• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ

By Mahesh
|

ಬಿಡದಿ, ಆಗಸ್ಟ್ 27: ಬಾಷ್ ಸಂಸ್ಥೆ ಭಾರತದಲ್ಲಿ ತನ್ನ 14ನೇ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಬೆಂಗಳೂರಿನ ಸಮೀಪದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದಲ್ಲಿರುವ ಆಧುನಿಕ ಆವಿಷ್ಕಾರಗಳ ಉತ್ಪಾದನಾ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.

ಬಿಡದಿ ಘಟಕದಲ್ಲಿ ಡೀಸೆಲ್ ಸಿಸ್ಟಂ ಡಿವಿಜನ್ ಗಳಿಗೆ ಬೇಕಾಗುವ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತದೆ. ಅದು ಬಾಷ್ ಲಿಮಿಟೆಡ್ ನ ಒಂದು ಅಂಗ ಸಂಸ್ಥೆಯಾಗಿದ್ದು, ಬಾಷ್ ಇಂಡಿಯಾ ಕಂಪನಿಯ ಭಾಗವಾಗಿದೆ. ಸೆಪ್ಟೆಂಬರ್ 2013ರಲ್ಲಿ ಹೊಸ ಘಟಕವಾದ ಬಿಡದಿಯಲ್ಲಿ ಗುದ್ದಲಿ ಪೂಜೆ ನಡೆದಂದಿನಿಂದ ಇಲ್ಲಿಯ ವರೆಗೆ 3000 ಮಿಲಿಯನ್ /340 ಕೋಟಿ ರೂಪಾಯಿಗಳ (ಸುಮಾರಾಗಿ 45 ಮಿಲಿಯನ್ ಯೂರೋಗಳು) ಹೊಸ ಘಟಕಕ್ಕಾಗಿ ಹೂಡಿಕೆ ಮಾಡಲಾಗಿದೆ. [ಉತ್ಪಾದನಾ ಘಟಕಗಳ ಪೈಕಿ ಬಾಷ್ ಸಂಬಳವೇ ಅಧಿಕ!]

ಇಲ್ಲಿ ಕಟ್ಟಲ್ಪಟ್ಟ ಕಟ್ಟಡದ ವಿಸ್ತೀರ್ಣವು 38,000 ಚದರ ಮೀಟರುಗಳು. ಬಾಷ್ ಗ್ರೂಪ್‍ಗೆ ಭಾರತದಲ್ಲಿ ಹೂಡಿಕೆ ಮಾಡುವುದರ ಪ್ರಾಮುಖ್ಯತೆಯನ್ನು ಇದು ಒತ್ತಿ ಹೇಳುತ್ತದೆ. "ಏಷ್ಯಾ ಪೆಸಿಫಿಕ್ ನ ನಮ್ಮ ಬೆಳವಣಿಗೆ ಕೌಶಲ್ಯಕ್ಕೆ ಭಾರತವು ಆಧಾರ ಸ್ತಂಭವಾಗಿದೆ. ಈ ವಲಯದಲ್ಲಿ ಸ್ಥಳೀಯತೆಯ ಉಪಸ್ಥಿತಿಯು ನಮ್ಮ ಮುಂದಿನ ಬೆಳವಣಿಗೆಗೆ ಬಲಿಷ್ಠವಾಗಿದೆ," ಎಂದು ಪೀಟರ್ ಟೈರೋಲರ್, ಬೋರ್ಡ್ ಆಫ್ ಮೆನೇಜ್ ಮೆಂಟ್ ಸದಸ್ಯರು, ಬಾಷ್ ಗ್ರೂಪ್ ಹೇಳಿದರು.

ಬಿಡದಿ ಘಟಕವು ಪ್ರಮುಖವಾಗಿ ಕಾಮನ್ ರೈಲ್ ಪಂಪುಗಳನ್ನು ಇತರ ಫ್ಯುಯೆಲ್ ಇಂಜೆಕ್ಷನ್ ಪಂಪುಗಳ ಜೊತೆಗೇ ಉತ್ಪಾದಿಸಲಿದ್ದು, ಇದನ್ನು ಎರಡನೆಯ ಹಂತದಲ್ಲಿ ನಿಯೋಜಿಸಲಾಗಿದೆ. 2016ರ ಸುಮಾರಿಗೆ ಬಾಷ್ ಕಾಮನ್ ರೈಲ್ ಸಿಸ್ಟಂ ಮಲ್ಟಿ ಸಿಲಿಂಡರ್ ಫ್ಯುಯೆಲ್ ಇಂಜೆಕ್ಷನ್ ಪಂಪುಗಳನ್ನು ಬಿಡದಿಯಲ್ಲಿ ತಯಾರಿಸಲಿದೆ.

 ಬಿಡದಿಯಲ್ಲಿ ಬಾಷ್ 14ನೇ ಘಟಕ

ಬಿಡದಿಯಲ್ಲಿ ಬಾಷ್ 14ನೇ ಘಟಕ

ಸೆಪ್ಟೆಂಬರ್ 2013ರಲ್ಲಿ ಹೊಸ ಘಟಕವಾದ ಬಿಡದಿಯಲ್ಲಿ ಗುದ್ದಲಿ ಪೂಜೆ ನಡೆದಂದಿನಿಂದ ಇಲ್ಲಿಯ ವರೆಗೆ 3000 ಮಿಲಿಯನ್ /340 ಕೋಟಿ ರೂಪಾಯಿಗಳ (ಸುಮಾರಾಗಿ 45 ಮಿಲಿಯನ್ ಯೂರೋಗಳು) ಹೊಸ ಘಟಕಕ್ಕಾಗಿ ಹೂಡಿಕೆ ಮಾಡಲಾಗಿದೆ. ಬಿಡದಿ ಘಟಕದ ನಿರ್ಮಾಣವು ಎರಡು ಹಂತಗಳಲ್ಲಿ ನಡೆಯಲಿದ್ದು, ಎರಡನೆಯ ಹಂತವು 2018ರಲ್ಲಿ ಮುಕ್ತಾಯಗೊಳ್ಳುವ ಯೋಜನೆಯಿದೆ.

ಮೊಬಿಲಿಟಿ ಸಲ್ಯೂಷನ್ಸ್ ಉತ್ಪನ್ನ

ಮೊಬಿಲಿಟಿ ಸಲ್ಯೂಷನ್ಸ್ ಉತ್ಪನ್ನ

ಬಿಡದಿ ಘಟಕವು ಹೊಸ ಮೊಬಿಲಿಟಿ ಸಲ್ಯೂಷನ್ಸ್ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲಿದೆ. ಬಿಡದಿ ಘಟಕದ ನಿರ್ಮಾಣವು ಎರಡು ಹಂತಗಳಲ್ಲಿ ನಡೆಯಲಿದ್ದು, ಎರಡನೆಯ ಹಂತವು 2018ರಲ್ಲಿ ಮುಕ್ತಾಯಗೊಳ್ಳುವ ಯೋಜನೆಯಿದೆ. ಆಧುನಿಕ ಆವಿಷ್ಕಾರಗಳ ಉತ್ಪಾದನಾ ಸೌಲಭ್ಯವು ಬಿಡದಿಯಲ್ಲಿದ್ದು, ಪ್ರಸ್ತುತವಾಗಿ ಆಡುಗೋಡಿ ಘಟಕದಲ್ಲಿ ಉತ್ಪಾದಿಸುತ್ತಿರುವ ಡೀಸೆಲ್ ಉತ್ಪನ್ನಗಳನ್ನು ಉತ್ಪಾದಿಸಲಿದೆ. ಇಲ್ಲಿ ಸುಮಾರು 3,000 ಉದ್ಯೋಗಿಗಳು ಇದ್ದಾರೆ.

ಅಧ್ಯಕ್ಷರು, ಬಾಷ್ ಇಂಡಿಯಾ ಡಾ. ಸ್ಟೀಫನ್ ಬನ್ರ್ಸ್

ಅಧ್ಯಕ್ಷರು, ಬಾಷ್ ಇಂಡಿಯಾ ಡಾ. ಸ್ಟೀಫನ್ ಬನ್ರ್ಸ್

ಡಾ. ಸ್ಟೀಫನ್ ಬನ್ರ್ಸ್, ಅಧ್ಯಕ್ಷರು, ಬಾಷ್ ಇಂಡಿಯಾ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಾಷ್ ಲಿಮಿಟೆಡ್ : ನಾವು ಭಾರತದಲ್ಲಿ ಬಹು ವಿಸ್ತರಣೆಯ ಅವಕಾಶದ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ ಮತ್ತು ದೇಶದ ಭವಿಷ್ಯಕ್ಕಾಗಿ ಹೆಚ್ಚಿನ ಯೋಜನೆಗಳನ್ನು, ಉತ್ಪನ್ನಗಳನ್ನು ಮತ್ತು ಉತ್ಪಾದನೆಗಳನ್ನು ತರಲು ಪ್ರಯತ್ನಿಸುತ್ತಿದ್ದೇವೆ," "ಭಾರತದಲ್ಲಿ ನಮ್ಮ ಬೆಳವಣಿಗೆಯು ಕರ್ನಾಟಕದ ರಾಜ್ಯ ಸರಕಾರದೊಂದಿಗೆ ಅತ್ಯಂತ ನಿಕಟವಾಗಿ, ಅನ್ಯೋನ್ಯವಾಗಿ ಬೆರೆತುಕೊಂಡಿದೆ ಮತ್ತು ನಾವು ಈ ಸಂಬಂಧವು ಇನ್ನಷ್ಟು ಉತ್ತಮಗೊಳ್ಳುತ್ತದೆಯೆಂದು ಭಾವಿಸಿದ್ದೇವೆ," ಎಂದಿದ್ದಾರೆ.

ಸಮಾರಂಭದಲ್ಲಿ ಹಾಜರಿದ್ದ ಗಣ್ಯರು

ಸಮಾರಂಭದಲ್ಲಿ ಹಾಜರಿದ್ದ ಗಣ್ಯರು

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅವರ ಜೊತೆಗೆ ಆರ್.ವಿ. ದೇಶಪಾಂಡೆ, ಕೈಗಾರಿಕಾ ಸಚಿವರು, ರತ್ನಪ್ರಭಾ, ಹೆಚ್ಚುವರಿ ಕಾರ್ಯದರ್ಶಿ ಕೈಗಾರಿಕಾ ಇಲಾಖೆ, ಕರ್ನಾಟಕ್ ಮಾಗಡಿ, ಪೀಟರ್ ಟೈರೋಲರ್, ಸದಸ್ಯರು, ಬೋರ್ಡ್ ಆಫ್ ಮೆನೇಜ್ಮೆಂಟ್, ರಾಬರ್ಟ್ ಬಾಷ್ ಜಿ.ಎಂ.ಬಿ.ಎಚ್. ಮತ್ತು ಡಾ. ಸ್ಟೀಫನ್ ಬನ್ರ್ಸ್, ಅಧ್ಯಕ್ಷರು, ಬಾಷ್ ಗ್ರೂಪ್ ಇಂಡಿಯಾ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬಾಷ್ ಲಿಮಿಟೆಡ್, ಹಾಜರಿದ್ದರು.

English summary
Karnataka CM Siddaramaiah today inaugurated Bosch's 14th manufacturing facility in India. The new state-of-the-art plant is located at Bidadi, Bengaluru and will manufacture products for the Diesel Systems division. Since the ground breaking in September 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more