ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್ ಜೆಟ್ ಸಂಸ್ಥೆಯಿಂದ ಆಗಸ್ಟ್ ತಿಂಗಳಲ್ಲಿ 16 ಹೊಸ ವಿಮಾನ ಮಾರ್ಗಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 01: ದೇಶದ ಕಡಿಮೆ ವೆಚ್ಚ ಪ್ರಯಾಣ ಒದಗಿಸುವ ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಹೊಸದಾಗಿ 16 ದೇಶಿ ಮಾರ್ಗಗಳ ಪಟ್ಟಿಯನ್ನು ಭಾನುವಾರದಂದು ಪ್ರಕಟಿಸಿದೆ. ಆಗಸ್ಟ್ 20ರಿಂದ ಈ ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಬೆಂಗಳೂರು -ವಿಶಾಖಪಟ್ಟಣಂ, ಮುಂಬೈ-ಕಿಶನ್ ಘರ್(ಅಜ್ಮೇರ್), ಗ್ವಾಲಿಯಾರ್ -ಜೈಪುರ್, ದೆಹಲಿ- ಬೆಳಗಾವಿ, ಗುಜರಾತಿನ ಭಾವ್ ನಗರ್ ಅಲ್ಲದೆ, ದೆಹಲಿ- ಜಮ್ಮು ಮಾರ್ಗದಲ್ಲಿ ಸ್ಪೈಸ್ ಜೆಟ್ ಮಾತ್ರ ಚಾಲ್ತಿಯಲ್ಲಿರುವ ವಿಮಾನಯಾನ ಸಂಸ್ಥೆಯಾಗಿದೆ. ಕಡಿಮೆ ಬಜೆಟ್ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 63 ತಾಣಗಳಿಗೆ ಪ್ರತಿದಿನ 600 ವಿಮಾನಗಳನ್ನು ಕಳಿಸುತ್ತಿದ್ದು, ಈ ಪೈಕಿ 54 ದೇಶಿ ನಿಲ್ದಾಣಗಳಿವೆ.

ಹೆಚ್ಚುವರಿ ವಿಮಾನಯಾನದ ಬಗ್ಗೆ ಮಾತನಾಡಿದ ಸ್ಪೈಸ್ ಜೆಟ್ ಸಿಒಒ ಶಿಲ್ಪಾ ಭಾಟಿಯಾ, ''ದೇಶಿ ವಿಮಾನಯಾನದ ವಿಸ್ತರಣಾ ಭಾಗವಾಗಿ, ತ್ವರಿತವಾಗಿ ಹೆಚ್ಚುವರಿ ವಿಮಾನಗಳನ್ನು ಒದಗಿಸಲು ಸಂಸ್ಥೆ ಮುಂದಾಗಿದೆ, ದೇಶದ ಪ್ರಮುಖ ನಗರಗಳಿಂದ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ದೆಸೆಯಿಂದ ಈ ಮಾರ್ಗಗಳನ್ನು ಪ್ರಕಟಿಸಲಾಗಿದೆ" ಎಂದಿದ್ದಾರೆ.

SpiceJet Announces 16 New Flights From August. Check Full Schedule and Other Details

ಈ ಹೊಸ ಮಾರ್ಗಗಳಿಗೆ ಬುಕ್ಕಿಂಗ್ ಮಾಡಬಯಸುವ ಪ್ರಯಾಣಿಕರು ಮೊಬೈಲ್ ಫೋನ್ ಅಪ್ಲಿಕೇಷನ್, ಸ್ಪೈಸ್ ಜೆಟ್ ಅಧಿಕೃತ ವೆಬ್ ತಾಣ ಹಾಗೂ ಇನ್ನಿತರ ಆನ್ ಲೈನ್ ಟ್ರಾವೆಲ್ ಏಜೆಂಟ್ ತಾಣಗಳ ಮೂಲಕ ಬುಕ್ ಮಾಡಬಹುದು. ಹೊಸ ವಿಮಾನಗಳು 737 ಬೋಯಿಂಗ್ ಹಾಗೂ ಕ್ಯೂ400 ಏರ್ ಕ್ರಾಫ್ಟ್ ಗಳನ್ನು ಹೊಂದಿವೆ.

ಮುಂಬೈ ಅಜ್ಮೇರ್ ಮಾರ್ಗದ ವಿಮಾನಗಳು ವಾರಕ್ಕೆ 4 ಬಾರಿ ಪ್ರಯಾಣಿಸಲಿವೆ. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸಂಚರಿಸಲಿವೆ.

ಭಾವ್ ನಗರ್-ದೆಹಲಿ ಹಾಗೂ ಭಾವ್ ನಗರ್ -ಮುಂಬೈ ವಿಮಾನವು ಮಂಗಳವಾರ ಹೊರತುಪಡಿಸಿ ವಾರದ ಮಿಕ್ಕೆಲ್ಲ ದಿನಗಳಂದು ಸಂಚರಿಸಲಿದೆ. ಭಾವ್ ನಗರ್ -ಸೂರತ್ ವಿಮಾನ ವಾರಕ್ಕೆ ಮೂರು ದಿನ ಗುರುವಾರ, ಶನಿವಾರ ಹಾಗೂ ಭಾನುವಾರ ಮಾತ್ರ ಸಂಚರಿಸಲಿದೆ.

SpiceJet Announces 16 New Flights From August. Check Full Schedule and Other Details

ಬೆಂಗಳೂರು- ವಿಶಾಖಪಟ್ಟಣಂ, ಬೆಳಗಾವಿ-ದೆಹಲಿ ನಡುವಿನ ವಿಮಾನಯಾನವು ಸೋಮವಾರ ಹಾಗೂ ಶುಕ್ರವಾರದಂದು ಮಾತ್ರ ಸಾಧ್ಯವಿದೆ. ದೆಹಲಿ ಹಾಗೂ ಜಮ್ಮು ನಡುವಿನ ಮಾರ್ಗದಲ್ಲಿ ಭಾನುವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಸಂಚರಿಸಲಿದೆ. ಜೈಪುರ-ಗ್ವಾಲಿಯರ್ ನಡುವಿನ ವಿಮಾನವು ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರದಂದು ಮಾತ್ರ ಸಂಚರಿಸಲಿದೆ.

2021ರಲ್ಲಿ ಹೊಸ ಮಾರ್ಗಗಳು: ಕೋಲ್ಕತ್ತಾದಿಂದ ಪಕ್ಯಾಂಗ್ ಮಾರ್ಗ, ದೆಹಲಿ- ಡೆಹ್ರಾಡೂನ್ ಮಾರ್ಗ ಸೇರಿದಂತೆ 20 ಕ್ಕೂ ಅಧಿಕ ಪ್ರವಾಸಿ ತಾಣ ಸಂಪರ್ಕಿಸುವ 20 ದೇಶಿ ಮಾರ್ಗಗಳಲ್ಲಿ ಸಂಚಾರವನ್ನು ಸ್ಪೈಸ್ ಜೆಟ್ ಆರಂಭಿಸಿತ್ತು.

ಮಾರ್ಚ್ ತಿಂಗಳಿನಿಂದ ಮುಂಬೈ-ಲೆಹ್, ಲೆಹ್-ಶ್ರೀನಗರ ಹಾಗೂ ಶ್ರೀನಗರ -ಮುಂಬೈ ಮಾರ್ಗದಲ್ಲಿ ನಾನ್ ಸ್ಟಾಪ್ ವಿಮಾನ ಸಂಚಾರ ಆರಂಭಗೊಂಡಿತ್ತು. ಮುಂಬೈ -ರಾಜ್ ಕೋಟ್, ದೆಹಲಿ-ಧರ್ಮಶಾಲ, ಬೆಂಗಳೂರು- ವಿಜಯವಾಡ ವಿಭಾಗದಲ್ಲೂ ಹೊಸ ಮಾರ್ಗ ಆರಂಭವಾಗಿದೆ.

SpiceJet Announces 16 New Flights From August. Check Full Schedule and Other Details

ಇದರ ಜೊತೆಗೆ ಗೋಲ್ಡನ್ ಸಿಟಿ ಜೈಸ್ಮಲೇರ್ ನಿಂದ ದೆಹಲಿ, ಅಹಮದಾಬಾದ್ ನಗರಕ್ಕೆ, ಅಹಮದಾಬಾದ್ -ಬೆಂಗಳೂರು, ಕೋಲ್ಕತಾ- ಗುವಾಹತಿ ಹಾಗೂ ಗುವಾಹತಿ-ದೆಹಲಿ ಮಾರ್ಗದಲ್ಲಿ ಪ್ರತಿ ದಿನ ವಿಮಾನಯಾನ ಇದೀಗ ಸಾಧ್ಯವಾಗಿದೆ.

ಅಹಮದಾಬಾದ್-ಬಗ್ದೊಗ್ರಾ ಹಾಗೂ ಚೆನ್ನೈ ಕೋಲ್ಕತಾ ನಡುವೆ ವಿಮಾನಗಳು ವಾರಕ್ಕೆ 3 ದಿನಗಳು, ಪಾಟ್ನಾ -ಬೆಂಗಳೂರು ವಾರಕ್ಕೆ ಎರಡು ಬಾರಿ, ಸೂರತ್ -ಚೆನ್ನೈ ನಡುವೆ ವಾರಕ್ಕೆ ನಾಲ್ಕು ಬಾರಿ ವಿಮಾನಯಾನ ಇರಲಿದೆ.

ಸ್ಪೈಸ್ ಜೆಟ್ ಬಗ್ಗೆ: ಹರ್ಯಾಣ ಮೂಲದ ಸ್ಪೈಸ್ ಜೆಟ್ 2005ರಿಂದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಡಿಮೆ ಬಜೆಟ್ ನಲ್ಲಿ ವಿಮಾನಯಾನ ಒದಗಿಸುವ ಸಂಸ್ಥೆಯಾಗಿದೆ. ಬೋಯಿಂಗ್ 737 ಮುಂದಿನ ಪೀಳಿಗೆಮತ್ತು ಬಂಬಾರ್ಡಿಯರ್ ಡ್ಯಾಶ್ 8 Q400 ಒಂದು ಶ್ರೇಣಿಯನ್ನು ಬಳಸಿಕೊಂಡು ಭಾರತೀಯ 34 ಮತ್ತು 7 ಅಂತಾರಾಷ್ಟ್ರೀಯ ನಗರಗಳು ಸೇರಿದಂತೆ 54 ಸ್ಥಳಗಳಿಗೆ ಹೆಚ್ಚು 270 ದೈನಿಕ ಹಾರಾಟಗಳನ್ನು ನಡೆಸುತ್ತದೆ ವಿಮಾನ. ಭಾರತದ ಎರಡನೇ ಅತಿದೊಡ್ಡ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿದೆ.

English summary
Budget airlines SpiceJet has announced 16 new flights from 20 August 2021 to a number of destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X