ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 6 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1 ಲಕ್ಷ ಕೋಟಿ ರು. ಹೆಚ್ಚಾಗಿದೆ

|
Google Oneindia Kannada News

ನವದೆಹಲಿ, ಜುಲೈ 12: ಮುಂಬೈ ಷೇರು ಮಾರುಕಟ್ಟೆಯಲ್ಲಿ ಅಗ್ರ 10 ಸೆನ್ಸೆಕ್ಸ್ ಕಂಪೆನಿಗಳಲ್ಲಿ 6 ರ ಮಾರುಕಟ್ಟೆ ಬಂಡವಾಳೀಕರಣವು ಕಳೆದ ಒಂದು ವಾರದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯವು ಒಂದು ಲಕ್ಷ ಕೋಟಿಗಿಂತ ಹೆಚ್ಚಾಗಿದೆ.

ಸೆನ್ಸೆಕ್ಸ್‌ನ ಅಗ್ರ 10 ಕಂಪನಿಯ ಆರರಲ್ಲಿ ಸುಮಾರು 1,03,625.35 ಕೋಟಿ ರುಪಾಯಿ ಹೆಚ್ಚಾಗಿದೆ. ಅದೇ ಸಮಯದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಮಾರುಕಟ್ಟೆ ಕ್ಯಾಪ್‌ನ ಅರ್ಧಕ್ಕಿಂತ ಹೆಚ್ಚಿನದನ್ನು ಪಡೆದಿದೆ.

ರಿಲಯನ್ಸ್ ದಾಖಲೆ: 11.5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿರಿಲಯನ್ಸ್ ದಾಖಲೆ: 11.5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ

ಕಳೆದ ವಾರ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 572.91 ಅಂಕಗಳ ಲಾಭದೊಂದಿಗೆ ಮುಕ್ತಾಯಗೊಂಡಿದೆ. ಪರಿಶೀಲನೆಯ ವಾರದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ (ಎಚ್‌ಯುಎಲ್), ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿಯ ಮಾರುಕಟ್ಟೆ ಕ್ಯಾಪ್ ಹೆಚ್ಚಾಗಿದೆ. ಭಾರತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಕ್ಯಾಪ್ ಕುಸಿದಿದೆ.

ರಿಲಯನ್ಸ್ ಅತಿ ಹೆಚ್ಚು ಗಳಿಕೆಗಿಂತ

ರಿಲಯನ್ಸ್ ಅತಿ ಹೆಚ್ಚು ಗಳಿಕೆಗಿಂತ

ವಾರದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯ 57,688.58 ಕೋಟಿ ರುಪಾಯಿ ಹೆಚ್ಚಾಗಿದ್ದು, ಒಟ್ಟಾರೆ ಬಂಡವಾಳ ಮೌಲ್ಯವು 11,90,857.13 ಕೋಟಿ ರುಪಾಯಿಗೆ ಏರಿದೆ.

ಇದರ ನಂತರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಮಾರುಕಟ್ಟೆ ಕ್ಯಾಪ್ 17,102.22 ಕೋಟಿ ಏರಿಕೆ ಕಂಡು 6,06,867.94 ಕೋಟಿ ರುಪಾಯಿ, ಹಿಂದೂಸ್ತಾನ್ ಯೂನಿಲಿವರ್ 12,088.43 ಕೋಟಿ ರೂ.ಗಳಿಂದ 5,22,481.19 ಕೋಟಿ ರೂ.ಗೆ ಏರಿದೆ.

ಟಿಸಿಎಸ್‌ ಬಂಡವಾಳ ಗಾತ್ರವು ಹೆಚ್ಚಳ

ಟಿಸಿಎಸ್‌ ಬಂಡವಾಳ ಗಾತ್ರವು ಹೆಚ್ಚಳ

ಟಿಸಿಎಸ್‌ನ ಮಾರುಕಟ್ಟೆ ಕ್ಯಾಪ್ 8,499.15 ಕೋಟಿ ರುಪಾಯಿಗಳಿಂದ 8,33,648.55 ಕೋಟಿ ರುಪಾಯಿಗೆ ತಲುಪಿದೆ. ನಂತರದಲ್ಲಿ ಇನ್ಫೋಸಿಸ್ 8,177.58 ಕೋಟಿ ರುಪಾಯಿಗಳಿಂದ 3,32,980.71 ಕೋಟಿಗಳಿಗೆ ಏರಿಕೆಯಾಗಿದೆ ಮತ್ತು ಎಚ್‌ಡಿಎಫ್‌ಸಿಯ ಮಾರುಕಟ್ಟೆ ಕ್ಯಾಪ್ 69.39 ಕೋಟಿ ರುಪಾಯಿಗಳಿಂದ 3,27,189.91 ಕೋಟಿ ರುಪಾಯಿಗೆ ಏರಿಕೆಯಾಗಿದೆ.

ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತ

ಐಟಿಸಿ, ಏರ್‌ಟೆಲ್ ಮಾರುಕಟ್ಟೆ ಗಾತ್ರ ಇಳಿಕೆ

ಐಟಿಸಿ, ಏರ್‌ಟೆಲ್ ಮಾರುಕಟ್ಟೆ ಗಾತ್ರ ಇಳಿಕೆ

ಐಟಿಸಿಯ ಮಾರುಕಟ್ಟೆ ಕ್ಯಾಪ್ 16,041.36 ಕೋಟಿ ಇಳಿಕೆ ಕಂಡು 2,38,838.05 ಕೋಟಿ ರುಪಾಯಿಗೆ ತಲುಪಿದೆ. ಇದಲ್ಲದೆ, ಭಾರ್ತಿ ಏರ್‌ಟೆಲ್‌ನ ಮಾರುಕಟ್ಟೆ ಕ್ಯಾಪ್ 3,491.56 ಕೋಟಿ ರುಪಾಯಿಗಳಿಂದ 3,13,530.88 ಕೋಟಿ ರುಪಾಯಿಗೆಗೆ ಇಳಿದಿದ್ದು, ಕೊಟಕ್ ಮಹೀಂದ್ರಾ ಬ್ಯಾಂಕಿನ 791.52 ಕೋಟಿ ರುಪಾಯಿ ಗಾತ್ರ ಕಡಿಮೆಯಾಗಿದೆ.

ಅಗ್ರ 10 ಕಂಪನಿಗಳಲ್ಲಿ ಮೊದಲ ಸ್ಥಾನ ಉಳಿಸಿಕೊಂಡ ರಿಲಯನ್ಸ್‌

ಅಗ್ರ 10 ಕಂಪನಿಗಳಲ್ಲಿ ಮೊದಲ ಸ್ಥಾನ ಉಳಿಸಿಕೊಂಡ ರಿಲಯನ್ಸ್‌

ಅಗ್ರ 10 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಅದರ ನಂತರ ಕ್ರಮವಾಗಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಯುಎಲ್, ಇನ್ಫೋಸಿಸ್, ಎಚ್‌ಡಿಎಫ್‌ಸಿ, ಭಾರತಿ ಏರ್‌ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಟಿಸಿ ಮತ್ತು ಐಸಿಐಸಿಐ ಬ್ಯಾಂಕ್ ಇವೆ.

English summary
Six of the 10 most valued domestic companies together added Rs 1,03,625.35 crore in market capitalisation last week, with Reliance Industries accounting for over half of the gains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X