ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಾಲ್ಕನೇ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೇರವಾಗಿ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಒಟ್ಟಾರೆ ಐಟಿ ಬಿಟಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಗಿಫ್ಟ್ ಸಿಕ್ಕಿಲ್ಲ.

ಐಟಿ-ಬಿಟಿ ಕಂಪನಿಗಳನ್ನು ರಾಜಧಾನಿ ಬೆಂಗಳೂರು ಬಿಟ್ಟು ರಾಜ್ಯದ ಇತರೆಡೆಗೂ ವಿಸ್ತರಿಸುವ ಪ್ರಯತ್ನ ಈ ಬಾರಿಯ ಬಜೆಟ್‌ನಲ್ಲಾಗುವ ನಿರೀಕ್ಷೆ ಸುಳ್ಳಾಗಿದೆ. ಎರಡು ಹಾಗೂ ಮೂರನೇ ಸ್ತರದ ನಗರಗಳಿಗೆ ಐಟಿ ಕಂಪನಿಗಳನ್ನು ಕರೆದೊಯ್ಯುವಲ್ಲಿ ಸರ್ಕಾರ ಸಂಪೂರ್ಣ ಮತ್ತೆ ವಿಫಲವಾಗಿದೆ. ಕಂಪನಿಗಳ ಬಹುವಾರ್ಷಿಕ ಬೇಡಿಯಾದ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.[ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]

Siddaramaiah Karnataka Budget 2016-17

ಮಾಹಿತಿ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಿಕ್ಕಿರುವ ಕೊಡುಗೆ ಇಲ್ಲಿದೆ:[ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

* ನ್ಯೂಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ ಅಡಿ ರಾಜ್ಯಾದ್ಯಂತ ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 10 ಹೊಸ
ಇನ್‌ಕ್ಯುಬೇಟರ್‌ಗಳ ಸ್ಥಾಪನೆ.[ಸಿದ್ದರಾಮಯ್ಯ ಬಜೆಟ್: ಕೈಗಾರಿಕೆಗಳಿಗೆ ಸಿಕ್ಕಿದ್ದೇನು?]

* ರಾಜ್ಯಾದ್ಯಂತ ಇಂಟರ್‌ನೆಟ್ ಆಫ್ ಥಿಂಗ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಮೊದಲಾದ ಸಂಭಾವ್ಯ ಕ್ಷೇತ್ರಗಳಲ್ಲಿ
4 ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್‌ಗಳ ಸ್ಥಾಪನೆ.[ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]

* ಕಿಯೋನಿಕ್ಸ್ ವತಿಯಿಂದ ಬೆಂಗಳೂರು ಮತ್ತು ಶಿವಮೊಗ್ಗ, ಬಾಗಲಕೋಟೆ ಮತ್ತು ಕಲ್ಬುರ್ಗಿ ಐ ಟಿ ಪಾರ್ಕುಗಳಲ್ಲಿ ಇನ್‌ಕ್ಯುಬೇಟರ್ ಮತ್ತು ಸಾಮಾನ್ಯ ಇನ್ಸುಟ್ರುಮೆಂಟೇಷನ್ ಸೌಲಭ್ಯ. ಬೆಳಗಾವಿ, ಬೀದರ್ ಮತ್ತು ವಿಜಯಪುರ ಗಳಲ್ಲಿ ಹೊಸ ಐಟಿ ಪಾರ್ಕ್-ಇನ್‌ಕ್ಯೂಬೇಟರ್‌ಗಳ ಸ್ಥಾಪನೆ.

* ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ತಾಲ್ಲೂಕುಗಳ 500 ಪ್ರೌಢಶಾಲೆಗಳಿಗೆ ಸೈನ್ಸ್ ಲ್ಯಾಬ್ - ಇನ್ ಎ ಬಾಕ್ಸ್ ಕಿಟ್‌ಗಳ
ವಿತರಣೆ.

* ವಿಜಯಪುರ ಜಿಲ್ಲೆಯಲ್ಲಿ ಕಿರು ತಾರಾಲಯ ಸ್ಥಾಪನೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ಗುಣಮಟ್ಟ ಉತ್ತಮಪಡಿಸಲು ವಿಷನ್ ಗ್ರೂಪ್ ವತಿಯಿಂದ ಕಾರ್ಯಕ್ರಮ ಆಯೋಜನೆ -8 ಕೋಟಿ ರೂ.

ಇ-ಆಡಳಿತ
* ಬೆಂಗಳೂರು ನಗರದಲ್ಲಿ 33 ಬೆಂಗಳೂರು ಒನ್ ಕೇಂದ್ರಗಳ ಸ್ಥಾಪನೆ.

* ಜಿಲ್ಲಾ ಮಟ್ಟದಲ್ಲಿ ವಿನೂತನ ಇ-ಆಡಳಿತ ಯೋಜನೆಗಳಿಗೆ ಧನಸಹಾಯ.

* ರಾಜ್ಯ ಮಟ್ಟದಲ್ಲಿ ನಾಗರಿಕ ಸ್ನೇಹಿ ಇ-ಆಡಳಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ
ನೀಡಲು ಕ್ರಮ.

*ಮಾಹಿತಿ ತಂತ್ರಜ್ಞಾನದ ಪ್ರಮಾಣಗಳಿಗೆ ಅನುಗುಣವಾಗಿ ಮಾಹಿತಿ ತಂತ್ರಜ್ಞಾನದ ಎಲ್ಲಾ ರಕ್ಷಣಾ ಚಟುವಟಿಕೆಗಳ ಬಲವರ್ಧನೆಗೆ ಸೆಕ್ಯೂರಿಟಿ ಆಪರೇಷನಲ್ ಸೆಂಟರ್ ಸ್ಥಾಪನೆ.

* 20 ರಾಷ್ಟ್ರೀಯ ಇ-ಆಡಳಿತ ಸಮ್ಮೇಳನವನ್ನು ರಾಜ್ಯದಲ್ಲಿ ಫೆಬ್ರವರಿ 2017ರಲ್ಲಿ ಆಯೋಜಿಸಲು ಕ್ರಮ.

English summary
Karnataka Budget 2016-17: Information Technology, Bio Technology sector not satisfied with the share they got. But the Tier II and III strategy of the government has failed so far with IT companies refusing to leave Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X