• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಪೈಸ್ ಜೆಟ್ ಸಂಸ್ಥೆಯಿಂದ 20 ಹೊಸ ದೇಶಿ ವಿಮಾನ

|

ನವದೆಹಲಿ, ಜನವರಿ 31: ದೇಶದ ಪ್ರಮುಖ ವಿಮಾನಯಾನ ಸ್ಪೈಸ್ ಜೆಟ್ ಹೊಸದಾಗಿ 20 ದೇಶಿ ಮಾರ್ಗಗಳ ಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಈ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಹೊಸ ಮಾರ್ಗಗಳ ಪೈಕಿ 16 ಮಾರ್ಗಗಳು ಜೈಪುರದಿಂದ ದೇಶದ ವಿವಿಧ ನಗರಗಳಿಗೆ ಸಂಪರ್ಕ ಒದಗಿಸಲಿದೆ.

ಮಿಕ್ಕ ನಾಲ್ಕು ಹೊಸ ಮಾರ್ಗಗಳು: ಕೋಲ್ಕತ್ತಾದಿಂದ ಪಕ್ಯಾಂಗ್ ಮಾರ್ಗ, ದೆಹಲಿ- ಡೆಹ್ರಾಡೂನ್ ಮಾರ್ಗದಲ್ಲಿ ಸಂಚರಿಸಲಿವೆ ಎಂದು ಸ್ಪೈಸ್ ಜೆಟ್ ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಹೇಳಿದ್ದಾರೆ.

ಬೆಂಗಳೂರು-ವಿಜಯವಾಡ ಸೇರಿದಂತೆ ಸ್ಪೈಸ್ ಜೆಟ್ ಹೊಸ ಮಾರ್ಗಗಳು

''ದೇಶದ ಪ್ರಮುಖ ನಗರಗಳಿಂದ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ದೆಸೆಯಿಂದ ಈ ಮಾರ್ಗಗಳನ್ನು ಪ್ರಕಟಿಸಲಾಗಿದೆ" ಎಂದು ಶಿಲ್ಪಾ ಹೇಳಿದ್ದಾರೆ.

ಇದಲ್ಲದೆ ಮಾರ್ಚ್ ತಿಂಗಳಿನಿಂದ ಮುಂಬೈ-ಲೆಹ್, ಲೆಹ್-ಶ್ರೀನಗರ ಹಾಗೂ ಶ್ರೀನಗರ -ಮುಂಬೈ ಮಾರ್ಗದಲ್ಲಿ ನಾನ್ ಸ್ಟಾಪ್ ವಿಮಾನ ಸಂಚರಿಸಲಿದೆ. ಮುಂಬೈ -ರಾಜ್ ಕೋಟ್, ದೆಹಲಿ-ಧರ್ಮಶಾಲ, ಬೆಂಗಳೂರು- ವಿಜಯವಾಡ ವಿಭಾಗದಲ್ಲೂ ಹೊಸ ಮಾರ್ಗ ಆರಂಭವಾಗಲಿದೆ.

ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 63 ತಾಣಗಳಿಗೆ ಪ್ರತಿದಿನ 600 ವಿಮಾನಗಳನ್ನು ಕಳಿಸುತ್ತಿದ್ದು, ಈ ಪೈಕಿ 54 ದೇಶಿ ನಿಲ್ದಾಣಗಳಿವೆ. (ಪಿಟಿಐ)

English summary
Spicejet on Saturday said it will start 20 new domestic flights, including 16 services that will be connecting Jaipur to various cities of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X