• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸವರನ್ ಗೋಲ್ಡ್‌ ಬಾಂಡ್ ಯೋಜನೆ ಇಂದಿನಿಂದ ಓಪನ್: ಬೆಲೆ ಜೊತೆಗೆ ಸಂಪೂರ್ಣ ಮಾಹಿತಿ

|

ನವದೆಹಲಿ, ಆಗಸ್ಟ್ 31: ಕೊರೊನಾವೈರಸ್ ಸೋಂಕಿನ ಭಯದ ನಡುವೆ ಆರ್‌ಬಿಐ 2021ರ ಆರ್ಥಿಕ ವರ್ಷದ ಸವರನ್ ಚಿನ್ನದ ಬಾಂಡ್ ಯೋಜನೆಯ ಆರನೇ ಮತ್ತು ಅಂತಿಮ ಹಂತದ ಯೋಜನೆಯನ್ನು ಸೋಮವಾರ ಚಂದಾದಾರಿಕೆಗಾಗಿ ತೆರೆಯಿತು. ಇಂದು ನಿಮಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಲು ಅವಕಾಶವಿದೆ.

   ಈ ವರ್ಷ ಒಂದೇ ಒಂದು 2000 ರೂಪಾಯಿ ನೋಟು ಪ್ರಿಂಟ್ ಮಾಡಿಲ್ಲ RBI | Oneindia Kannada

   ಎಸ್‌ಜಿಬಿ ಯೋಜನೆಯನ್ನು ಕೇಂದ್ರದ ಮಾರುಕಟ್ಟೆ ಎರವಲು ಕಾರ್ಯಕ್ರಮದ ಭಾಗವಾಗಿ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸುತ್ತದೆ.

   ಏನಿದು ಸವರನ್ ಗೋಲ್ಡ್ ಬಾಂಡ್? ಏನು ಪ್ರಯೋಜನ?

   ಸದ್ಯ ಷೇರುಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಹೂಡಿಕೆಗಳು ಸಾಕಷ್ಟು ವೇಗವಾಗಿ ಏರಿಳಿತವಾಗುತ್ತಿವೆ. ಇಂತಹ ಕಷ್ಟದ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಅನೇಕರು ಮುಂದಾಗುತ್ತಾರೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ರೂ ಸೇಫ್ ಅನ್ನೋದು ಹಲವರ ನಂಬಿಕೆ.

   ಹಾಗಿದ್ರೆ ಸರ್ಕಾರದ ಸವರನ್ ಗೋಲ್ಡ್‌ ಬಾಂಡ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ಓದಿ

   ಸವರಿನ್ ಗೋಲ್ಡ್‌ ಬಾಂಡ್‌ನಲ್ಲಿ ಸೆಪ್ಟೆಂಬರ್ 4 ರವರೆಗೆ ಹೂಡಿಕೆ

   ಸವರಿನ್ ಗೋಲ್ಡ್‌ ಬಾಂಡ್‌ನಲ್ಲಿ ಸೆಪ್ಟೆಂಬರ್ 4 ರವರೆಗೆ ಹೂಡಿಕೆ

   ನೀವು ಆಗಸ್ಟ್‌ 31ರಿಂದ ಸೆಪ್ಟೆಂಬರ್ 4ರವರೆಗೆ ಸವರಿನ್ ಗೋಲ್ಡ್‌ ಬಾಂಡ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಸೆಪ್ಟೆಂಬರ್ 8 ರಂದು ಬಾಂಡ್ ನೀಡಲಾಗುತ್ತದೆ.

   ಪ್ರತಿ ಗ್ರಾಂಗೆ ಬೆಲೆ ಎಷ್ಟು ನಿಗದಿಯಾಗಿದೆ?

   ಪ್ರತಿ ಗ್ರಾಂಗೆ ಬೆಲೆ ಎಷ್ಟು ನಿಗದಿಯಾಗಿದೆ?

   ಈ ಬಾಂಡ್ ಯೋಜನೆಯಲ್ಲಿ ಸರ್ಕಾರವು ಚಿನ್ನದ ಬೆಲೆಯನ್ನು ಪ್ರತಿ ಗ್ರಾಂಗೆ 5,117 ರೂ. ಅಂದರೆ 10 ಗ್ರಾಂಗೆ 51,170 ರೂ. ಎಂದು ನಿಗದಿಪಡಿಸಿದೆ. ಆದರೆ ನೀವು ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌ಗಳನ್ನು ಖರೀದಿಸುವಾಗ 10 ಗ್ರಾಂ ಬೆಲೆ 50,670 ರೂ.

   ಕನಿಷ್ಟ 1ಗ್ರಾಂ ಹೂಡಿಕೆಗೆ ಅವಕಾಶ

   ಕನಿಷ್ಟ 1ಗ್ರಾಂ ಹೂಡಿಕೆಗೆ ಅವಕಾಶ

   ಕನಿಷ್ಠ ಅನುಮತಿಸುವ ಹೂಡಿಕೆ 1 ಗ್ರಾಂ ಚಿನ್ನ. ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು. ಯೋಜನೆಯ ಮುಕ್ತಾಯ ಅವಧಿ 8 ವರ್ಷಗಳು.

   ಬಡ್ಡಿ ಎಷ್ಟು ಸಿಗುತ್ತೆ?

   ಬಡ್ಡಿ ಎಷ್ಟು ಸಿಗುತ್ತೆ?

   ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.

   ನೀವು ಇಲ್ಲಿಂದ ಸವರನ್ ಚಿನ್ನವನ್ನು ಖರೀದಿಸಬಹುದು

   ನೀವು ಇಲ್ಲಿಂದ ಸವರನ್ ಚಿನ್ನವನ್ನು ಖರೀದಿಸಬಹುದು

   ಜನರು ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು.

   English summary
   The sixth and last tranche of the Sovereign Gold Bond (SGB) scheme for this financial year will open for subscription on Monday for five days. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X