ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ: ಜಿಯೋದಲ್ಲಿ 4,546 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್

|
Google Oneindia Kannada News

ನವದೆಹಲಿ, ಜೂನ್ 6: ಕೊರೊನಾ ಲಾಕ್‌ಡೌನ್‌ ನಡುವೆ ದೇಶದ ಎಲ್ಲಾ ಕಂಪನಿಗಳು, ಉದ್ಯಮಗಳು ಪರದಾಡುತಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಒಳ್ಳೆ ಲಾಭಗಳನ್ನು ಪಡೆಯುತ್ತಲೇ ಸಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲೂ ಭರ್ಜರಿ ವ್ಯಾಪಾರ ಮಾಡ್ತಿರೋ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಲೆಡ್ ಮಾಲೀಕ ಮುಕೇಶ್ ಅಂಬಾನಿ ಒಂದರ ಹಿಂದೆ ಮತ್ತೊಂದು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Recommended Video

ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

ಈ ಹಿಂದೆ 1.15 ಪರ್ಸೆಂಟ್‌ನಷ್ಟು ಷೇರು ಖರೀದಿ ಮಾಡಿದ್ದ ಅಮೆರಿಕಾ ಮೂಲದ ಕಂಪನಿ ಸಿಲ್ವರ್ ಲೇಕ್‌ ಇದೀಗ ಮತ್ತೆ ಜಿಯೋ ಫ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದೆ. ಭಾರತದಲ್ಲಿ ಭವಿಷ್ಯದಲ್ಲಿ ಬಹುದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗುವ ಮುನ್ಸೂಚನೆ ಕೊಟ್ಟಿರುವ ಜಿಯೋದಲ್ಲಿ ಮತ್ತಷ್ಟು ಪಾಲನ್ನು ಹೊಂದಲು ಸಿಲ್ವರ್ ಲೇಕ್ ಮಾತುಕತೆ ನಡೆಸಿದೆ.

4,546 ಕೋಟಿ ರುಪಾಯಿ ಹೂಡಿಕೆಯ ಮಾತುಕತೆ

4,546 ಕೋಟಿ ರುಪಾಯಿ ಹೂಡಿಕೆಯ ಮಾತುಕತೆ

ಸಿಲ್ವರ್ ಲೇಕ್ ಮತ್ತು ಸಹ-ಹೂಡಿಕೆದಾರರು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಮತಷ್ಟು 4,546.8 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದಾರೆ. ಜಿಯೋದಲ್ಲಿ ಹೆಚ್ಚು ಷೇರುಗಳನ್ನು ಹೊಂದಲು ಈ ಕಂಪನಿಯು ಮನಸ್ಸು ಮಾಡಿದೆ.

ಜಿಯೋದಲ್ಲಿ 9,033 ಕೋಟಿ ರುಪಾಯಿ ಹೂಡಿಕೆ ಮಾಡಿದ ಮುಬದಾಲ: 6 ವಾರದಲ್ಲಿ 6 ಡೀಲ್ಜಿಯೋದಲ್ಲಿ 9,033 ಕೋಟಿ ರುಪಾಯಿ ಹೂಡಿಕೆ ಮಾಡಿದ ಮುಬದಾಲ: 6 ವಾರದಲ್ಲಿ 6 ಡೀಲ್

ಕೇವಲ 24 ಗಂಟೆಗಳಲ್ಲಿ ಬಹುದೊಡ್ಡ ಹೂಡಿಕೆಯ ಡೀಲ್

ಕೇವಲ 24 ಗಂಟೆಗಳಲ್ಲಿ ಬಹುದೊಡ್ಡ ಹೂಡಿಕೆಯ ಡೀಲ್

ಹೌದು, ಕೇವಲ 24 ಗಂಟೆಗಳಲ್ಲಿ ರಿಲಯನ್ಸ್ ಜಿಯೋ ಎರಡನೇ ಒಪ್ಪಂದಕ್ಕೆ ಮುಂದಾಗಿದೆ. ಏಕೆಂದರೆ ನಿನ್ನೆಯಷ್ಟೇ ಅಬುಧಾಭಿಯ ರಾಜ್ಯ ನಿಧಿ ಮುಬದಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಭಾರತದ ರುಪಾಯಿಗಳಲ್ಲಿ ಸುಮಾರು 9,093.6 ಕೋಟಿ)

ಈ ಒಪ್ಪಂದದ ಸುದ್ದಿ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಸಿಲ್ವರ್ ಲೇಕ್ ಮತ್ತಷ್ಟು ಹಣ ಹೂಡಿಕೆಗೆ ಮುಂದಾಗಿದೆ.

ಈ ಹಿಂದೆ 5,656 ಕೋಟಿ ರುಪಾಯಿ ಹೂಡಿಕೆ ಮಾಡಿದ್ದ ಸಿಲ್ವರ್ ಲೇಕ್ ಕಂಪನಿ

ಈ ಹಿಂದೆ 5,656 ಕೋಟಿ ರುಪಾಯಿ ಹೂಡಿಕೆ ಮಾಡಿದ್ದ ಸಿಲ್ವರ್ ಲೇಕ್ ಕಂಪನಿ

ಫೇಸ್‌ಬುಕ್‌ ಸಾವಿರಾರು ಕೋಟಿ ರುಪಾಯಿ ಹೂಡಿಕೆ ಬಳಿಕ ಅಮೆರಿಕ ಮೂಲದ ಸಿಲ್ವರ್ ಲೇಕ್ ಕಂಪನಿ ಜಿಯೋದಲ್ಲಿ ಈ ಹಿಂದೆ 5,656 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿತ್ತು. (1.15 ಪರ್ಸೆಂಟ್‌ನಷ್ಟು ಷೇರು ಖರೀದಿ) ಇದರ ಷೇರು ಬೆಲೆ ಬರೋಬ್ಬರಿ 4.90 ಲಕ್ಷ ಕೋಟಿ ರುಪಾಯಿ ಆಗಿದ್ದು, ಇದೀಗ ಎರಡನೇ ಬಾರಿಗೆ ಹಣ ಹೂಡಿಕೆಗೆ ಮುಂದಾಗಿದೆ.

RIL ಹಕ್ಕುಗಳ ಹಂಚಿಕೆ: ಮಾನ್ಸೂನ್‌ಗೂ ಮುಂಚೆಯೇ ಹಣದ ಮಳೆ, ದಾಖಲೆ ಬರೆದ ರಿಲಯನ್ಸ್ ಇಂಡಸ್ಟ್ರೀಸ್RIL ಹಕ್ಕುಗಳ ಹಂಚಿಕೆ: ಮಾನ್ಸೂನ್‌ಗೂ ಮುಂಚೆಯೇ ಹಣದ ಮಳೆ, ದಾಖಲೆ ಬರೆದ ರಿಲಯನ್ಸ್ ಇಂಡಸ್ಟ್ರೀಸ್

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ

ಹಣಕಾಸು ಮತ್ತು ತಂತ್ರಜ್ಞಾನದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ, ತನ್ನ ತಾಂತ್ರಿಕ ಜ್ಞಾನವನ್ನು ರಿಲಯನ್ಸ್ ಜಿಯೋಗೆ ನೀಡಲಿದೆ. ಇದರಿಂದ ಭಾರತದ ಡಿಜಿಟಲ್ ಲೋಕ ಸಂಪೂರ್ಣವಾಗಿ ರೂಪಾಂತಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಜಿಯೋದ 19.9 ಪರ್ಸೆಂಟ್ ಪಾಲು ಮಾರಾಟ

ಜಿಯೋದ 19.9 ಪರ್ಸೆಂಟ್ ಪಾಲು ಮಾರಾಟ

ಇತ್ತೀಚಿನ ಹೂಡಿಕೆಯೊಂದಿಗೆ, ಜಿಯೋ ಪ್ಲಾಟ್‌ಫಾರ್ಮ್‌ಗಳು ಆರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್ ಇಂಕ್ ನೇತೃತ್ವದ ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 19.9 ಪರ್ಸೆಂಟ್ ಪಾಲನ್ನು ಮಾರಾಟ ಮಾಡಿದಂತಾಗಿದ್ದು, ಇದರ ವಿನಿಮಯವಾಗಿ 92,202.15 ಕೋಟಿಯಷ್ಟಿದೆ.

ಜಿಯೋ ರೀಚಾರ್ಜ್ ಮಾಡಿ ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯಿರಿಜಿಯೋ ರೀಚಾರ್ಜ್ ಮಾಡಿ ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯಿರಿ

ಸಂಗೀತ ಮತ್ತು ಚಲನಚಿತ್ರ ಅಪ್ಲಿಕೇಶನ್‌ಗಳು ಮತ್ತು ರಿಲಯನ್ಸ್‌ನ ಟೆಲಿಕಾಂ ಉದ್ಯಮವಾದ ಜಿಯೋ ಇನ್ಫೋಕಾಮ್ ಅನ್ನು ಹೊಂದಿರುವ ಜಿಯೋ ಪ್ಲಾಟ್‌ಫಾರ್ಮ್‌ಗಳು, ಒಂದು ತಿಂಗಳಲ್ಲಿ ಫೇಸ್‌ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರಿಂದ 10 ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತವನ್ನು ಪಡೆದುಕೊಂಡಿದೆ.

ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ

ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ

ಹೌದು, ಜಗತ್ತಿನಲ್ಲಿ ಕೊರೊನಾ ಕಾಟದಿಂದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಕಂಗೆಟ್ಟು ಹೋಗಿದೆ, ಇದರಿಂದ ಭಾರತವೂ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ವಿದೇಶಿ ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ವಾರಗಳಲ್ಲಿ ಆರು ಡೀಲ್ ಮಾಡಿಕೊಂಡಿದೆ. ಇದರ ಜೊತೆಗೆ ಈಗ ಸಿಲ್ವರ್ ಲೇಕ್ ಸೇರಲಿದೆ.

ಏಪ್ರಿಲ್ 22 ರಂದು ಫೇಸ್‌ಬುಕ್‌ ಜಿಯೋದ 9.99 ಪರ್ಸೆಂಟ್‌ರಷ್ಟು ಪಾಲು ಖರೀದಿಸಲು 43,574 ಕೋಟಿ ರುಪಾಯಿ ಹೂಡಿಕೆ ಮಾಡಿತ್ತು. ನಂತರದಲ್ಲಿ ಸರಣಿ ಒಪ್ಪಂದಗಳು ನಡೆದವು. ಅಂದಿನಿಂದ, ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್ ಮತ್ತು ಕೆಕೆಆರ್, ಮುಬದಾಲ ಪಾಲನ್ನು ಪಡೆದಿದ್ದು ಒಟ್ಟಾರೆ ಹೂಡಿಕೆ 87,655.35 ಕೋಟಿ ರುಪಾಯಿ ಆಗಿದೆ. ಸಿಲ್ವರ್ ಲೇಕ್‌ ಮತ್ತೊಮ್ಮೆ ಹಣ ಹೂಡಿದರೆ ಇದರ ಮೊತ್ತ 92,202.15 ಕೋಟಿಯಷ್ಟಾಗಲಿದೆ.

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಸೇರಿದಂತೆ ಆರು ಕಂಪನಿಗಳು ರಿಲಯನ್ಸ್‌ ಜಿಯೋದಲ್ಲಿ ಭಾರೀ ಹೂಡಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮಾರ್ಚ್ 2021ರ ವೇಳೆಗೆ ಶೂನ್ಯ ನಿವ್ವಳ ಸಾಲ ಕಂಪನಿಯಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಒಪ್ಪಂದದ ನಗದು ಹರಿವು ಆರ್ಐಎಲ್ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಮಾರ್ಚ್ 2021 ರ ವೇಳೆಗೆ ಶೂನ್ಯ ನಿವ್ವಳ ಸಾಲವನ್ನು ಸಾಧಿಸುವ ಗುರಿಯತ್ತ ಸಾಗಲು ಸಹಾಯ ಮಾಡುತ್ತದೆ.

English summary
Silver Lake and co-investors will pump another Rs 4,546.8 crore in Jio Platforms, the second investment by the private equity giant in the Reliance Industries digital unit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X