• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ಜಿ. ಮುಗೇಶ್ ಸೇರಿ 6 ಸಾಧಕರಿಗೆ ಇನ್ಫೋಸಿಸ್ ಸೈನ್ಸ್ ಪ್ರಶಸ್ತಿ

|

ಬೆಂಗಳೂರು, ನವೆಂಬರ್ 07: ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ (ಐಎಸ್ ಎಫ್) 2019ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಯ ವಿಜೇತರನ್ನು ಘೋಷಿಸಿದೆ. ಆರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಅವುಗಳೆಂದರೆ-ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವೀಯತೆ, ಜೀವನ ವಿಜ್ಞಾನಗಳು, ಗಣಿತ ವಿಜ್ಞಾನ, ಬೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ. ಪ್ರತಿ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ಸಂಶೋಧನೆಗೆ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಪ್ರತಿ ವಿಭಾಗದ ಪ್ರಶಸ್ತಿ ಒಂದು ಅಪ್ಪಟ ಚಿನ್ನದ ಪದಕ, ಒಂದು ಫಲಕ ಮತ್ತು 1,00,000 ಅಮೆರಿಕನ್ ಡಾಲರ್ (ಅದಕ್ಕೆ ಸಮನಾದ ಭಾರತೀಯ ನಗದು)ಅನ್ನು ಒಳಗೊಂಡಿದೆ. ಪರಿಣತ ವಿದ್ವಾಂಸರು ಮತ್ತು ಪ್ರೊಫೆಸರ್ ಗಳನ್ನು ಒಳಗೊಂಡ ತೀರ್ಪುಗಾರರ ತಂಡ 196 ನಾಮನಿರ್ದೇಶಿತರ ಪೈಕಿ ಇನ್ಫೋಸಿಸ್ ಪ್ರಶಸ್ತಿ 2019ರ ವಿಜೇತರನ್ನು ಆಯ್ಕೆ ಮಾಡಿದೆ.

ಇನ್‍ಫೋಸಿಸ್‍ಗೆ ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಕ್ರಿಯೆ ಪ್ರಶಸ್ತಿ

ಈ ಹಿಂದೆ ಅತ್ಯುತ್ತಮ ಪ್ರತಿಭೆಗಳು ಮತ್ತು, ಫೀಲ್ಡ್ ಮೆಡಲ್ ಮತ್ತು ಇತ್ತೀಚೆಗೆ ನೊಬೆಲ್ ಸ್ಮಾರಕ ಪ್ರಶಸ್ತಿಗಳಿಗೆ ಭಾಜನರಾದಂತಹ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಇತಿಹಾಸ ಹೊಂದಿರುವ ಐಎಸ್ ಎಫ್ ಈ ವರ್ಷವೂ ತನ್ನದೇ ಇತಿಹಾಸ ಮೂಡಿಸುವ ವಿಶ್ವಾಸ ಹೊಂದಿದೆ. ಇನ್ಫೋಸಿಸ್ ಪ್ರಶಸ್ತಿ, ಅತ್ಯುತ್ತಮ ಸಂಶೋಧಕರನ್ನು ಗುರುತಿಸಿ,ಅವರ ಸಾಧನೆಯನ್ನು ಸಂಭ್ರಮಿಸುವುದರ ಜೊತೆಗೆ, ಆ ಮೂಲಕ, ಯುವ ಮನಸ್ಸುಗಳಿಗೆ ವಿಜ್ಞಾನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗುತ್ತದೆ.

ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಅಧ್ಯಕ್ಷ ಶಿಬುಲಾಲ್

ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಅಧ್ಯಕ್ಷ ಶಿಬುಲಾಲ್

"ಇನ್ಫೋಸಿಸ್ ಪ್ರಶಸ್ತಿ ವಿಜ್ಞಾನ ಸಂಶೋಧನೆ ಮತ್ತು ತನಿಖೆಯಲ್ಲಿ ಅತ್ಯುದ್ಭುತ ಕೆಲಸ ಮಾಡಿದವರನ್ನು ಗುರುತಿಸುವ ಕಾರ್ಯವನ್ನು ಮುಂದುವರಿಸಿದೆ. ಹಲವು ಇನ್ಫೋಸಿಸ್ ಪ್ರಶಸ್ತಿ ವಿಜೇತರು ಆರೋಗ್ಯ, ಅನುವಂಶಿಕತೆ, ಹವಾಮಾನ ಬದಲಾವಣೆ, ಖಗೋಳ ವಿಜ್ಞಾನ ಮತ್ತು ಬಡತನ ಸುಧಾರಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅವರ ಕೆಲಸಗಳು ಮನುಷ್ಯರು ಮತ್ತು ಭೂಖಂಡದ ಮೇಲೆ ತಕ್ಷಣ ಪರಿಣಾಮ ಬೀರಿವೆ. ಇದು ಸಾಮಾಜಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬ ಆಶಯ ಇರಿಸಿಕೊಂಡಿದ್ದೇವೆ'' ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಅಧ್ಯಕ್ಷ, ಇನ್ಫೋಸಿಸ್ ಸಹ ಸ್ಥಾಪಕ ಎಸ್. ಡಿ ಶಿಬುಲಾಲ್ ಹೇಳಿದರು.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ

ಕಾರ್ಯಕ್ರಮದಲ್ಲಿ ಮೂಲಭೂತ ಸಂಶೋಧನೆಯ ಮಹತ್ವವನ್ನು ವಿವರಿಸಿದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನ ಟ್ರಸ್ಟಿ ಮತ್ತು ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್.ನಾರಾಯಣ ಮೂರ್ತಿ, "ನಾವು ನಮ್ಮ ಯುವಕರಿಗೆ ಮೂಲಭೂತ ಸಂಶೋಧನೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಅವರಿಗೆ ಪ್ರೋತ್ಸಾಹದ ಜೊತೆಗೆ ಇಂದು ನಮಗೆ ಪ್ರತಿನಿತ್ಯ ಎದುರಾಗುವ ಬೃಹತ್ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಕೊಡುಗೆ ನೀಡಲು ಸಜ್ಜುಗೊಳಿಸಬೇಕು. ಭಾರತ ಪ್ರತಿ ತಿಂಗಳೂ ಆವಿಷ್ಕಾರ ಮತ್ತು ಸಂಶೋಧನೆಗಳು ನಡೆಯುವ ಸ್ಥಳವಾಗಿರಬೇಕು ಎಂಬುದು ನನ್ನಾಸೆ" ಎಂದರು.

ಯಶಸ್ವಿ ಉದ್ಯಮಿ ಆರ್ಥಿಕ ತಜ್ಞ ಆಗಲಾರ: ಉದಾಹರಣೆಗೆ ಇನ್ಫಿ ನಾರಾಯಣ ಮೂರ್ತಿ

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಇನ್ಫೋಸಿಸ್ ಪ್ರಶಸ್ತಿ 2019 ಅನ್ನು ದತ್ತಾಂಶ, ಡೇಟಾ ಮೈನಿಂಗ್, ಯಂತ್ರಗಳ ಕಲಿಕೆ ಮತ್ತು ಸಹಜ ಭಾಷೆಯ ಪ್ರೊಸೆಸಿಂಗ್ ಕ್ಷೇತ್ರಗಳ ಸಂಶೋಧನೆ ಮತ್ತು ಈ ಸಂಶೋಧನೆ ತಂತ್ರಗಳ ಪ್ರಮುಖ ಅಳವಡಿಕೆಗಾಗಿ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪೀಠದ ಪ್ರಾಧ್ಯಾಪಕಿ ಸುನೀತಾ ಸುರವಗಿ ಅವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿ, ರಚನಾರಹಿತ ದತ್ತಾಂಶಗಳಿಗಾಗಿ ಮಾಹಿತಿಯನ್ನು ಹೊರತೆಗೆಯುವ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಿದ ಮಹತ್ವದ ಕೆಲಸವನ್ನು ಗುರುತಿಸಿದೆ. ಸರವಗಿ ಅವರ ಕೆಲಸ ವೆಬ್ ನಲ್ಲಿರುವ ವಿಳಾಸದಂತಹ ರಚನಾರಹಿತ ದತ್ತಾಂಶಗಳನ್ನು ಸ್ವಚ್ಛಗೊಳಿಸಲು ನೆರವಾಗುವ ಪ್ರಾಯೋಗಿಕ ಅಳವಡಿಕೆಯನ್ನು ಒಳಗೊಂಡಿದೆ ಮತ್ತು ನಂತರ ಪ್ರಶ್ನೆಗಳನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗುವಂತಹ ಸಂಗ್ರಹಣೆಯನ್ನು ಕೂಡ ಒಳಗೊಂಡಿದೆ.

ಮಾನವೀಯತೆ

ಮಾನವೀಯತೆ

ಮಾನವೀಯತೆಯ ಕ್ಷೇತ್ರದಲ್ಲಿ ಇನ್ಫೋಸಿಸ್ ಪ್ರಶಸ್ತಿ 2019 ಅನ್ನು ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾನವೀಯತೆ ಮತ್ತು ಸಮಾಜ ವಿಜ್ಞಾನದ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರೊಫೆಸರ್ ಮನು ವಿ.ದೇವದೇವನ್ ಅವರಿಗೆ ನೀಡಲಾಗಿದೆ. ಪೂರ್ವ ಆಧುನಿಕ ದಕ್ಷಿಣ ಭಾರತದಲ್ಲಿ ಅವರ ಅಸಲಿ ಮತ್ತು ವಿಸ್ತೃತ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರು ಪ್ರಮುಖವಾಗಿ ದಕ್ಷಿಣ ಭಾರತ ಮತ್ತು ಡೆಕ್ಕನ್ ಪ್ರಸ್ಥ ಭೂಮಿಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸ ಕುರಿತು ಸಾಂಪ್ರದಾಯಿಕ ಜ್ಞಾನವನ್ನು ಮರು ವಿಶ್ಲೇಷಿಸಿದ್ದಾರೆ. ಡಾ. ದೇವದೇವನ್ ಅವರ ಪ್ರಾಥಮಿಕ ಸಂಶೋಧನೆಯ ಆಸಕ್ತಿಗಳು ಪೂರ್ವ ಆಧುನಿಕ ದಕ್ಷಿಣ ಭಾರತದ ರಾಜಕೀಯ ಮತ್ತು ಆರ್ಥಿಕ ಕಾರ್ಯವಿಧಾನಗಳನ್ನು ಒಳಗೊಂಡಿವೆ ಮತ್ತು ದಕ್ಷಿಣ ಭಾರತದ ಸಾಹಿತ್ಯಿಕ ಕೆಲಸಗಳು ಮತ್ತು ಈ ಪ್ರದೇಶದ ಪುರಾತನ ಶಿಲಾಶಾಸನದ ಅಧ್ಯಯನವನ್ನು ಕೂಡ ಒಳಗೊಂಡಿವೆ.

ಜೀವ ವಿಜ್ಞಾನ

ಜೀವ ವಿಜ್ಞಾನ

ಜೀವ ವಿಜ್ಞಾನ ಕ್ಷೇತ್ರದಲ್ಲಿ ಬ್ಯಾಕ್ಟೀರಿಯಾದಲ್ಲಿ ಕೋಶಗಳ ಗೋಡೆಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗಾಗಿ ಹೈದರಾಬಾದ್ ನ ಸೆಂಟರ್ ಫಾರ್ ಸೆಲ್ಯುಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿಯ (ಸಿಸಿಎಂಬಿ) ಮುಖ್ಯ ವಿಜ್ಞಾನಿ ಮಂಜುಳಾ ರೆಡ್ಡಿ ಅವರನ್ನು ಇನ್ಫೋಸಿಸ್ ಪ್ರಶಸ್ತಿ 2019 ಗೆ ಆಯ್ಕೆ ಮಾಡಲಾಗಿದೆ. ಡಾ. ರೆಡ್ಡಿ ಮತ್ತು ಅವರ ಸಹೋದ್ಯೋಗಿಗಳು ಅಣುಜೀವಿಗಳ ಜೀವಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಮೂಲಭೂತವಾಗಿರುವ ಕೋಶಗಳ ಗೋಡೆಗಳ ಪ್ರಗತಿಯ ಕುರಿತು ಪ್ರಮುಖ ಹಂತಗಳನ್ನು ವಿವರಿಸಿದ್ದಾರೆ. ಈ ಕೆಲಸ ಆಂಟಿ ಬಯೋಟಕ್ ಪ್ರತಿರೋಧಕ ಮೈಕ್ರೋಬ್ಸ್ ಗಳೊಂದಿಗೆ ಹೋರಾಡುವ ಹೊಸ ಶ್ರೇಣಿಯ ಆಂಟಿಬಯೋಟಿಕ್ ಗಳನ್ನು ಸೃಷ್ಟಿಸಲು ನೆರವಾಗುತ್ತವೆ.

ಗಣಿತ ವಿಜ್ಞಾನ

ಗಣಿತ ವಿಜ್ಞಾನ

ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಇಟಿಎಚ್ ಜ್ಯೂರಿಚ್ ನ ಗಣಿತ ವಿಭಾಗದ ಪ್ರೊಫೆಸರ್ ಸಿದ್ಧಾರ್ಥ ಮಿಶ್ರಾ ಅವರಿಗೆ ಇನ್ಫೋಸಿಸ್ ಪ್ರಶಸ್ತಿ 2019 ನೀಡಲಾಗುತ್ತಿದೆ. ಅನ್ವಯಿಕ ಗಣಿತದಲ್ಲಿ, ವಿಶೇಷವಾಗಿ ವಾಸ್ತವ ಬದುಕಿನ ಸಮಸ್ಯೆಗಳನ್ನು ಬಗೆಹರಿಸುವ ಸಾಂಖಿಕ ಉಪಕರಣವನ್ನು ವಿನ್ಯಾಸಗೊಳಿಸಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರೊ. ಮಿಶ್ರಾ ಅವರ ಕೆಲಸಗಳು ಹವಾಮಾನ ಮಾದರಿಗಳು, ಆಸ್ಟ್ರೋ ಫಿಸಿಕ್ಸ್, ಏರೋ ಡೈನಮಿಕ್ಸ್ ಮತ್ತು ಪ್ಲಾಸ್ಮಾ ಫಿಸಿಕ್ಸ್ ಗಳಲ್ಲಿ ಕೂಡ ಬಳಕೆಯಾಗಿದೆ. ಇವರು ಬಂಡೆಗಳಿಂದ ಉತ್ಪತ್ತಿಯಾಗುವ ಸುನಾಮಿ, ಸೌರ ವಾತಾವರಣದಲ್ಲಿ ಅಲೆಗಳು ಸೇರಿದಂತೆ ಹಲವು ಸಂಕೀರ್ಣ ನೈಜ ಸಮಸ್ಯೆಗಳಿಗೆ ಕೋಡ್ ಗಳನ್ನು ಕಂಡುಹಿಡಿದಿದ್ದಾರೆ.

ಭೌತಿಕ ವಿಜ್ಞಾನ

ಭೌತಿಕ ವಿಜ್ಞಾನ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಿ.ಮುಗೇಶ್ ಅವರಿಗೆ ಭೌತಶಾಸ್ತ್ರ ವಿಜ್ಞಾನ ವಿಭಾಗದಲ್ಲಿ 2019ನೇ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇವರು ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಇವರ ಕೆಲಸಗಳು ನಮಗೆ ಥೈರಾಯ್ಡ್ ಹಾರ್ಮೋನ್ ಆಕ್ಟಿವೇಷನ್ ಮತ್ತು ಮೆಟಬೋಲಿಸಂನಲ್ಲಿ ಸೆಲೆನಿಯಮ್ ಮತ್ತು ಐಯೋಡಿನ್ ನಂತರ ಅಂಶಗಳನ್ನು ಪತ್ತೆ ಹಚ್ಚಲು ನೆರವಾಗಿವೆ ಮತ್ತು ಈ ಸಂಶೋಧನೆಗಳು ಪ್ರಮುಖ ವೈದ್ಯಕೀಯ ಸುಧಾರಣೆಗಳಿಗೆ ಕಾರಣವಾಗಿವೆ.

ಸಾಮಾಜಿಕ ವಿಜ್ಞಾನಗಳು

ಸಾಮಾಜಿಕ ವಿಜ್ಞಾನಗಳು

ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ 2019ರ ಇನ್ಫೋಸಿಸ್ ಪ್ರಶಸ್ತಿಗೆ ಜಾನ್ಸ್ ಹಾಪ್ ಕಿನ್ಸ್ ನ ಕ್ರೀಯೇಗರ್ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಸೈನ್ಸ್ ನ ಆಂಥ್ರೋಪಾಲಜಿ ವಿಭಾಗದ ಪ್ರೊಫೆಸರ್ ಆನಂದ್ ಪಾಂಡಿಯನ್ ಅನ್ನು ಆಯ್ಕೆ ಮಾಡಲಾಗಿದೆ. ನೈತಿಕತೆ, ತನ್ನತನ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇವರ ಕಾಲ್ಪನಿಕ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರೊ. ಪಾಂಡಿಯನ್ ಅವರ ಸಂಶೋಧನೆಗಳು ಸಿನೆಮಾ, ಸಾರ್ವಜನಿಕ ಸಂಸ್ಕೃತಿ, ವಾತಾವರಣ, ಪರಿಸರ ಮತ್ತು ಆಂಥ್ರೋಪಾಲಜಿಯ ವಿಷಯ ಮತ್ತು ವಿಧಾನಗಳಂತಹ ಹಲವು ವಿಷಯಗಳನ್ನು ಒಳಗೊಂಡಿವೆ. ಇವರ ಬರಹಗಳು ಆಂಥ್ರೋಪಾಲಜಿ ತಜ್ಞರು ಎದುರಿಸುವ ಜಗತ್ತಿಗೆ ಶಬ್ದಗಳ ರೂಪ ನೀಡುವ ಮೂಲಕ ತಮ್ಮ ಮಿತಿಯನ್ನು ವಿಸ್ತರಿಸಿದ್ದಾರೆ. ಇದು ಹೊಸ ಆಯಾಮಗಳಿಗೆ ತೆರೆದುಕೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Six eminent professors have won the Infosys Prize 2019 across different categories of science and research, the software major's science foundation announced on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more