• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ 24 ಹೊಸ ಮಾರ್ಗದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರ

|

ನವದೆಹಲಿ, ಫೆಬ್ರವರಿ 11: ದೇಶದ ಪ್ರಮುಖ ವಿಮಾನಯಾನ ಸ್ಪೈಸ್ ಜೆಟ್ ಹೊಸದಾಗಿ 24 ದೇಶಿ ಮಾರ್ಗಗಳ ಪಟ್ಟಿಯನ್ನು ಗುರುವಾರದಂದು ಪ್ರಕಟಿಸಿದೆ. ಫೆಬ್ರವರಿ ತಿಂಗಳಲ್ಲೇ ಈ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಅಜ್ಮೇರ್, ಜೈಸ್ಮಲೇರ್, ಅಹಮದಾಬಾದ್ ಹಾಗೂ ಬೆಂಗಳೂರು ನಗರಗಳಿಗೆ ಸ್ಪೈಸ್ ಜೆಟ್ ಸಂಪರ್ಕ ಒದಗಿಸಲಿದೆ. ಅಜ್ಮೇರ್ -ಅಹಮದಾಬಾದ್, ಅಹಮದಾಬಾದ್ -ಅಮೃತ್ ಸರ್ ಮಾರ್ಗ ಸ್ಪೈಸ್ ಜೆಟ್ ಮಾತ್ರ ಚಾಲ್ತಿಯಲ್ಲಿರುವ ವಿಮಾನಯಾನ ಸಂಸ್ಥೆಯಾಗಿದೆ.

ಬೆಂಗಳೂರು-ವಿಜಯವಾಡ ಸೇರಿದಂತೆ ಸ್ಪೈಸ್ ಜೆಟ್ ಹೊಸ ಮಾರ್ಗಗಳು

ಗೋಲ್ಡನ್ ಸಿಟಿ ಜೈಸ್ಮಲೇರ್ ನಿಂದ ದೆಹಲಿ, ಅಹಮದಾಬಾದ್ ನಗರಕ್ಕೆ, ಅಹಮದಾಬಾದ್ -ಬೆಂಗಳೂರು, ಕೋಲ್ಕತಾ- ಗುವಾಹತಿ ಹಾಗೂ ಗುವಾಹತಿ-ದೆಹಲಿ ಮಾರ್ಗದಲ್ಲಿ ಪ್ರತಿ ದಿನ ವಿಮಾನಯಾನ ಇದೀಗ ಸಾಧ್ಯವಾಗಲಿದೆ.

ಅಹಮದಾಬಾದ್-ಬಗ್ದೊಗ್ರಾ ಹಾಗೂ ಚೆನ್ನೈ ಕೋಲ್ಕತಾ ನಡುವೆ ವಿಮಾನಗಳು ವಾರಕ್ಕೆ 3 ದಿನಗಳು, ಪಾಟ್ನಾ -ಬೆಂಗಳೂರು ವಾರಕ್ಕೆ ಎರಡು ಬಾರಿ, ಸೂರತ್ -ಚೆನ್ನೈ ನಡುವೆ ವಾರಕ್ಕೆ ನಾಲ್ಕು ಬಾರಿ ವಿಮಾನಯಾನ ಇರಲಿದೆ ಎಂದು ಸಂಸ್ಥೆ ಹೇಳಿದೆ.

ಇದಲ್ಲದೆ ಕೋಲ್ಕತ್ತಾದಿಂದ ಪಕ್ಯಾಂಗ್ ಮಾರ್ಗ, ದೆಹಲಿ- ಡೆಹ್ರಾಡೂನ್ ಮಾರ್ಗದಲ್ಲಿ ಸಂಚರಿಸಲಿವೆ ಎಂದು ಸ್ಪೈಸ್ ಜೆಟ್ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಹೇಳಿದ್ದಾರೆ.

   ತಾಳವಾಡಿ ಹಾಗೂ ಊಟಿ ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯ! | Vatal Nagaraj | Oneindia Kannada

   ಇದಲ್ಲದೆ ಮಾರ್ಚ್ ತಿಂಗಳಿನಿಂದ ಮುಂಬೈ-ಲೆಹ್, ಲೆಹ್-ಶ್ರೀನಗರ ಹಾಗೂ ಶ್ರೀನಗರ -ಮುಂಬೈ ಮಾರ್ಗದಲ್ಲಿ ನಾನ್ ಸ್ಟಾಪ್ ವಿಮಾನ ಸಂಚರಿಸಲಿದೆ. ಮುಂಬೈ -ರಾಜ್ ಕೋಟ್, ದೆಹಲಿ-ಧರ್ಮಶಾಲ, ಬೆಂಗಳೂರು- ವಿಜಯವಾಡ ವಿಭಾಗದಲ್ಲೂ ಹೊಸ ಮಾರ್ಗ ಆರಂಭವಾಗಲಿದೆ. ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 63 ತಾಣಗಳಿಗೆ ಪ್ರತಿದಿನ 600 ವಿಮಾನಗಳನ್ನು ಕಳಿಸುತ್ತಿದ್ದು, ಈ ಪೈಕಿ 54 ದೇಶಿ ನಿಲ್ದಾಣಗಳಿವೆ. (ಪಿಟಿಐ)

   English summary
   The new flights also include four new seasonal flights connecting Jaisalmer, the ‘Golden City’ of India, with Delhi and Ahmedabad, the airline said in a release.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X