ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ : ನವ್ಯೋದಯಕ್ಕೆ ಒತ್ತು, ಐಟಿ ಬಿಟಿಗೆ ಹೆಚ್ಚೇನು ಸಿಕ್ಕಿಲ್ಲ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 13ನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಸತತ ಮೂರನೇ ವರ್ಷ ಐಟಿ-ಬಿಟಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಆದರೆ, ನವೋದ್ಯಮಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್‌ನಲ್ಲಾಗುವ ನಿರೀಕ್ಷೆ ಸುಳ್ಳಾಗಿದೆ. ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ಮತ್ತೆ ವಿಫಲವಾಗಿದೆ.

ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:

* ನವೋದ್ಯಮಗಳ ಉತ್ತೇಜನಕ್ಕಾಗಿ ಕಲಬುರಗಿಯಲ್ಲಿ ದೇಶ್‍ಪಾಂಡ ಫೌಂಡೇಷನ್ ಸಹಯೋಗದೊಂದಿಗೆ 5 ಕೋಟಿ ರೂ.ಗಳ ವೆಚ್ಚದಲ್ಲಿ ಇನ್‍ಕ್ಯೂಬೇಷನ್ ಸೆಂಟರ್ ಸ್ಥಾಪನೆ.
*ಹಾರ್ಡವೇರ್ ಉಪಕರಣಗಳು ಮತ್ತು ಸೆಮಿಕಂಡಕ್ಟರ್ ಚಿಪ್‍ಗ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲುIESA (India
Electronics and Semiconductor Association) ಸಹಯೋಗದೊಂದಿಗೆ "Semiconductor fabless Accelerator Lab"(SFAL) ಸ್ಥಾಪನೆ

* ಕೇಂದ್ರ ಸರ್ಕಾರದ ಸಂಸ್ಥೆಯಾದ Centre for Cellular and Molecular Platforms (C-CAMP) ನ ಸಹಯೋಗದೊಂದಿಗೆ ಅಗ್ರಿ-ಇನ್ನೋವೇಷನ್ ಕೇಂದ್ರ ಸ್ಥಾಪನೆ.
* ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ "ಕರ್ನಾಟಕ ನಾವೀನ್ಯತಾ ಪ್ರಾಧಿಕಾರ" (Karnataka Innovation Authority)) ಸ್ಥಾಪನೆ.

Karnataka Budget 2018-19: What is the IT BT sector Share

* ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು/ ಉದ್ದಿಮೆಗಳು/
ನವೋದ್ಯಮಗಳನ್ನು ವಿಶೇಷ ಗಮನದಲ್ಲಿ ಇಟ್ಟುಕೊಂಡು ಉತ್ಪನ್ನ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಐಪಿ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಹೊಸ ಯೋಜನೆ ಪ್ರಾರಂಭ;

*ಪೇಟೆಂಟ್‍ಗಳ ವಿವರಗಳನ್ನು ಒಂದೆಡೆ ಸಂಗ್ರಹಿಸಿ ತಾಳೆ ನೋಡಲು ಹಾಗೂ ಪೇಟೆಂಟ್ ವಿನಿಮಯಕ್ಕೆ ಅನುಕೂಲವಾಗುವಂತೆ ಪೇಟೆಂಟ್‍ಗಳ ಭಂಡಾರ ಸೃಜನೆ.

* ಉದ್ಯಮಗಳ ವಿನ್ಯಾಸ ಹಾಗೂ ಉತ್ಪನ್ನಗಳ ವಿನ್ಯಾಸವನ್ನು ಉತ್ತೇಜಿಸಲು 'ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಡಿಸೈನ್' ಸ್ಥಾಪನೆ.
ಸೂಕ್ತ ಕಾನೂನು ಜಾರಿಯಾಗುವವರೆಗೆ ಹೊಸ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವ ಉದ್ದೇಶದಿಂದ 'ಲೀಗಲ್ ಫ್ರೇಮ್ ವರ್ಕ್ ಫಾರ್ ಇನ್ನೊವೇಶನ್' ಅನ್ನು ಸ್ಥಾಪನೆ.
* ದೀರ್ಘ ಅವಧಿಯ ಹೆರಿಗೆ ರಜೆ ಅಥವಾ ವ್ಯಾಸಂಗ ರಜೆಯಲ್ಲಿ ತೆರಳುವ ಐಟಿ ವಲಯದ ಮಹಿಳೆಯರು ಮತ್ತೆ ಉದ್ಯೋಗ ಕೈಗೊಳ್ಳಲು ನೆರವಾಗಲು ಅವರ ಕೌಶಲ್ಯ ಅಭಿವೃದ್ಧಿಗೆ ನಿರ್ದಿಷ್ಟ ಕಾರ್ಯಕ್ರಮಗಳ ಜಾರಿಗೆ ಕ್ರಮ.
* ವಿಜ್ಞಾನ ಮತ್ತು ಇಂಜಿನಿಯರಿಂಗ್‍ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನ ಪ್ರಾರಂಭಿಸಲು 1 ಕೋಟಿ ರೂ. ಅನುದಾನ.
* ಬೆಳಗಾವಿಯಲ್ಲಿ 3 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ 3-ಡಿ ತಾರಾಲಯ ಸ್ಥಾಪನೆ.

English summary
Karnataka Budget 2018-19: Information Technology, Bio Technology sector not satisfied with the share they got. Here are the announcement made by CM Siddaramaiah during his Budget speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X