ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರ್ತಿ ಏರ್ಟೆಲ್ ನಲ್ಲಿ ಮತ್ತೆ ಸಿಂಗಾಪುರ ಕಂಪನಿಯಿಂದ ಭಾರೀ ಹೂಡಿಕೆ

By Sachhidananda Acharya
|
Google Oneindia Kannada News

ಮುಂಬೈ, ಫೆಬ್ರವರಿ 5: ಸಿಂಗಾಪುರ ಮೂಲದ ಟೆಲಿಕಾಂ ಕಂಪನಿ ಸಿಂಗ್ಟೆಲ್ ಭಾರ್ತಿ ಏರ್ಟೆಲ್ ನಲ್ಲಿ ಮತ್ತೆ 2,649 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಈ ಮೂಲಕ ಏರ್ಟೆಲ್ ನಲ್ಲಿ ಸಿಂಗ್ಟೆಲ್ ಶೇರು ಶೇ. 48.9ಕ್ಕೆ ಏರಿಕೆಯಾಗಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಭಾರ್ತಿ ಏರ್ಟೆಲ್ ಮಾಹಿತಿ ನೀಡಿದೆ. ಈ ಹಣವನ್ನು ಸಾಲ ಮರುಪಾವತಿಗೆ ಏರ್ಟೆಲ್ ಬಳಸಿಕೊಳ್ಳಲಿದೆ.

ಸದ್ಯ ಭಾರ್ತಿ ಏರ್ಟೆಲ್ ನಲ್ಲಿ ಸಿಂಗಾಪುರ್ ಟೆಲಿಕಮ್ಯುನಿಕೇಶನ್ಸ್ ಲಿ. (ಸಿಂಗ್ಟೆಲ್) ಶೇಕಡಾ 47.17 ಶೇರುಗಳನ್ನು ಹೊಂದಿತ್ತು. ಇದೀಗ ಹೊಸ ಹೂಡಿಕೆಯೊಂದಿಗೆ ಈ ಪ್ರಮಾಣ ಶೇಕಡಾ 48.9ಕ್ಕೆ ಏರಿಕೆಯಾಗಲಿದೆ. ಭಾರತಿ ಎಂಟರ್ ಪ್ರೈಸಸ್ ಈ ಹಿಂದಿನಂತೆಯೇ ಕಂಪನಿಯಲ್ಲಿ ಶೇಕಡಾ 50 ಶೇರುಗಳನ್ನು ತನ್ನಲ್ಲೇ ಇಟ್ಟುಕೊಳ್ಳಲಿದೆ.

Singtel to invest Rs 2,649 cr in Bharti Telecom

"ಸಿಂಗ್ಟೆಲ್ ಜತೆ ಏರ್ಟೆಲ್ ಎರಡು ದಶಕಗಳ ಶೇರು ಸಂಬಂಧವನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಈ ಬಂಧ ಗಟ್ಟಿಯಾಗುತ್ತಿದೆ. ಈ ಹೊಸ ಹೂಡಿಕೆ ಏರ್ಟೆಲ್ ಮೇಲೆ ಸಿಂಗ್ಟೆಲ್ ಗಿರುವ ನಂಬಿಕೆಯ ದ್ಯೋತಕವಾಗಿದೆ," ಎಂದು ಭಾರ್ತಿ ಏರ್ಟೆಲ್ ಎಂಡಿ ದೇವನ್ ಖನ್ನಾ ಹೇಳಿದ್ದಾರೆ.

English summary
Singapore-based telecom operator Singtel will invest Rs 2,649 crore in Bharti Telecom, increasing its stake in the Indian telecom major to 48.9 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X