ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವರನ್ ಗೋಲ್ಡ್‌ ಬಾಂಡ್ ಯೋಜನೆ 2020-21: ಇಂದಿನಿಂದ ಓಪನ್, ಪ್ರಮುಖ ಮಾಹಿತಿ ತಿಳಿದುಕೊಳ್ಳಿ..

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಕೊರೊನಾವೈರಸ್ ಅನಿಶ್ಚಿತತೆ ನಡುವೆ ಆರ್‌ಬಿಐ 2021ರ ಆರ್ಥಿಕ ವರ್ಷದ ಸವರನ್ ಗೋಲ್ಡ್‌ ಬಾಂಡ್ ಮುಂದಿನ ಸಿರೀಸ್ ಪ್ರಕಟಿಸಿದೆ.

ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಸವರಿನ್ ಗೋಲ್ಡ್‌ ಬಾಂಡ್ ವಿತರಣಾ ಬೆಲೆಯನ್ನು ಪ್ರತಿ ಗ್ರಾಂಗೆ 5,000 ರೂಪಾಯಿ ಎಂದು ನಿಗದಿಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಅರ್ಜಿಯ ವಿರುದ್ಧ ಪಾವತಿ ಮಾಡುವ ಹೂಡಿಕೆದಾರರು ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ಪಡೆಯಲಿದ್ದು, ಅವರಿಗೆ ವಿತರಣಾ ಬೆಲೆ 4,950 ರೂಪಾಯಿ ಆಗಿದೆ.

ಜನವರಿ 1, 2021ಕ್ಕೆ ಯೋಜನೆ ಮುಕ್ತಾಯ

ಜನವರಿ 1, 2021ಕ್ಕೆ ಯೋಜನೆ ಮುಕ್ತಾಯ

ಸವರನ್ ಗೋಲ್ಡ್ ್ಬಾಂಡ್ ಯೋಜನೆ 2020-21ರ ಸರಿಈಸ್ IX ಚಂದಾದಾರಿಕೆಯು 1 ಜನವರಿ 2021 ರಂದು ಕೊನೆಗೊಳ್ಳುತ್ತದೆ. ಬಾಂಡ್ ಚಂದಾದಾರಿಕೆ ಆರಂಭಕ್ಕೂ ಮುನ್ನಾ ಕಳೆದ ವಾರದ ಮೂರು ವ್ಯವಹಾರದ ದಿನಗಳು (ಡಿಸೆಂಬರ್ 22ರಿಂದ 24ನೇ ತಾರೀಕು) 999 ಶುದ್ಧತೆಯ ಚಿನ್ನದ ಸರಾಸರಿ ದರವನ್ನು ಗಣನೆಗೆ ತೆಗೆದುಕೊಂಡು, ಸರಾಸರಿ ಮುಕ್ತಾಯ ದರದ ಆಧಾರದಲ್ಲಿ (ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ ಅಸೋಸಿಯೇಷನ್ ಲಿ.) ಬಾಂಡ್ ದರವನ್ನು ನಿಗದಿ ಮಾಡಲಾಗುತ್ತದೆ.

ಹೊಸ ವರ್ಷಕ್ಕೆ ಚಿನ್ನದ ಬೆಲೆ 10 ಗ್ರಾಂ 63,000 ರೂ. ತಲುಪುವ ಸಾಧ್ಯತೆ!ಹೊಸ ವರ್ಷಕ್ಕೆ ಚಿನ್ನದ ಬೆಲೆ 10 ಗ್ರಾಂ 63,000 ರೂ. ತಲುಪುವ ಸಾಧ್ಯತೆ!

ಮೆಚ್ಯುರಿಟಿ ಅವಧಿ ಎಷ್ಟು

ಮೆಚ್ಯುರಿಟಿ ಅವಧಿ ಎಷ್ಟು

ಸವರನ್‌ ಗೋಲ್ಡ್‌ ಬಾಂಡ್ 2020-21 ಅನ್ನು ಭಾರತೀಯ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ ಎಂಟು ವರ್ಷಗಳಾಗಿದ್ದು, ಐದು ವರ್ಷದ ಬಳಿಕ ನಿರ್ಗಮನದ ಆಯ್ಕೆಯು ಇದೆ.

ಕನಿಷ್ಟ 1ಗ್ರಾಂ ಹೂಡಿಕೆಗೆ ಅವಕಾಶ

ಕನಿಷ್ಟ 1ಗ್ರಾಂ ಹೂಡಿಕೆಗೆ ಅವಕಾಶ

ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯು 1 ಗ್ರಾಂ ಆಗಿದ್ದು, ಆರ್ಥಿಕ ವರ್ಷದಲ್ಲಿ ಅರ್ಹ ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳು ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕೆಜಿವರೆಗೆ ಚಿನ್ನವನ್ನು ಪಡೆಯಬಹುದು. ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳು ಹಣಕಾಸು ವರ್ಷದಲ್ಲಿ 20 ಕಿ.ಗ್ರಾಂ ವರೆಗೆ ಖರೀದಿಸಬಹುದು.

ಬಡ್ಡಿ ಎಷ್ಟು ಸಿಗುತ್ತದೆ?

ಬಡ್ಡಿ ಎಷ್ಟು ಸಿಗುತ್ತದೆ?

ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.

ನೀವು ಇಲ್ಲಿಂದ ಸವರನ್ ಗೋಲ್ಡ್ ಬಾಂಡ್ ಖರೀದಿಸಬಹುದು

ನೀವು ಇಲ್ಲಿಂದ ಸವರನ್ ಗೋಲ್ಡ್ ಬಾಂಡ್ ಖರೀದಿಸಬಹುದು

ಜನರು ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು.

ಇನ್ನು ಭೌತಿಕವಲ್ಲದ ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಪರಿಣಾಮಕಾರಿ ಆಯ್ಕೆಯಾಗಿದೆ. 2015ರಲ್ಲಿ ಮೊದಲ ಬಾರಿಗೆ ಈ ಭೌತಿಕ ಚಿನ್ನದ ಬೇಡಿಕೆ ಕಡಿಮೆ ಮಾಡಲು ಸವರನ್ ಗೋಲ್ಡ್‌ ಬಾಂಡ್ ಯೋಜನೆಯನ್ನು ಪ್ರಾರಂಭಿಸಲಾಯಿತು.

English summary
RBI has fixed the issue price for the next series of Sovereign gold bonds. Here are important things to know about sovereign gold bond scheme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X