ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರ ಆರ್ಥಿಕತೆಯು 2021ರಲ್ಲಿ ಚೇತರಿಕೆ ಕಾಣುವ ನಿರೀಕ್ಷೆ: ಕೋವಿಡ್-19 ಪರಿಸ್ಥಿತಿ ಮೇಲೆ ಅವಲಂಬನೆ

|
Google Oneindia Kannada News

ಕೊರೊನಾವೈರಸ್ ಲಾಕ್‌ಡೌನ್‌ ನಿಯಮಗಳನ್ನು ಕ್ರಮೇಣ ಸರಾಗಗೊಳಿಸಿದ ಕಾರಣದಿಂದಾಗಿ ಸಿಂಗಾಪುರದ ಆರ್ಥಿಕತೆಯು ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಂದಾಜು ಮಾಡಿದಕ್ಕಿಂತ ಕಡಿಮೆ ಬೆಳವಣಿಗೆ ದಾಖಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವರ್ಷದಿಂದ ವರ್ಷಕ್ಕೆ ಶೇಕಡಾ 5.8ಕ್ಕೆ ಕುಸಿದಿದೆ ಎಂದು ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.

ಆರ್ಥಿಕ ವಿಶ್ಲೇಷಕರು ಶೇಕಡಾ 5.4ರಷ್ಟು ಸಂಕೋಚನವನ್ನು ನಿರೀಕ್ಷಿಸಿದ್ದರು. ಆದರೆ ನಿರೀಕ್ಷಿಸಿದ ಪ್ರಮಾಣಕ್ಕಿಂತ ಜಿಡಿಪಿ ದರ ಕುಸಿತಗೊಂಡಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 9.5ಕ್ಕೆ ಇಳಿಯಬಹುದು: ICRAಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 9.5ಕ್ಕೆ ಇಳಿಯಬಹುದು: ICRA

'' ಮುಂದಿನ ವರ್ಷದಲ್ಲಿ ಸಿಂಗಾಪುರ ಆರ್ಥಿಕತೆಯ ಚೇತರಿಕೆ ಕಾಣುವ ನಿರೀಕ್ಷೆಯಿದೆ. ಇದು ಜಾಗತಿಕ ಆರ್ಥಿಕತೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯು ಎಷ್ಟರ ಮಟ್ಟಿಗೆ ನಿಯಂತ್ರಣದಲ್ಲಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ'' ಎಂದು ಎಂಟಿಐ ಹೇಳಿಕೆಯಲ್ಲಿ ತಿಳಿಸಿದೆ.

Singapores Economy To Return Growth In 2021

ಆದಾಗ್ಯೂ, ಗ್ರಾಹಕ ಎದುರಿಸುತ್ತಿರುವ ಕ್ಷೇತ್ರಗಳಲ್ಲಿನ ಆರ್ಥಿಕ ಚಟುವಟಿಕೆಯು 2021 ರ ಅಂತ್ಯದ ವೇಳೆಗೂ ಕೋವಿಡ್ ಪೂರ್ವ ಮಟ್ಟಕ್ಕೆ ಮರಳುವ ಸಾಧ್ಯತೆಯಿಲ್ಲ ಎಂದು ಎಂಟಿಐ ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ. 13.2ರಷ್ಟು ಸಂಕೋಚನದೊಂದಿಗೆ ಹೋಲಿಸಿದರೆ, ಆರ್ಥಿಕತೆಯು ಹಿಂದಿನ ಮೂರು ತಿಂಗಳುಗಳಿಂದ ಶೇ. 9.2 ರಷ್ಟು ಹೆಚ್ಚಾಗಿದೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada

ಕೋವಿಡ್-19 ವಿರುದ್ಧ ಹೋರಾಡಲು ದೇಶವು ಸುಮಾರು 100 ಶತಕೋಟಿ ಡಾಲರ್ ಅಥವಾ ಜಿಡಿಪಿಯ ಶೇಕಡಾ 20ರಷ್ಟು ಖರ್ಚ್ಉ ಮಾಡಿದೆ. ಸಿಂಗಾಪುರವು 58,000 ಕ್ಕೂ ಹೆಚ್ಚು ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿದೆ.

English summary
Singapore's Economy contracted less than initially estimated in the 3rd quarter but it will expect to return growth in 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X