• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂಪ್ಯೂಟರ್ ಗಳಿಗೀಗ ಶೆಲ್ ಶಾಕ್ ಬಗ್ ಭೀತಿ

By Mahesh
|

ಬೆಂಗಳೂರು, ಸೆ.26: ಹಾರ್ಟ್ ಬ್ಲೀಡ್ ಬಗ್ ನಂತರ ಈಗ ಜಗತ್ತಿನ ಲಕ್ಷಾಂತರ ಕಂಪ್ಯೂಟರ್ ಗಳಿಗೆ ಶೆಲ್ ಶಾಕ್ ಬಗ್ ಭೀತಿ ಎದುರಾಗಿದೆ. ಈಗಾಗಲೇ ಅನೇಕರು ಈ ಬಗ್ ದಾಳಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಹ್ಯಾಕರ್ ಗಳು ತಮ್ಮ ಕೈಚಳಕ ತೋರಲು ಸನ್ನದ್ಧರಾಗುತ್ತಿದ್ದಾರೆ.

ಆಪಲ್ ಸಂಸ್ಥೆಯ ಮ್ಯಾಕ್ ಕಂಪ್ಯೂಟರ್, ಲಿನಕ್ಸ್ ಅಧಾರಿತ ಆಪರೇಟಿಂಗ್ ಸಿಸ್ಟಮ್, ವೆಬ್ ಸರ್ವರ್ ಗಳು, ಇಂಟರ್ನೆಟ್ ಸಂಪರ್ಕ ಹೊಂದಿರುವ ಇನ್ನಿತರ ಸಾಧನಗಳ ಮೇಲೆ ಈ ಶೆಲ್ ಶಾಕ್ ಬಗ್ ದಾಳಿ ಮಾಡಲಿದೆ.

ಬಳಕೆದಾರದ ಗಮನಕ್ಕೆ ಬರುವುದೇ ಇಲ್ಲ: ಶೆಲ್ ಶಾಕ್ ಬಗ್ ನೇರವಾಗಿ Bash ಪ್ರೋಗ್ರಾಂ ಮೇಲೆ ದಾಳಿ ಮಾಡುತ್ತದೆ. ಬಾಶ್ ಕಂಪ್ಯೂಟರ್ ಬ್ಯಾಕ್ ಗ್ರೌಂಡ್ ನಲ್ಲಿ ನಡೆಯುವ ಕ್ರಿಯೆಯಾದ್ದರಿಂದ ಬಳಕೆದಾರರಿಗೆ ಸುಲಭಕ್ಕೆ ದಾಳಿಯ ಬಗ್ಗೆ ತಿಳಿಯುವುದಿಲ್ಲ. ಜಗತ್ತಿನ ಅರ್ಧಕ್ಕೂ ಹೆಚ್ಚು ವೆಬ್ ಸೈಟ್ ಗಳ ಸರ್ವರ್ ಗಳು ರನ್ ಆಗಲು ಈ ಬಾಶ್ ಪೋಗ್ರಾಂ ಅತ್ಯಗತ್ಯ.

ಸರ್ವರ್ ಗಳಲ್ಲದೆ ಸ್ಮಾರ್ಟ್ ಲೈಟ್ ಬಲ್ಬ್, ಇಂಟರ್ನೆಟ್ ರೂಟರ್ಸ್, ಡೂರ್ ಲಾಕ್ ಸಹ ತೊಂದರೆ ಅನುಭವಿಸಬಹುದು. ಹ್ಯಾಕರ್ ಗಳು ಈ ಸುರಕ್ಷಿತ ವೈಫಲ್ಯವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಇಡೀ ಅಪರೇಟಿಂಗ್ ಸಿಸ್ಟಮ್ ಕೈವಶ ಮಾಡಿಕೊಳ್ಳಬಹುದು ಎಂದು ಸೆಕ್ಯುರಿಟಿ ಸಂಸ್ಥೆ Rapid7 ಎಚ್ಚರಿಸಿದೆ.

ಕಳೆದ ಏಪ್ರಿಲ್‌ನಲ್ಲಿ ಪತ್ತೆಯಾಗಿರುವ ‘ಹಾರ್ಟ್‌ಬ್ಲೀಡ್' ವೈರಸ್‌ಗಿಂತಲೂ ಹೆಚ್ಚು ಭೀಕರವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಹಾರ್ಟ್‌ಬ್ಲೀಡ್ ವೈರಸ್ ಜಗತ್ತಿನಾದ್ಯಂತ ಈಗಾಗಲೇ ಸುಮಾರು 5 ಲಕ್ಷಕ್ಕೂ ಅಧಿಕ ಕಂಪ್ಯೂಟರ್‌ಗಳನ್ನು ಹಾನಿಗೊಳಿಸಿದ್ದರೆ, ಶೆಲ್‌ಶಾಕ್ ಸುಮಾರು 500 ದಶಲಕ್ಷ ಕಂಪ್ಯೂಟರ್‌ಗಳನ್ನು ಹಾಳು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಪರಿಹಾರ ಏನು? : ಅಮೆಜಾನ್ ಸಂಸ್ಥೆ ತನ್ನ ವೆಬ್ ಸೇವೆ ಬಳಸುವ ಗ್ರಾಹಕರಿಗೆ ಸಾಫ್ಟ್ ವೇರ್ ಪ್ಯಾಚ್ ಕಳಿಸುತ್ತಿದೆ. ದೊಡ್ಡ ದೊಡ್ಡ ಕಂಪನಿಗಳು ಇನ್ನೂ ತಮ್ಮ ಗ್ರಾಹಕರಿಗೆ ಯಾವುದೇ ಸಂದೇಶ ಕಳಿಸಿಲ್ಲ. ಅಪಾಚಿ ಸರ್ವರ್, ಬ್ಯಾಶ್ ಪೋಗ್ರಾಂವುಳ್ಳ ಸಿಸ್ಟಮ್ ಗಳು ದಶಕಗಳಿಂದ ಯಾವುದೇ ತೊಂದರೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ಯಾರಾದರೂ ಹ್ಯಾಕರ್ ಇವುಗಳ ನೂನ್ಯತೆಯನ್ನು ಎತಿ ಹಿಡಿಯುವ ತನಕ ಯಾವುದು ಸುರಕ್ಷಿತ ಎಂಬುದನ್ನು ಧೈರ್ಯದಿಂದ ಹೇಳಲಾಗದು.

English summary
Shellshock Shocker: A devastating security flaw could leave all Apple Mac computers, about half of all websites and even internet connected home appliances vulnerable to hackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more