ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್‌ಜಿ ಪ್ರಿಯರಿಗೆ ಖುಷಿ ಸುದ್ದಿ: ಗೇಮ್ ಖರೀದಿಗೆ ಮುಕೇಶ್ ಅಂಬಾನಿ ಒಲವು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 21: ಚೀನೀ ಆಪ್ ಪಬ್‌ಜಿ ನಿಷೇಧ ಮಾಡಿರುವುದು ಸಾವಿರಾರು ಮಂದಿಯನ್ನು ನಿರಾಶೆಯುಂಟುಮಾಡಿದೆ. ಚೀನಾದ ಆಪ್‌ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರುತ್ತಿರುವುದರಿಂದ ಪಬ್‌ಜಿ ಸೇರಿದಂತೆ ಅನೇಕ ಆಪ್‌ಗಳು ತಾತ್ಕಾಲಿಕವಾಗಿ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ಇನ್ನು ಕೆಲವು ಆಪ್‌ಗಳು ಮಾಲೀಕತ್ವ ಮಾರಾಟ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಈ ನಡುವೆ ಪಬ್‌ಜಿ ಆಟಗಾರರು ಮತ್ತು ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ರಿಲಾಯನ್ಸ್ ಜಿಯೋ ಗೇಮ್ ಮೂಲಕ ಪಬ್‌ಜಿ ಆಟವು ಮತ್ತೆ ಲಭ್ಯವಾಗುವ ಸಾಧ್ಯತೆ ಇದೆ.

ಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗಪಬ್‌ಜಿ ಆಡಲು ಅಜ್ಜನ ಖಾತೆಯಿಂದಲೇ 2.3 ಲಕ್ಷ ರೂ. ಎಗರಿಸಿದ ಮೊಮ್ಮಗ

ಪ್ಲೇಯರ್ ಅನ್‌ನೌನ್ ಬ್ಯಾಟ್ಲ್‌ಗ್ರೌಂಡ್ಸ್ (ಪಬ್‌ಜಿ) ರೂವಾರಿ ದಕ್ಷಿಣ ಕೊರಿಯಾ ಕಂಪೆನಿಯ ಘಟಕವು ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋದೊಂದಿಗೆ ಜತೆಗೂಡಿ ಭಾರತದಲ್ಲಿ ತನ್ನ ಕಾರ್ಯವನ್ನು ಪುನಃ ಆರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಗೇಮಿಂಗ್ ಕಂಪೆನಿಯು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಜತೆ ಮಾತುಕತೆ ನಡೆಸುತ್ತಿದ್ದು, ಭಾರತದಲ್ಲಿ ತನ್ನ ಗೇಮ್‌ಅನ್ನು ಮತ್ತೆ ಸಕ್ರಿಯಗೊಳಿಸಲು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಮುಂದೆ ಓದಿ.

ಅಧಿಕೃತ ಹೇಳಿಕೆ ಇಲ್ಲ

ಅಧಿಕೃತ ಹೇಳಿಕೆ ಇಲ್ಲ

ಈ ಬಹು ಆಟಗಾರರ ಆಟವು ಪ್ರಸ್ತುತ ದೇಶದಲ್ಲಿ ನಿಷೇಧ ಎದುರಿಸುತ್ತಿದೆ. ಆದಾಯ ಹಂಚಿಕೆ ಮತ್ತು ಆಟವನ್ನು ಮತ್ತಷ್ಟು ಪ್ರಾದೇಶಿಕಗೊಳಿಸುವ ನಿಟ್ಟಿನಲ್ಲಿ ಎರಡು ಕಂಪೆನಿಗಳ ನಡುವೆ ವ್ಯಾವಹಾರಿಕ ಮಾತುಕತೆಯ ಹಂತಕ್ಕೆ ಬರಲಾಗಿದೆ. ಆದರೆ ಇದರ ಬಗ್ಗೆ ರಿಲಯನ್ಸ್ ಜಿಯೋ ಅಥವಾ ಪಬ್‌ಜಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತಾತ್ಕಾಲಿಕವಾಗಿ PUBG ಮೇಲೆ ನಿಷೇಧ ಹೇರಿದ ಪಾಕಿಸ್ತಾನತಾತ್ಕಾಲಿಕವಾಗಿ PUBG ಮೇಲೆ ನಿಷೇಧ ಹೇರಿದ ಪಾಕಿಸ್ತಾನ

ಎರಡೂ ಕಂಪೆನಿಗೆ ಲಾಭ

ಎರಡೂ ಕಂಪೆನಿಗೆ ಲಾಭ

ರಿಲಯನ್ಸ್ ಜಿಯೋ ಮತ್ತು ಪಬ್‌ಜಿಗಳು ಜತೆಗೂಡಿ ಬರುವುದು ಪರಸ್ಪರ ಲಾಭದ ಅಂಶಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಪಬ್‌ಜಿ ತನ್ನ ಅತ್ಯಂತ ವಿಶಾಲ ಮಾರುಕಟ್ಟೆಗಳಲ್ಲಿ ಒಂದಾದ ಭಾರತೀಯ ಮಾರುಕಟ್ಟೆಯನ್ನು ನಿಭಾಯಿಸಲಿದ್ದರೆ, ರಿಲಯನ್ಸ್ ಭಾರತದಲ್ಲಿನ ಆನ್‌ಲೈನ್ ಗೇಮಿಂಗ್‌ನಲ್ಲಿ ತನ್ನ ಹೆಜ್ಜೆ ಇರಿಸುವ ದೊಡ್ಡ ಅವಕಾಶವನ್ನು ಪಡೆದುಕೊಳ್ಳಲಿದೆ.

ಗೇಮಿಂಗ್‌ನತ್ತ ಅಂಬಾನಿ ಚಿತ್ತ

ಗೇಮಿಂಗ್‌ನತ್ತ ಅಂಬಾನಿ ಚಿತ್ತ

ದೇಶದ ಹೆಚ್ಚಿನ ಮನರಂಜನಾ ಮಾಧ್ಯಮಗಳಿಗಿಂತಲೂ ಆನ್‌ಲೈನ್ ಗೇಮಿಂಗ್ ದೊಡ್ಡದಾಗುತ್ತಿದೆ. ಹೀಗಾಗಿ ಪ್ರಸಕ್ತ ವರ್ಷ ಅದರ ಮೇಲೆ ಹೆಚ್ಚು ಗಮನ ಹರಿಸಲಾಗುವುದು ಎಂದು ಮುಕೇಶ್ ಅಂಬಾನಿ ಫೆಬ್ರವರಿಯಲ್ಲಿ ತಿಳಿಸಿದ್ದರು. ಅದರಂತೆ ಜಿಯೋದಿಂದ ಹೊಸ ಗೇಮಿಂಗ್‌ಗಳನ್ನು ನೀಡುವ ಮೊದಲು ಪಬ್‌ಜಿಗೆ ಮರುಜೀವ ನೀಡುವ ಅವಕಾಶವನ್ನು ಅದು ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಭಾರತದಲ್ಲಿ ಆದಾಯ ಕಡಿಮೆ

ಭಾರತದಲ್ಲಿ ಆದಾಯ ಕಡಿಮೆ

ಸೆನ್ಸಾರ್ ಟವರ್ ವರದಿ ಪ್ರಕಾರ ಭಾರತದಲ್ಲಿ 175 ಮಿಲಿಯನ್ ಪಬ್‌ಜಿ ಅಪ್ಲಿಕೇಷನ್ ಬಳಸಲಾಗುತ್ತಿದೆ. ಇಡೀ ಜಗತ್ತಿನ ಪಬ್‌ಜಿ ಇನ್‌ಸ್ಟಾಲೇಷನ್‌ಗಳ ಪೈಕಿ ಭಾರತವೇ ಶೇ 24ರಷ್ಟು ಪಾಲು ಹೊಂದಿದೆ. ಇದು ಈ ಆಟಕ್ಕೆ ಭಾರತ ಭಾರಿ ದೊಡ್ಡ ಮಾರುಕಟ್ಟೆಯಾಗಿದೆ ಎಂಬುದಕ್ಕೆ ಸಾಕ್ಷಿ. ಆದರೂ ಪಬ್‌ಜಿ ಆದಾಯ ಸೃಷ್ಟಿಸುತ್ತಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ ಎನ್ನುವುದು ವಿಶೇಷ.

ಭವಿಷ್ಯದ ಮಾರುಕಟ್ಟೆಗೆ ಹೊಡೆತ

ಭವಿಷ್ಯದ ಮಾರುಕಟ್ಟೆಗೆ ಹೊಡೆತ

ಅಮೆರಿಕ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಪಬ್‌ಜಿಯ ಅತ್ಯಧಿಕ ಆದಾಯ ಸೃಷ್ಟಿಯಾಗುತ್ತಿದೆ. ಚೀನಾದ ಆಪ್ ಎಂಬ ಕಾರಣಕ್ಕೆ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ ಭಾರತದಲ್ಲಿನ ಭವಿಷ್ಯದ ಅವಕಾಶಗಳನ್ನು ಕಳೆದುಕೊಂಡಿದೆ. ಜಗತ್ತಿನ ಅತ್ಯಂತ ವೇಗದ ಗೇಮಿಂಗ್ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ ಸದ್ಯಕ್ಕೆ ಅಸ್ತಿತ್ವ ಕಳೆದುಕೊಂಡಿರುವ ಪಬ್‌ಜಿಯ ಭವಿಷ್ಯದ ಮಾರುಕಟ್ಟೆಯನ್ನು ಮತ್ತೆ ಸೃಷ್ಟಿಸುವುದು ಸವಾಲಿನ ಸಂಗತಿ ಎನ್ನಲಾಗಿದೆ.

English summary
Sources said, Mukesh Ambani's Reliance Jio in talks with South Korean company to buy PUBG for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X