• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ಪ್ರಶಸ್ತಿ 2019 ಪ್ರದಾನ ಮಾಡಿದ ಅಮಾರ್ತ್ಯ ಸೇನ್

|

ಬೆಂಗಳೂರು, ಜನವರಿ 07: ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ (ಐಎಸ್ ಎಫ್) ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ 2019ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ನೀಡಿ ಗೌರವಿಸಿತು.

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವೀಯತೆ, ಜೀವನ ವಿಜ್ಞಾನಗಳು, ಗಣಿತ ವಿಜ್ಞಾನ, ಬೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ಆರು ವಿಭಾಗಗಳಲ್ಲಿ ಗಣನೀಯ ಕೊಡುಗೆ ನೀಡಿದವರಿಗೆ ಪ್ರಶಸ್ತಿ ನೀಡಲಾಯಿತು. ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಪ್ರೊಫೆಸರ್ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಅಮಾರ್ತ್ಯ ಸೇನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರತಿ ವಿಭಾಗದ ಪ್ರಶಸ್ತಿ ಒಂದು ಅಪ್ಪಟ ಚಿನ್ನದ ಪದಕ, ಒಂದು ಫಲಕ ಮತ್ತು 1,00,000 ಅಮೆರಿಕನ್ ಡಾಲರ್ (ಅದಕ್ಕೆ ಸಮನಾದ ಭಾರತೀಯ ನಗದು)ಅನ್ನು ಒಳಗೊಂಡಿದೆ.

ಐಐಎಸ್ಸಿ ವಿಜ್ಞಾನಿಗಳು ಸೇರಿದಂತೆ 6 ಮಂದಿಗೆ ಇನ್ಫೋಸಿಸ್ ಪ್ರಶಸ್ತಿ

ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ವಿಜ್ಞಾನಿಗಳು, ಶಿಕ್ಷಣ ತಜ್ಷರು, ಉದ್ಯಮಿ ನಾಯಕರು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ ನ ಅಧ್ಯಕ್ಷ ಎಸ್.ಡಿ.ಶಿಬುಲಾಲ್, ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ, ನಂದನ್ ನೀಲೇಕಣಿ, ಟಿ.ವಿ.ಮೋಹನ್ ದಾಸ್ ಪೈ, ಎಸ್.ಗೋಪಾಲಕೃಷ್ಣನ್, ಕೆ.ದಿನೇಶ್ ಮತ್ತು ಶ್ರೀನಾಥ್ ಬಟ್ನಿ ಉಪಸ್ಥಿತರಿದ್ದರು.

ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನಕ್ಕಾಗಿ ಪ್ರೊ.ಅರವಿಂದ್ (ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ); ಪ್ರೊಫೆಸರ್ ಅಕೀಲ್ ಬಿಲ್ಗ್ರಾಮಿ (ಕೊಲಂಬಿಯಾ ವಿಶ್ವವಿದ್ಯಾಲಯ) ಮಾನವಿಕತೆಗಾಗಿ; ಪ್ರೊ ಮೃಗಂಕಾ ಸುರ್ (ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಜೀವ ವಿಜ್ಞಾನಕ್ಕಾಗಿ; ಗಣಿತ ವಿಜ್ಞಾನಕ್ಕಾಗಿ ಪ್ರೊ. ಶ್ರೀನಿವಾಸ ಎಸ್. ಆರ್. ವರದನ್ (ನ್ಯೂಯಾರ್ಕ್ ವಿಶ್ವವಿದ್ಯಾಲಯ); ಭೌತಿಕ ವಿಜ್ಞಾನಕ್ಕಾಗಿ ಪ್ರೊ.ಶ್ರೀನಿವಾಸ್ ಕುಲಕರ್ಣಿ (ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ); ಮತ್ತು ಸಾಮಾಜಿಕ ವಿಜ್ಞಾನಕ್ಕಾಗಿ ಪ್ರೊ. ಕೌಶಿಕ್ ಬಸು (ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಮಾಜಿ ಎಸ್ವಿಪಿ, ವಿಶ್ವ ಬ್ಯಾಂಕ್) ಇವರನ್ನೊಳಗೊಂಡ ತೀರ್ಪುಗಾರರ ತಂಡ 200 ನಾಮನಿರ್ದೇಶಿತರ ಪೈಕಿ ವಿಜೇತರನ್ನು ಆಯ್ಕೆ ಮಾಡಿತು.

ವಿಜ್ಞಾನ ಫೌಂಡೇಷನ್ ನ ಎಸ್.ಡಿ.ಶಿಬುಲಾಲ್

ವಿಜ್ಞಾನ ಫೌಂಡೇಷನ್ ನ ಎಸ್.ಡಿ.ಶಿಬುಲಾಲ್

ಇನ್ಫೋಸಿಸ್ ಲಿಮಿಟೆಡ್ ನ ಸಹ ಸಂಸ್ಥಾಪಕ ಮತ್ತು ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ ನ ಎಸ್.ಡಿ.ಶಿಬುಲಾಲ್ ಮಾತನಾಡಿ, "ಈ ವರ್ಷದ ಇನ್ಫೋಸಿಸ್ ಪ್ರಶಸ್ತಿಗೆ ಭಾಜನರಾದವರು ಕಳೆದ ದಶಕಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಮುಂದುವರಿಸಿದ್ದಾರೆ. ಅವರ ಕೆಲಸಗಳು ಆಯಾ ಕ್ಷೇತ್ರಗಳ ಸಂಶೋಧನೆಯ ಹಾದಿಯನ್ನು ಮರು ರೂಪಿಸಿದ್ದು, ಆವಿಷ್ಕಾರಗಳ ಮಿತಿಯನ್ನು ವಿಸ್ತರಿಸಿದೆ. ಅವರ ಸಾಧನೆಗಳನ್ನು ಜಗತ್ತಿನ ಮುಂದಿರಿಸಲು ಮತ್ತು ಅವರಿಗೆ ಹೆಚ್ಚಿನ ಸಾಧನೆ ಮಾಡುವಂತೆ ಮತ್ತು ಇತರರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಂತೆ ಹಾರೈಸಲು ಹೆಮ್ಮೆಯಾಗುತ್ತಿದೆ'' ಎಂದರು.

ಪ್ರೊ. ಅಮಾರ್ತ್ಯ ಸೇನ್ ಮಾತನಾಡಿ

ಪ್ರೊ. ಅಮಾರ್ತ್ಯ ಸೇನ್ ಮಾತನಾಡಿ

ಕಾರ್ಯಕ್ರಮದ ಮುಖ್ಯ ಅತಿಥಿ ಪ್ರೊ. ಅಮಾರ್ತ್ಯ ಸೇನ್ ಮಾತನಾಡಿ, "ಸ್ನೇಹ ಮತ್ತು ಜ್ಞಾನದ ನಡುವೆ ಆಳವಾದ ಸಂಪರ್ಕವಿದೆ. ನಾವು ಪರಸ್ಪರರಿಂದ ಕಲಿತಾಗ ನಮ್ಮ ಬುದ್ಧಿಮತ್ತೆ ವಿಸ್ತಾರವಾಗುತ್ತದೆ. ನಾವು ಜಗತ್ತಿನಿಂದ ಪಡೆಯುವುದಕ್ಕಿಂತ ಹೆಚ್ಚು ನೀಡಬಹುದು. ಉದಾಹರಣೆಗೆ, ಐದನೇ ಶತಮಾನದ ನಂತರ ಆರ್ಯಭಟ ನೇತೃತ್ವದಲ್ಲಿ ನಡೆದ ಗಣಿತದ ಕ್ರಾಂತಿಗೆ ಗ್ರೀಸ್, ಬ್ಯಾಬಿಲಾನ್ ಮತ್ತು ರೋಮ್ ನಲ್ಲಿ ನಡೆದ ಬುದ್ಧಿಮತ್ತೆಯ ಬೆಳವಣಿಗೆಯ ಪ್ರಭಾವ ಕಾಋಣವಾಯಿತು. ಆದರೆ, ಆರ್ಯಭಟನ ಗಣಿತ, ಭಾರತದಲ್ಲಿ ಬಹುದೊಡ್ಡ ಯಶಸ್ಸು ಸಾಧಿಸಿತು. ನಂತರ ವಿದೇಶಗಳಲ್ಲಿ ಪಸರಿಸಿ ಚೀನಾ ಮತ್ತು ಅರಬ್ ಜಗತ್ತಿನ, ಕೊನೆಯಲ್ಲಿ ಯೂರೋಪ್ ಮೇಲೆ ಪರಿವರ್ತನೀಯ ಪ್ರಭಾವ ಬೀರಿತು.''

"ಸ್ನೇಹದ ಸಕಾರಾತ್ಮಕ ಪರಿಣಾಮ ಕೇವಲ ರಾಷ್ಟ್ರೀಯ ಗಡಿಯಲ್ಲಿ ಮಾತ್ರವಲ್ಲದೆ, ದೇಶದ ಒಳಗೂ ಕೆಲಸ ಮಾಡುತ್ತದೆ. ಗುಂಪುಗಳೂ ಮತ್ತು ವರ್ಗಗಳ ನಡುವಿನ ವಿಭಜನೆ ಸಾಮಾಜಿಕ ಜೀವನವನ್ನು ಹಾಳುಮಾಡುವುದರ ಜೊತೆಗೆ, ದೇಶದಲ್ಲಿ ಬುದ್ಧಿಮತ್ತೆಯ ಪ್ರಗತಿಗೆ ತೊಡಕಾಗಿ ಪರಿಣಮಿಸಬಹುದು. ಸ್ನೇಹ ಎಂದರೆ, ಜ್ಞಾನದ ಬೆಳವಣಿಗೆಯ ಕೇಂದ್ರವಾಗಿದೆ'' ಎಂದರು.

ಕಂಪ್ಯೂಟರ್ ವಿಜ್ಞಾನ: ಪ್ರಾಧ್ಯಾಪಕಿ ಸುನೀತಾ ಸುರವಗಿ

ಕಂಪ್ಯೂಟರ್ ವಿಜ್ಞಾನ: ಪ್ರಾಧ್ಯಾಪಕಿ ಸುನೀತಾ ಸುರವಗಿ

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಇನ್ಫೋಸಿಸ್ ಪ್ರಶಸ್ತಿ 2019 ಅನ್ನು ದತ್ತಾಂಶ, ಡೇಟಾ ಮೈನಿಂಗ್, ಯಂತ್ರಗಳ ಕಲಿಕೆ ಮತ್ತು ಸಹಜ ಭಾಷೆಯ ಪ್ರೊಸೆಸಿಂಗ್ ಕ್ಷೇತ್ರಗಳ ಸಂಶೋಧನೆ ಮತ್ತು ಈ ಸಂಶೋಧನೆ ತಂತ್ರಗಳ ಪ್ರಮುಖ ಅಳವಡಿಕೆಗಾಗಿ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪೀಠದ ಪ್ರಾಧ್ಯಾಪಕಿ ಸುನೀತಾ ಸುರವಗಿ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿ, ರಚನಾರಹಿತ ದತ್ತಾಂಶಗಳಿಗಾಗಿ ಮಾಹಿತಿಯನ್ನು ಹೊರತೆಗೆಯುವ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಿದ ಮಹತ್ವದ ಕೆಲಸವನ್ನು ಗುರುತಿಸಿದೆ. ಸರವಗಿ ಅವರ ಕೆಲಸ ವೆಬ್ ನಲ್ಲಿರುವ ವಿಳಾಸದಂತಹ ರಚನಾರಹಿತ ದತ್ತಾಂಶಗಳನ್ನು ಸ್ವಚ್ಛಗೊಳಿಸಲು ನೆರವಾಗುವ ಪ್ರಾಯೋಗಿಕ ಅಳವಡಿಕೆಯನ್ನು ಒಳಗೊಂಡಿದೆ ಮತ್ತು ನಂತರ ಪ್ರಶ್ನೆಗಳನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗುವಂತಹ ಸಂಗ್ರಹಣೆಯನ್ನು ಕೂಡ ಒಳಗೊಂಡಿದೆ.

ಮಾನವೀಯತೆ: ಪ್ರೊ ಮನು ವಿ.ದೇವದೇವನ್

ಮಾನವೀಯತೆ: ಪ್ರೊ ಮನು ವಿ.ದೇವದೇವನ್

ಮಾನವೀಯತೆಯ ಕ್ಷೇತ್ರದಲ್ಲಿ ಇನ್ಫೋಸಿಸ್ ಪ್ರಶಸ್ತಿ 2019 ಅನ್ನು ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾನವೀಯತೆ ಮತ್ತು ಸಮಾಜ ವಿಜ್ಞಾನದ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರೊ ಮನು ವಿ.ದೇವದೇವನ್ ಅವರಿಗೆ ನೀಡಲಾಗಿದೆ. ಪೂರ್ವ ಆಧುನಿಕ ದಕ್ಷಿಣ ಭಾರತದಲ್ಲಿ ಅವರ ಅಸಲಿ ಮತ್ತು ವಿಸ್ತೃತ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಪ್ರಮುಖವಾಗಿ ದಕ್ಷಿಣ ಭಾರತ ಮತ್ತು ಡೆಕ್ಕನ್ ಪ್ರಸ್ಥ ಭೂಮಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸ ಕುರಿತು ಸಾಂಪ್ರದಾಯಿಕ ಜ್ಞಾನವನ್ನು ಮರು ವಿಶ್ಲೇಷಿಸಿದ್ದಾರೆ. ಡಾ. ದೇವದೇವನ್ ಅವರ ಪ್ರಾಥಮಿಕ ಸಂಶೋಧನೆಯ ಆಸಕ್ತಿಗಳು ಪೂರ್ವ ಆಧುನಿಕ ದಕ್ಷಿಣ ಭಾರತದ ರಾಜಕೀಯ ಮತ್ತು ಆರ್ಥಿಕ ಕಾರ್ಯವಿಧಾನಗಳನ್ನು ಒಳಗೊಂಡಿವೆ ಮತ್ತು ದಕ್ಷಿಣ ಭಾರತದ ಸಾಹಿತ್ಯಿಕ ಕೆಲಸಗಳು ಮತ್ತು ಈ ಪ್ರದೇಶದ ಪುರಾತನ ಶಿಲಾಶಾಸನದ ಅಧ್ಯಯನವನ್ನು ಕೂಡ ಒಳಗೊಂಡಿವೆ.

ಜೀವ ವಿಜ್ಞಾನ: ವಿಜ್ಞಾನಿ ಮಂಜುಳಾ ರೆಡ್ಡಿ

ಜೀವ ವಿಜ್ಞಾನ: ವಿಜ್ಞಾನಿ ಮಂಜುಳಾ ರೆಡ್ಡಿ

ಜೀವ ವಿಜ್ಞಾನ ಕ್ಷೇತ್ರದಲ್ಲಿ ಬ್ಯಾಕ್ಟೀರಿಯಾದಲ್ಲಿ ಕೋಶಗಳ ಗೋಡೆಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ಹೈದರಾಬಾದ್ ನ ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿಯ (ಸಿಸಿಎಂಬಿ) ಮುಖ್ಯ ವಿಜ್ಞಾನಿ ಮಂಜುಳಾ ರೆಡ್ಡಿ ಅವರನ್ನು ಇನ್ಫೋಸಿಸ್ ಪ್ರಶಸ್ತಿ 2019 ಗೆ ಆಯ್ಕೆ ಮಾಡಲಾಗಿದೆ. ಡಾ. ರೆಡ್ಡಿ ಮತ್ತು ಅವರ ಸಹೋದ್ಯೋಗಿಗಳು ಅಣುಜೀವಿಗಳ ಜೀವಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಮೂಲಭೂತವಾಗಿರುವ ಕೋಶಗಳ ಗೋಡೆಗಳ ಪ್ರಗತಿಯ ಕುರಿತು ಪ್ರಮುಖ ಹಂತಗಳನ್ನು ವಿವರಿಸಿದ್ದಾರೆ. ಈ ಕೆಲಸ ಆಂಟಿ ಬಯೋಟಕ್ ಪ್ರತಿರೋಧಕ ಮೈಕ್ರೋಬ್ಸ್ ಗಳೊಂದಿಗೆ ಹೋರಾಡುವ ಹೊಸ ಶ್ರೇಣಿಯ ಆಂಟಿಬಯೋಟಿಕ್ ಗಳನ್ನು ಸೃಷ್ಟಿಸಲು ನೆರವಾಗುತ್ತವೆ.

ಗಣಿತ ವಿಜ್ಞಾನ: ಪ್ರೊ ಸಿದ್ಧಾರ್ಥ ಮಿಶ್ರಾ

ಗಣಿತ ವಿಜ್ಞಾನ: ಪ್ರೊ ಸಿದ್ಧಾರ್ಥ ಮಿಶ್ರಾ

ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಇಟಿಎಚ್ ಜ್ಯೂರಿಚ್ ನ ಗಣಿತ ವಿಭಾಗದ ಪ್ರೊ ಸಿದ್ಧಾರ್ಥ ಮಿಶ್ರಾ ಅವರಿಗೆ ಇನ್ಫೋಸಿಸ್ ಪ್ರಶಸ್ತಿ 2019 ನೀಡಲಾಗುತ್ತಿದೆ. ಅನ್ವಯಿಕ ಗಣಿತದಲ್ಲಿ, ವಿಶೇಷವಾಗಿ ವಾಸ್ತವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುವ ಸಾಂಖಿಕ ಉಪಕರಣವನ್ನು ವಿನ್ಯಾಸಗೊಳಿಸಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರೊ. ಮಿಶ್ರಾ ಅವರ ಕೆಲಸಗಳು ಹವಾಮಾನ ಮಾದರಿಗಳು, ಆಸ್ಟ್ರೋ ಫಿಸಿಕ್ಸ್, ಏರೋ ಡೈನಮಿಕ್ಸ್ ಮತ್ತು ಪ್ಲಾಸ್ಮಾ ಫಿಸಿಕ್ಸ್ ಗಳಲ್ಲಿ ಕೂಡ ಬಳಕೆಯಾಗಿದೆ. ಇವರು ಬಂಡೆಗಳಿಂದ ಉತ್ಪತ್ತಿಯಾಗುವ ಸುನಾಮಿ, ಸೌರ ವಾತಾವರಣದಲ್ಲಿ ಅಲೆಗಳು ಸೇರಿದಂತೆ ಹಲವು ಸಂಕೀರ್ಣ ನೈಜ ಸಮಸ್ಯೆಗಳಿಗೆ ಕೋಡ್ ಗಳನ್ನು ಕಂಡುಹಿಡಿದಿದ್ದಾರೆ.

ಭೌತಿಕ ವಿಜ್ಞಾನ: ಪ್ರೊ ಜಿ.ಮುಗೇಶ್

ಭೌತಿಕ ವಿಜ್ಞಾನ: ಪ್ರೊ ಜಿ.ಮುಗೇಶ್

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊ ಜಿ.ಮುಗೇಶ್ ಅವರಿಗೆ ಭೌತಶಾಸ್ತ್ರ ವಿಜ್ಞಾನ ವಿಭಾಗದಲ್ಲಿ 2019ನೇ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇವರು ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಇವರ ಕೆಲಸಗಳು ನಮಗೆ ಥೈರಾಯ್ಡ್ ಹಾರ್ಮೋನ್ ಆಕ್ಟಿವೇಷನ್ ಮತ್ತು ಮೆಟಬೋಲಿಸಂನಲ್ಲಿ ಸೆಲೆನಿಯಮ್ ಮತ್ತು ಐಯೋಡಿನ್ ನಂತರ ಅಂಶಗಳನ್ನು ಪತ್ತೆ ಹಚ್ಚಲು ನೆರವಾಗಿವೆ ಮತ್ತು ಈ ಸಂಶೋಧನೆಗಳು ಪ್ರಮುಖ ವೈದ್ಯಕೀಯ ಸುಧಾರಣೆಗಳಿಗೆ ಕಾರಣವಾಗಿವೆ.

ಸಾಮಾಜಿಕ ವಿಜ್ಞಾನಗಳು: ಆನಂದ್ ಪಾಂಡಿಯನ್

ಸಾಮಾಜಿಕ ವಿಜ್ಞಾನಗಳು: ಆನಂದ್ ಪಾಂಡಿಯನ್

ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ 2019ರ ಇನ್ಫೋಸಿಸ್ ಪ್ರಶಸ್ತಿಗೆ ಜಾನ್ಸ್ ಹಾಪ್ ಕಿನ್ಸ್ ನ ಕ್ರೀಯೇಗರ್ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಸೈನ್ಸ್ ನ ಆಂಥ್ರೋಪಾಲಜಿ ವಿಭಾಗದ ಪ್ರೊ ಆನಂದ್ ಪಾಂಡಿಯನ್ ಅನ್ನು ಆಯ್ಕೆ ಮಾಡಲಾಗಿದೆ. ನೈತಿಕತೆ, ತನ್ನತನ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇವರ ಕಾಲ್ಪನಿಕ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರೊ. ಪಾಂಡಿಯನ್ ಅವರ ಸಂಶೋಧನೆಗಳು ಸಿನೆಮಾ, ಸಾರ್ವಜನಿಕ ಸಂಸ್ಕೃತಿ, ವಾತಾವರಣ, ಪರಿಸರ ಮತ್ತು ಆಂಥ್ರೋಪಾಲಜಿಯ ವಿಷಯ ಮತ್ತು ವಿಧಾನಗಳಂತಹ ಹಲವು ವಿಷಯಗಳನ್ನು ಒಳಗೊಂಡಿವೆ. ಇವರ ಬರಹಗಳು ಆಂಥ್ರೋಪಾಲಜಿ ತಜ್ಞರು ಎದುರಿಸುವ ಜಗತ್ತಿಗೆ ಶಬ್ದಗಳ ರೂಪ ನೀಡುವ ಮೂಲಕ ತಮ್ಮ ಮಿತಿಯನ್ನು ವಿಸ್ತರಿಸಿದ್ದಾರೆ. ಇದು ಹೊಸ ಆಯಾಮಗಳಿಗೆ ತೆರೆದುಕೊಂಡಿದೆ.

English summary
Six eminent professors, including two women scientists, were on Tuesday awarded the Infosys Prize 2019 worth 100,000 USD for their excellent work across different categories of science and research.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X