ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ RRVLನಲ್ಲಿ ಹೆಚ್ಚುವರಿ 1,875 ಕೋಟಿ ರು. ಹೂಡಿಕೆ

|
Google Oneindia Kannada News

ಮುಂಬೈ, ಅಕ್ಟೋಬರ್ 1: ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಹೆಚ್ಚುವರಿಯಾಗಿ 1,875 ಕೋಟಿ ರುಪಾಯಿ ಹೂಡಿಕೆ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರದಂದು ಘೋಷಣೆ ಮಾಡಿವೆ.

ಈ ಮೂಲಕ ಸಿಲ್ವರ್ ಲೇಕ್ ಮತ್ತು ಅದರ ಸಹ ಹೂಡಿಕೆದಾರರು ರಿಲಯನ್ಸ್ ರೀಟೇಲ್ ನಲ್ಲಿ ಮಾಡುವ ಸರಾಸರಿ ಹೂಡಿಕೆ ಮೊತ್ತ 9,375 ಕೋಟಿ ರುಪಾಯಿ ಆಗುತ್ತದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 2.13% ಈಕ್ವಿಟಿ ಪಾಲು ಖರೀದಿ ಆದಂತಾಗುತ್ತದೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ.

ಜನರಲ್ ಅಟ್ಲಾಂಟಿಕ್‌ನಿಂದ ರಿಲಯನ್ಸ್‌ನಲ್ಲಿ ಭಾರಿ ಮೊತ್ತ ಹೂಡಿಕೆಜನರಲ್ ಅಟ್ಲಾಂಟಿಕ್‌ನಿಂದ ರಿಲಯನ್ಸ್‌ನಲ್ಲಿ ಭಾರಿ ಮೊತ್ತ ಹೂಡಿಕೆ

ಸಿಲ್ವರ್ ಲೇಕ್ ಒಟ್ಟಾರೆ ಆಸ್ತಿ ಮೌಲ್ಯವು 60 ಬಿಲಿಯನ್ ಅಮೆರಿಕನ್ ಡಾಲರ್ ದಾಟುತ್ತದೆ. ಈಗಾಗಲೇ ಏರ್ ಬಿಎನ್ ಬಿ, ಅಲಿಬಾಬ, ಆಲ್ಫಾಬೆಟ್ ನ ವೆರಿಲಿ ಮತ್ತು ವೇಯ್ಮೋ ಯೂನಿಟ್ಸ್, ಡೆಲ್ ಟೆಕ್ನಾಲಜೀಸ್, ಟ್ವಿಟ್ಟರ್ ಸೇರಿದಂತೆ ಇತರ ಜಾಗತಿಕ ಟೆಕ್ನಾಲಜಿ ಕಂಪೆನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಇದೆ.

ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ

ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ

ಸಿಲ್ವರ್ ಲೇಕ್ ಮೂಲಕ ಬಂದ ಈ ಸರಾಸರಿ ಹೂಡಿಕೆ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ಭಾರತೀಯರ ಅನುಕೂಲಕ್ಕಾಗಿ ಭಾರತೀಯ ರೀಟೇಲ್ ಬದಲಾವಣೆಗೆ ಸಾಗುತ್ತಿರುವ ನಮ್ಮ ಪ್ರಯಾಣದಲ್ಲಿ ಸಿಲ್ವರ್ ಲೇಕ್ ಮತ್ತು ಅದರ ಸಹ ಹೂಡಿಕೆದಾರರು ಗೌರವಾನ್ವಿತ ಭಾಗೀದಾರರು. ಅವರ ನಂಬಿಕೆ ಮತ್ತು ಬೆಂಬಲಕ್ಕೆ ಸಂತೋಷವಾಗುತ್ತಿದೆ. ಭಾರತದ ರೀಟೇಲ್ ವಲಯದಲ್ಲಿನ ಅದ್ಭುತ ಅವಕಾಶ ಹಾಗೂ ರಿಲಯನ್ಸ್ ರೀಟೇಲ್ ಸಾಮರ್ಥ್ಯವನ್ನು ಸಿಲ್ವರ್ ಲೇಕ್ ಮತ್ತು ಸಹ ಹೂಡಿಕೆದಾರರ ಹೆಚ್ಚುವರಿ ಹೂಡಿಕೆಯು ಸಮರ್ಥಿಸುವಂತಿದೆ ಎಂದು ಹೇಳಿದ್ದಾರೆ.

ಸಿಲ್ವರ್ ಲೇಕ್ ಕೋ- ಸಿಇಒ ಎಗೊನ್ ಡರ್ಬನ್

ಸಿಲ್ವರ್ ಲೇಕ್ ಕೋ- ಸಿಇಒ ಎಗೊನ್ ಡರ್ಬನ್

ಸಿಲ್ವರ್ ಲೇಕ್ ಕೋ- ಸಿಇಒ ಹಾಗೂ ಮ್ಯಾನೇಜಿಂಗ್ ಪಾರ್ಟನರ್ ಎಗೊನ್ ಡರ್ಬನ್ ಅವರು ಈ ಹೂಡಿಕೆ ಬಗ್ಗೆ ಮಾತನಾಡಿ, ಈ ಅದ್ಭುತವಾದ ಅವಕಾಶದಲ್ಲಿ ಹೂಡಿಕೆ ಮಾಡಲು ನಮ್ಮ ಸಹ ಹೂಡಿಕೆದಾರರನ್ನು ಕರೆತರುತ್ತಿರುವುದು ಸಂತಸ ತಂದಿದೆ. ಕಳೆದ ಕೆಲವು ವಾರಗಳಿಂದ ಸತತವಾಗಿ ಹೂಡಿಕೆ ಆಗುತ್ತಿರುವುದು ರಿಲಯನ್ಸ್ ರೀಟೇಲ್ ಉದ್ಯಮದ ಮಾದರಿ (ಬಿಜಿನೆಸ್ ಮಾಡೆಲ್) ಹಾಗೂ ದೂರದೃಷ್ಟಿಗೆ ಸಾಕ್ಷಿ ಎಂದಿದ್ದಾರೆ.

Recommended Video

ಅವತ್ತು ಆಗಿದ್ದು ಇವತ್ತು ಆಗ್ತಿರೋದು ಎಲ್ಲಾ ಒಂದೇ | Oneindia Kanada
ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ

ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ

ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು. ಸಿಲ್ವರ್ ಲೇಕ್ ಪರವಾಗಿ ಲಥಾಮ್ ಅಂಡ್ ವಾಟ್ಕಿನ್ಸ್ ಮತ್ತು ಶಾರ್ದೂಲ್ ಅಮರ್ ಚಂದ್ ಮಂಗಲ್ ದಾಸ್ ಅಂಡ್ ಕೋ ಕಾನೂನು ಸಲಹೆಗಾರರಾಗಿದ್ದರು.

English summary
Reliance Industries Limited (“Reliance Industries”) and Reliance Retail Ventures Limited (“RRVL”) announced today that co-investors of Silver Lake will invest an additional ₹ 1,875 crore into RRVL, a subsidiary of Reliance Industries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X