ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಮಾಡದ ಇನ್ಫೋಸಿಸ್ ಸಿಬ್ಬಂದಿ ನೌಕರಿಗೆ ಕುತ್ತು?

|
Google Oneindia Kannada News

ನವದೆಹಲಿ, ಆಗಸ್ಟ್, 23: ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್(ಆರ್ ಬಿಎಎಸ್) ಜತೆಗಿನ ಗುತ್ತಿಗೆ ಒಪ್ಪಂದ ರದ್ದಾದ ಕಾರಣಕ್ಕೆ ದೇಶದ ಪ್ರಮುಖ ಐಟಿ ದಿಗ್ಗಜ ಇನ್ಫೋಸಿಸ್ 500 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ ಎಂಬ ವರದಿಯನ್ನು ಸಂಸ್ಥೆ ಅಲ್ಲಗಳೆದಿದೆ.

ಅದಕ್ಷತೆ ಮತ್ತು ಅಶಿಸ್ತಿನ ಕಾರಣಕ್ಕೆ ಕೆಲ ಉದ್ಯೋಗಿಗಳಿಗೆ ಸಂಸ್ಥೆ ತೊರೆಯಲು ಹೇಳಲಾಗಿದೆ ವಿನಃ ಕೆಲಸದಿಂದ ವಜಾ ಮಾಡಿಲ್ಲ ಎಂದು ಇನ್ಫೋಸಿಸ್‌ ಸ್ಪಷ್ಟಪಡಿಸಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ 500 ಸಿಬ್ಬಂದಿ ವಜಾ ವರದಿ ಸತ್ಯಕ್ಕೆ ದೂರವಾಗಿದ್ದು ಎಂದು ಹೇಳಿದೆ.[ರಾಯರ ಸೇವೆಯಲ್ಲಿ ಸರಳತೆಯ ಸಾಕಾರ 'ಮೂರ್ತಿ']

 Some Infosys techies fired for non-performance, indiscipline

ಆರ್‌ಬಿಎಸ್‌ ಗುತ್ತಿಗೆ ರದ್ದಾಗಿರುವುದರಿಂದ ಆಗಿರುವ ಆರ್ಥಿಕ ನಷ್ಟ ಸರಿದೂಗಿಸಲು 3 ಸಾವಿರದಷ್ಟು ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹಿಂದೆ ವರದಿಯಾಗಿತ್ತು. ಇದೀಗ 500 ಜನರನ್ನು ತೆಗೆದು ಹಾಕಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಎಲ್ಲ ಸುದ್ದಿಗಳು ಸತ್ಯಕ್ಕೆ ದೂರ ಎಂದು ಸಂಸ್ಥೆ ತಿಳಿಸಿದೆ.[ಆರ್ ಬಿ ಎಸ್ ಜತೆಗಿನ ಇನ್ಫಿ ಒಪ್ಪಂದ ರದ್ದು]

ಆರ್ ಬಿಎಸ್ ನೊಂದಿಗಿನ ಒಪ್ಪಂದ ರದ್ದಾದ ನಂತರ ಇನ್ಫಿ ಷೇರುಗಳು ಸಹ ಕುಸಿತ ಕಂಡಿದ್ದವು. ಅಲ್ಲದೇ ಸಿಬ್ಬಂದಿಗಳಲ್ಲಿಯೂ ಆತಂಕ ಎದುರಾಗಿತ್ತು. ಆದರೆ ಈಗ ಸ್ವತಃ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

English summary
Some Infosys employees were recently sacked for non-performance and indiscipline, the software major said on Monday. "There are no layoffs at Infosys. There have been a few separations that are in response to performance and disciplinary issues, which take place on an ongoing basis and is no different from previous years," the city-based company said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X