ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಕಾಮರ್ಸ್ ಸ್ನಾಪ್ ಬಿಜ್ ನಿಂದ 72 ಲಕ್ಷ ಡಾಲರ್ ನಿಧಿ ಸಂಗ್ರಹ

By Mahesh
|
Google Oneindia Kannada News

ಬೆಂಗಳೂರು, ಜ. 22: ರೀಟೇಲ್ ತಂತ್ರಜ್ಞಾನ ಕಂಪನಿ ಸ್ನಾಪ್ ಬಿಜ್, ಜಂಗಲ್ ವೆಂಚರ್ಸ್, ಟೌರಸ್ ವ್ಯಾಲ್ಯೂ ಕ್ರಿಯೇಷನ್, ಕೊನ್ಲಿ ವೆಂಚರ್ಸ್ ಮತ್ತು ಬ್ಲೂಮ್ ವೆಂಚರ್ಸ್‍ನಿಂದ 72 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ. ಸಂಗ್ರಹಿಸಿದ ನಿಧಿಯನ್ನು ಕಂಪನಿ ಬೆಳವಣಿಗೆ ಮತ್ತು ಪ್ರಮುಖ ನಗರಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಬಳಸಲಾಗುತ್ತದೆ.

ರೀಟೇಲ್ ತಂತ್ರಜ್ಞಾನ ಕಂಪನಿ ಸ್ನಾಪ್ ಬಿಜ್, ಜಂಗಲ್ ವೆಂಚರ್ಸ್, ಟೌರಸ್ ವ್ಯಾಲ್ಯೂ ಕ್ರಿಯೇಷನ್, ಕೊನ್ಲಿ ವೆಂಚರ್ಸ್ ಮತ್ತು ಬ್ಲೂಮ್ ವೆಂಚರ್ಸ್ ನಿಂದ 72 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ. ಸಂಗ್ರಹಿಸಿದ ನಿಧಿಯನ್ನು ಕಂಪನಿ ಬೆಳವಣಿಗೆ ಮತ್ತು ಪ್ರಮುಖ ನಗರಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಬಳಸಲಾಗುತ್ತದೆ.[ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್, 'ನೋ ವೆಬ್ ಸರ್ವೀಸ್']

ಕಂಪನಿ ಈ ಹಿಂದೆ ಕ್ವಾಲ್‍ಕಾಮ್, ಜಂಗಲ್ ವೆಂಚರ್ಸ್, ಟೌರಸ್ ವ್ಯಾಲ್ಯೂ ಕ್ರಿಯೇಷನ್, ಸಿಂಗಪುರ ನ್ಯಾಷನಲ್ ರಿಸರ್ಚ್ ಫೌಂಡೇಷನ್ ಮತ್ತು ಬ್ಲ್ಯೂಮ್ ವೆಂಚರ್ಸ್ ನಿಂದ 17 ಲಕ್ಷ ಡಾಲರ್ ನಿಧಿ ಸಂಗ್ರಹಿಸಿತ್ತು.

ಸ್ನಾಪ್ ಬಿಜ್ ಈಗಾಗಲೆ ಮುಂಬೈ, ಪುಣೆ, ದಿಲ್ಲಿ, ಬೆಂಗಳೂರುಗಳಲ್ಲಿ ಸಾವಿರಾರು ಸಾಂಪ್ರದಾಯಿಕ ರೀಟೇಲ್ ಮಳಿಗೆಗಳಿಗೆ ತನ್ನ ತಾಂತ್ರಿಕ ಪರಿಹಾರದ ಮೂಲಕ ಸೇವೆ ವರ್ಗಾಯಿಸಿದೆ. ಸ್ನಾಪ್ ಬಿಜ್ ಎಲ್ಲ ಷೇರುದಾರರಿಗೆ ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ. ಮಿತದರದ, ಆಂಡ್ರಾಯ್ಡ್ ಆಧಾರಿತ, ಕ್ಲೌಡ್ ಸಂಪರ್ಕ ಹೊಂದಿದ ವಹಿವಾಟು ವೇದಿಕೆ. ಈ ಸೇವೆ ಟ್ಯಾಬ್ಲೆಟ್, ಬಾರ್ ಕೋಡ್ ಸ್ಕಾನರ್, ಪ್ರಿಂಟರ್ ಮತ್ತು ಇಂಟಲಿಜೆಂಟ್ ಕನ್‍ಸ್ಯೂಮರ್ ಫೇಸಿಂಗ್ ಎಲ್‍ಇಡಿ ಡಿಸ್‍ಪ್ಲೆ ಹೊಂದಿದೆ.[ಸ್ನ್ಯಾಪ್‌ಡೀಲ್ ಮತ್ತು ಶಾಪರ್ ಸ್ಟಾಪ್ ನಡುವೆ ಒಪ್ಪಂದ]

SnapBizz Raises $7.2M from Jungle Ventures and Others

'ನಮ್ಮ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಹೂಡಿಕೆದಾರರು ಆಸಕ್ತಿ ತೋರಿಸಿರುವುದು ನಮ್ಮಲ್ಲಿ ಇನ್ನಷ್ಟು ವಿಶ್ವಾಸ ಮೂಡಿಸಿದೆ. ಬೃಹತ್ ರೀಟೇಲ್ ಮತ್ತು ಆನ್‍ಲೈನ್ ಪ್ರವರ್ತಕರು ಯಾವುದೇ ಬ್ರ್ಯಾಂಡ್ ವಹಿವಾಟಿನಲ್ಲಿ ಶೇ.10-15ರಷ್ಟು ಮಾತ್ರ. ಉಳಿದ ಶೇ.90ರಷ್ಟು ಸಾಂಪ್ರದಾಯಿಕ ಮಾರಾಟದಿಂದಲೇ ಆಗುತ್ತದೆ.

ಈ ಹಂತದಲ್ಲಿ ಬ್ರ್ಯಾಂಡ್ ಮತ್ತು ಗ್ರಾಹಕ ಹಾಗೂ ರೀಟೇಲರ್ ನಡುವಣ ಸಂಪರ್ಕ ಅತ್ಯಂತ ಕ್ಷೀಣವಾದುದು. ನಾವು ಈ ಅಂತರವನ್ನು ಕಡಿಮೆ ಮಾಡಿ ಕಿರಾಣಿ ಅಂಗಡಿಗಳ ನೋವನ್ನು ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದು ಸ್ನಾಪ್‍ಬಿಜ್ ಸಂಸ್ಥಾಪಕ ಮತ್ತು ಸಿಇಒ ಪ್ರೇಮ್ ಕುಮಾರ್ ಹೇಳಿದರು.['ಸೆಂಡ್ ಮೈ ಗಿಫ್ಟ್' ಗೆ ಚಾಲನೆ ನೀಡಿದ ಹೃತಿಕ್ ರೋಷನ್]

'ನಾವು ಸ್ನಾಪ್ ಬಿಜ್ ವಹಿವಾಟು ಮಾದರಿಯಿಂದ ತೃಪ್ತಿಗೊಂಡಿದ್ದೇವೆ. ಇದು ಕಿರಾಣಿ ಅಂಗಡಿಗಳಿಗೆ ಸಿದ್ಧ ತಂತ್ರಜ್ಞಾನ ಒದಗಿಸುತ್ತದೆ. ಇದು ಭಾರತದ ರೀಟೇಲ್ ಬೆಳವಣಿಗೆಯಲ್ಲಿ ಬೃಹತ್ ಪಾತ್ರ ವಹಿಸುತ್ತದೆ ಎಂದು ನಂಬಿದ್ದೇವೆ. ಪ್ರೇಮ್ ಮತ್ತು ಅವರ ತಂಡ ಮಾರುಕಟ್ಟೆಯ ನಾನಾ ಮಜಲುಗಳಲ್ಲಿ ಪ್ರಬಲವಾದ ಅನುಭವ ಹೊಂದಿದೆ. ಅಲ್ಪ ಅವಧಿಯಲ್ಲಿ ಅತ್ಯುತ್ತಮ ಬೆಳವಣಿಗೆ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ಆತ್ಮವಿಶ್ವಾಸವಿದೆ' ಎಂದು ಜಂಗಲ್ ವೆಂಚರ್ಸ್ ನ ವ್ಯವಸ್ಥಾಪಕ ಪಾಲುದಾರ ಡೇವಿಡ್ ಗೊವ್‍ಡೆ ಹೇಳಿದ್ದಾರೆ.[ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!]

ಸ್ನಾಪ್ ಬಿಜ್ ರೀಟೇಲರ್ ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ವಾವಲಂಬಿಗಳನ್ನಾಗಿಸುತ್ತದೆ. ಜೊತೆಗೆ ಅವರ ಸಾಮಥ್ರ್ಯ ಮತ್ತು ಲಾಭವನ್ನು ಹೆಚ್ಚಿಸುತ್ತದೆ. ಡಿಜಿಟಲ್ ಸೇರ್ಪಡೆಯೊಂದಿಗೆ ಡಿಜಿಟಲ್ ಇಂಡಿಯಾಗೆ ಕೊಡುಗೆ ನೀಡುತ್ತದೆ.

'ಸ್ನಾಪ್ ಬಿಜ್ ಎಫ್‍ಎಂಸಿಜಿ ಕಂಪನಿಗಳು, ಬ್ರ್ಯಾಂಡ್ ಗಳ ಪಾಲುದಾರಿಕೆಯೊಂದಿಗೆ ಕಿರಾಣಿ ಅಂಗಡಿಗಳಿಗೆ ಹೆಚ್ಚು ಹಣ ತರುತ್ತದೆ. ಈಗ ನಾವು ನಿರಂತರವಾಗಿ ಗ್ರಾಹಕರ ಜೊತೆ ಮತ್ತು ಮಳಿಗೆ ಹುಡುಕಾಟದಲ್ಲಿ ಮಗ್ನರಾಗಿದ್ದೇವೆ. ಅತ್ಯುತ್ತಮವಾಗಿ ಪ್ರಚಾರ ಮಾಡುತ್ತಿದ್ದೇವೆ ಎನ್ನುತ್ತಾರೆ ಸ್ನಾಪ್ ಬಿಜ್ ನ ಬ್ರ್ಯಾಂಡ್ ಚಟುವಟಿಕೆಗಳ ನಿರ್ದೇಶಕ ಚಿರಂತನ್ ಭಭ್ರ.

'ಕಿರಾಣಿ ಅಂಗಡಿಗಳು ಭಾರತದ ರೀಟೇಲ್ ವ್ಯವಸ್ಥೆಯ ಮುಖ. ಕಳೆದ ಕೆಲ ವರ್ಷಗಳಲ್ಲಿ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆಗಳು ಬಂದಿರುವುದು ಕಿರಾಣಿ ಅಂಗಡಿಗಳಿಗೆ ಹೊಡೆತ ನೀಡಿದೆ. ಈ ಸ್ಪರ್ಧೆಯ ನಡುವೆಯೂ ಕಿರಾಣಿ ಅಂಗಡಿಗಳು ದೇಶದ ಅತ್ಯಂತ ನಂಬಿಕಸ್ಥ ರೀಟೇಲ್ ಮಾದರಿ. ನಂಬಿಕೆ, ಮನವೊಲಿಕೆ, ಸರಳತೆ ಮತ್ತು ಸ್ಪರ್ಧಾತ್ಮಕ ದರದಂಥ ವಿಭಿನ್ನ ಬಲಗಳನ್ನು ಹೊಂದಿದ್ದಾರೆ. ಸ್ನಾಪ್ ಬಿಜ್ ಈ ಬಲದಿಂದ ಇನ್ನೊಂದು ಹೆಜ್ಜೆ ಮುಂದಿಡಲು ಅವರಿಗೆ ಸಹಾಯ ಮಾಡುತ್ತದೆ. ಅವರ ನಿರೀಕ್ಷೆಗಳನ್ನು ತಲುಪುವ ತಾಂತ್ರಿಕತೆ ನೀಡುತ್ತದೆ ಎಂದು ಪ್ರೇಮ್ ಕುಮಾರ್ ಹೇಳಿದರು.

English summary
Retail technology firm, SnapBizz has raised $7.2 million led by Jungle Ventures, Taurus Value Creation, Konly Venture and Blume Ventures. SnapBizz’s solution is present in traditional retail outlets in Mumbai, Pune, New Delhi, Bengaluru and Hyderabad via a technology solution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X