ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 2021ರಿಂದ ಸ್ಕೋಡಾ ಕಾರುಗಳ ಬೆಲೆ ಶೇ. 2.5ರಷ್ಟು ಹೆಚ್ಚಳ!

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳ ದೃಷ್ಟಿಯಿಂದ 2021 ರ ಜನವರಿ 1 ರಿಂದ ಕಾರುಗಳ ಬೆಲೆಯನ್ನು ಶೇಕಡಾ 2.5 ರಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ಯುರೋಪಿಯನ್ ಕಾರು ತಯಾರಕ ಸ್ಕೋಡಾ ಮಂಗಳವಾರ ತಿಳಿಸಿದೆ.

ದೇಶದ ಕೆಲವು ವಾಹನ ತಯಾರಕರು ಈಗಾಗಲೇ ತಮ್ಮ ವಿವಿಧ ಮಾಡೆಲ್‌ ಕಾರುಗಳ ಬೆಲೆಯನ್ನು ಜನವರಿ 1, 2021 ರಿಂದ ಏರಿಕೆ ಮಾಡುವುದಾಗಿ ಘೋಷಿಸಿದ್ದು, ಹೆಚ್ಚುತ್ತಿರುವ ಇನ್ಪುಟ್ ಮತ್ತು ವಸ್ತು ವೆಚ್ಚಗಳ ಕಾರಣದಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿವೆ.

ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?ಜನವರಿಯಿಂದ ಈ ಕಾರುಗಳ ಬೆಲೆ ಹೆಚ್ಚಳವಾಗಲಿದೆ: ಎಷ್ಟು ರೂಪಾಯಿ ಬೆಲೆ ಏರಿಕೆ?

"ಇತ್ತೀಚಿನ ದಿನಗಳಲ್ಲಿ ಜಾಗತಿಕ ಸರಕುಗಳ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಗಮನಾರ್ಹ ಚಂಚಲತೆಯಿಂದಾಗಿ ಉತ್ಪಾದನೆಗಾಗಿ ನಮ್ಮ ಒಳಹರಿವಿನ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ'' ಎಂದು ಸ್ಕೋಡಾ ಕಂಪನಿಯು ತಿಳಿಸಿದೆ.

Skoda Expected To Raise Car Prices By 2.5 Percent From January 1

"ಸ್ಕೋಡಾ ಆಟೋ ಇಂಡಿಯಾ ಈ ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸುತ್ತಿದೆ. ಹೀಗಾಗಿ ಜನವರಿ 1 ರಿಂದ ಅದರ ವ್ಯಾಪ್ತಿಯಲ್ಲಿ ಶೇಕಡಾ 2.5 ರಷ್ಟು ಬೆಲೆ ಏರಿಕೆಯನ್ನು ಪರಿಗಣಿಸುತ್ತಿದೆ" ಎಂದು ಸ್ಕೋಡಾ ಆಟೋ ಇಂಡಿಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ದೇಶೀಯ ಆಟೋ ದೈತ್ಯ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ , ಇಸುಜು ಮೋಟಾರ್ಸ್ ಮತ್ತು ಬಿಎಂಡಬ್ಲ್ಯು ಮೋಟಾರ್ಸ್ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ.

English summary
European car manufacturer Skoda on Tuesday said it is looking to hike car prices by up to 2.5 per cent from January 1, 2021 in view of increasing production costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X