public sector lender to join the three private banks — HDFC Bank, ICICI Bank and Axis Bank — in issuing new norms for cash transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X