ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!

|
Google Oneindia Kannada News

ಬೆಂಗಳೂರು, ಮಾರ್ಚ್ 1: ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಹಾಗೂ ಮನೆ ಕಟ್ಟಲು ಸಾಲ, ಆರ್ಥಿಕ ನೆರವು ನೀಡುವ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ.

ಗೃಹ ಸಾಲದ ಮೇಲಿನ ಬಡ್ಡಿ ದರಗಳನ್ನು ಮಾರ್ಚ್ 31ರವರೆಗೆ ಇಳಿಕೆ ಮಾಡಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇಕಡಾ 6.70ರಿಂದ ಪ್ರಾರಂಭವಾಗಲಿದೆ. 70 ಬೇಸಿಸ್ ಪಾಯಿಂಟ್‌ಗಳ (ಶೇ 0.70) ರಿಯಾಯಿತಿಯನ್ನು ಎಸ್ಬಿಐ ನೀಡುತ್ತಿದೆ. ಇದಲ್ಲದೆ, ಪ್ರೊಸೆಸಿಂಗ್ ಶುಲ್ಕವನ್ನು ಶೇಕಡಾ 100ರಷ್ಟು ಮನ್ನಾ ಮಾಡಲಾಗುತ್ತಿದೆ.

ಸೆ.18ರಿಂದ ಎಸ್ಬಿಐ ಒಟಿಪಿ ಆಧಾರಿತ ವಿಥ್ ಡ್ರಾ ನಿಯಮ ಬದಲಾವಣೆ ಸೆ.18ರಿಂದ ಎಸ್ಬಿಐ ಒಟಿಪಿ ಆಧಾರಿತ ವಿಥ್ ಡ್ರಾ ನಿಯಮ ಬದಲಾವಣೆ

ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಲು ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಎಸ್ಬಿಐ ಹೇಳಿದೆ.

State Bank of India cuts home loan interest rates

ಜೊತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನದಂದು ಮಹಿಳಾ ಸಾಲಗಾರರಿಗೆ ವಿಶೇಷ 5 ಬಿಪಿಎಸ್ ರಿಯಾಯಿತಿ ನೀಡಲಾಗುತ್ತಿದೆ, ಈ ರೀತಿ ಸೌಲಭ್ಯಗಳ ಬಳಕೆ ಹೆಚ್ಚಿದ್ದಂತೆ ಇಎಂಐ ಕೂಡಾ ತಗ್ಗಲಿದೆ ಎಮುದ್ ಡಿಎಂಡಿ ಸಲೋನಿ ನಾರಾಯಣನ್ ಹೇಳಿದ್ದಾರೆ.

75 ಲಕ್ಷ ರು ತನಕದ ಸಾಲಕ್ಕೆ ಶೇ 6.7 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ. ಗ್ರಾಹಕರು ಯೋನೋ ಆಪ್ ಬಳಸಿಕೊಂಡು ಬಡ್ಡಿದರ ರಿಯಾಯಿತಿ ಪಡೆದುಕೊಳ್ಳಬಹುದು. ಡಿಸೆಂಬರ್ 31, 2020ಕ್ಕೆ 5 ಲಕ್ಷ ಕೋಟಿ ಗೂ ಅಧಿಕ ಸಾಲ ವಿತರಿಸಿದ ಸಾಧನೆಯನ್ನು ಎಸ್ಬಿಐ ದಾಖಲಿಸಿದೆ.

English summary
State Bank of India (SBI) has reduced the interest rate on home loans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X