ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!
ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಲ್ಕನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಒಟ್ಟಾರೆ ಐಟಿ ಬಿಟಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಗಿಫ್ಟ್ ಸಿಕ್ಕಿಲ್ಲ.
ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್ನಲ್ಲಾಗುವ ನಿರೀಕ್ಷೆ ಸುಳ್ಳಾಗಿದೆ. ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ಮತ್ತೆ ವಿಫಲವಾಗಿದೆ. ಕಂಪನಿಗಳ ಬಹುವಾರ್ಷಿಕ ಬೇಡಿಯಾದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.[ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]
ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:[ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]
* ನ್ಯೂಏಜ್ ಇನ್ಕ್ಯುಬೇಷನ್ ನೆಟ್ವರ್ಕ್ ಅಡಿ ರಾಜ್ಯಾದ್ಯಂತ ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 10 ಹೊಸ
ಇನ್ಕ್ಯುಬೇಟರ್ಗಳ ಸ್ಥಾಪನೆ.[ಸಿದ್ದರಾಮಯ್ಯ ಬಜೆಟ್: ಕೈಗಾರಿಕೆಗಳಿಗೆ ಸಿಕ್ಕಿದ್ದೇನು?]
* ರಾಜ್ಯಾದ್ಯಂತ ಇಂಟರ್ನೆಟ್ ಆಫ್ ಥಿಂಗ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಮೊದಲಾದ ಸಂಭಾವ್ಯ ಕ್ಷೇತ್ರಗಳಲ್ಲಿ
4 ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ಗಳ ಸ್ಥಾಪನೆ.[ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]
* ಕಿಯೋನಿಕ್ಸ್ ವತಿಯಿಂದ ಬೆಂಗಳೂರು ಮತ್ತು ಶಿವಮೊಗ್ಗ, ಬಾಗಲಕೋಟೆ ಮತ್ತು ಕಲ್ಬುರ್ಗಿ ಐ ಟಿ ಪಾರ್ಕುಗಳಲ್ಲಿ ಇನ್ಕ್ಯುಬೇಟರ್ ಮತ್ತು ಸಾಮಾನ್ಯ ಇನ್ಸುಟ್ರುಮೆಂಟೇಷನ್ ಸೌಲಭ್ಯ. ಬೆಳಗಾವಿ, ಬೀದರ್ ಮತ್ತು ವಿಜಯಪುರ ಗಳಲ್ಲಿ ಹೊಸ ಐಟಿ ಪಾರ್ಕ್-ಇನ್ಕ್ಯೂಬೇಟರ್ಗಳ ಸ್ಥಾಪನೆ.
* ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ತಾಲ್ಲೂಕುಗಳ 500 ಪ್ರೌಢಶಾಲೆಗಳಿಗೆ ಸೈನ್ಸ್ ಲ್ಯಾಬ್ - ಇನ್ ಎ ಬಾಕ್ಸ್ ಕಿಟ್ಗಳ
ವಿತರಣೆ.
* ವಿಜಯಪುರ ಜಿಲ್ಲೆಯಲ್ಲಿ ಕಿರು ತಾರಾಲಯ ಸ್ಥಾಪನೆ.
* ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಗುಣಮಟ್ಟ ಉತ್ತಮಪಡಿಸಲು ವಿಷನ್ ಗ್ರೂಪ್ ವತಿಯಿಂದ ಕಾರ್ಯಕ್ರಮ ಆಯೋಜನೆ -8 ಕೋಟಿ ರೂ.
ಇ-ಆಡಳಿತ
* ಬೆಂಗಳೂರು ನಗರದಲ್ಲಿ 33 ಬೆಂಗಳೂರು ಒನ್ ಕೇಂದ್ರಗಳ ಸ್ಥಾಪನೆ.
* ಜಿಲ್ಲಾ ಮಟ್ಟದಲ್ಲಿ ವಿನೂತನ ಇ-ಆಡಳಿತ ಯೋಜನೆಗಳಿಗೆ ಧನಸಹಾಯ.
* ರಾಜ್ಯ ಮಟ್ಟದಲ್ಲಿ ನಾಗರಿಕ ಸ್ನೇಹಿ ಇ-ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ
ನೀಡಲು ಕ್ರಮ.
*ಮಾಹಿತಿ ತಂತ್ರಜ್ಞಾನದ ಪ್ರಮಾಣಗಳಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನದ ಎಲ್ಲಾ ರಕ್ಷಣಾ ಚಟುವಟಿಕೆಗಳ ಬಲವರ್ಧನೆಗೆ ಸೆಕ್ಯೂರಿಟಿ ಆಪರೇಷನಲ್ ಸೆಂಟರ್ ಸ್ಥಾಪನೆ.
* 20 ರಾಷ್ಟ್ರೀಯ ಇ-ಆಡಳಿತ ಸಮ್ಮೇಳನವನ್ನು ರಾಜ್ಯದಲ್ಲಿ ಫೆಬ್ರವರಿ 2017ರಲ್ಲಿ ಆಯೋಜಿಸಲು ಕ್ರಮ.