ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಲ್ ಲ್ಯೂಬ್ರಿಕೆಂಟ್ಸ್ ಬೈಕ್ ಮೆಕ್ಯಾನಿಕ್‍ಗಳಿಗೆ ತರಬೇತಿ

|
Google Oneindia Kannada News

ಬೆಂಗಳೂರು, ಸೆ.15: ಸಿದ್ಧ ಲ್ಯೂಬ್ರಿಕೆಂಟ್ ತಯಾರಿಕ ಸಂಸ್ಥೆಯಾಗಿರುವ ಶೆಲ್ ಲ್ಯೂಬ್ರಿಕೆಂಟ್ಸ್ ಇದೇ ಮೊದಲ ಬಾರಿಗೆ ಬೈಕ್ ಮೆಕ್ಯಾನಿಕ್‍ಗಳಿಗೆ ಮತ್ತು ಇಂಡಿಪೆಂಡೆಂಟ್ ವರ್ಕ್‍ಶಾಪ್ ಓನರ್ (ಐಡಬ್ಲ್ಯೂಎಸ್)ಗಳಿಗೆ ಲ್ಯೂಬ್ರಿಕೆಂಟ್‍ಗಳ ಬಗ್ಗೆ ತರಬೇತಿ ನೀಡುವ ಸಲುವಾಗಿ ಮಾಸ್ಟರ್ ಕ್ಲಾಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಮೂಲಕ ಶೆಲ್‍ನ ತಂತ್ರಜ್ಞಾನ ಮತ್ತು ಬದ್ಧತೆ ಯಾವ ರೀತಿ ಅತ್ಯುತ್ತಮ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಈ ರೀತಿಯ ತರಬೇತಿ ಕಾರ್ಯಕ್ರಮವನ್ನು ದೇಶಾದ್ಯಂತ 16 ನಗರಗಳಲ್ಲಿ ಆಯೋಜಿಸಿದ್ದು, ಸುಮಾರು 7000 ಕ್ಕೂ ಅಧಿಕ ಮೆಕ್ಯಾನಿಕ್‍ಗಳು ಮತ್ತು ಐಡಬ್ಲ್ಯೂಎಸ್‍ಗಳು ಪಾಲ್ಗೊಂಡಿದ್ದರು.

ಹೀರೋ ಎಲೆಕ್ಟ್ರಿಕ್ ನಿಂದ ಎರಡು ಹೊಸ ಇ ಸ್ಕೂಟರ್ ಬಿಡುಗಡೆಹೀರೋ ಎಲೆಕ್ಟ್ರಿಕ್ ನಿಂದ ಎರಡು ಹೊಸ ಇ ಸ್ಕೂಟರ್ ಬಿಡುಗಡೆ

ಬೆಂಗಳೂರಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಶೆಲ್‍ನ ತಾಂತ್ರಿಕ ಪರಿಣತರನ್ನು ನೇರವಾಗಿ ಭೇಟಿ ಮಾಡಿ ಅವರಿಂದ ಭವಿಷ್ಯದ ದ್ವಿಚಕ್ರ ವಾಹನಗಳ ತಂತ್ರಜ್ಞಾನ, ತಮ್ಮ ವ್ಯವಹಾರದಲ್ಲಿ ಸಾಧ್ಯವಿರುವ ಬದಲಾವನೆ ಮತ್ತು ಅತ್ಯುತ್ತಮ ಕಾರ್ಯಕ್ಕೆ ಪ್ರಮಾಣ ಪತ್ರಗಳು ಮತ್ತು ಮಾನ್ಯತೆ ಪಡೆಯುವ ಬಗೆ ಹೇಗೆಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನು ಮೆಕ್ಯಾನಿಕ್‍ಗಳು ಮತ್ತು ಐಡಬ್ಲ್ಯೂಎಸ್‍ಗಳಿಗೆ ಒದಗಿಸಿಕೊಡಲಾಗಿತ್ತು.

ವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲ

ಈ ಬಗ್ಗೆ ಮಾತನಾಡಿದ ಶೆಲ್ ಲ್ಯೂಬ್ರಿಕೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ಮಾನ್ಸಿ ತ್ರಿಪಾಠಿ ಅವರು, "ಇತ್ತೀಚಿನ ಉದ್ಯಮ ಅಭಿವೃದ್ಧಿಗಳು, ತಂತ್ರಜ್ಞಾನಗಳು ಮತ್ತು ಅತ್ಯುತ್ತಮವಾದ ಪದ್ಧತಿ, ವಿಧಾನಗಳನ್ನು ನಮ್ಮ ಮೌಲ್ಯಾಧಾರಿತ ಪಾಲುದಾರರಿಗೆ ತಿಳಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಮೌಲ್ಯವರ್ಧಿತ ವ್ಯವಹಾರಕ್ಕೆ ಈ ಮೆಕ್ಯಾನಿಕ್ ಸಮುದಾಯವು ಅತ್ಯಂತ ಪ್ರಮುಖವಾದ ಭಾಗವಾಗಿದೆ ಮತ್ತು ಖರೀದಿದಾರರು ಖರೀದಿಸುವ ಉತ್ಪನ್ನವನ್ನು ಈ ಸಮುದಾಯವೇ ನಿರ್ಧಾರ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ಸಮುದಾಯ ನಮಗೆ ಅತ್ಯಂತ ಪ್ರಮುಖವಾದ ಅಂಗವಾಗಿದೆ. ಬೈಕ್‍ನ ಲ್ಯೂಬ್ರಿಕೆಂಟ್ ಬ್ರ್ಯಾಂಡ್ ಆಗಿರುವ ಶೆಲ್ ಅಡ್ವಾನ್ಸ್ ಮೆಕ್ಯಾನಿಕ್‍ಗಳಿಗೆ ಮೇಲ್ದರ್ಜೆಯ ಕೌಶಲ್ಯಗಳನ್ನು ಒದಗಿಸುತ್ತಿದೆ. ಇದಲ್ಲದೇ ಆಟೋಮೋಬೈಲ್ ಕ್ಷೇತ್ರದಲ್ಲಿ ಆಧುನೀಕತೆಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಲು ನಾವು ಅವರಿಗೆ ನೆರವಾಗುತ್ತಿದ್ದೇವೆ. ಈ ದಿಸೆಯಲ್ಲಿ ಮೆಕ್ಯಾನಿಕ್‍ಗಳಿಗೆ ಸೂಕ್ತ ತರಬೇತಿ ನೀಡುತ್ತಿರುವ ಪರಿಣತ ತಂಡಕ್ಕೆ ನಾವು ಧನ್ಯವಾದಗಳನ್ನು ಹೇಳುತ್ತೇವೆ" ಎಂದು ತಿಳಿಸಿದರು.

Shell Lubricants training session for bike mechanics in Bengaluru

ಮಾಸ್ಟರ್ ಕ್ಲಾಸ್ ಗೆ ಆಗಮಿಸಿದ್ದ ಮೆಕ್ಯಾನಿಕ್ ನಾರಾಯಣ್ ಅವರು ಮಾತನಾಡಿ, "ಈ ಜ್ಞಾನಾಧಾರಿತ ವೇದಿಕೆಗೆ ಆಹ್ವಾನಿಸಿ ನಮಗೆ ಸೂಕ್ತವಾದ ತರಬೇತಿ ಮತ್ತು ಮಾಹಿತಿ ನೀಡಿದ್ದಕ್ಕಾಗಿ ಶೆಲ್ ಲ್ಯೂಬ್ರಿಕೆಂಟ್ಸ್‍ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉದ್ಯಮದಲ್ಲಿ ಹೊಸ ಪೀಳಿಗೆಯ ವಾಹನಗಳು, ಉನ್ನತ ಮಟ್ಟದ ಸಾಮಥ್ರ್ಯಗಳು ಮತ್ತು ಪರಿಣಾಮಕಾರಿ ಅಂಶಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ತರಬೇತಿ ಕಾರ್ಯಕ್ರಮ ನನಗೆ ನಿರ್ಣಾಯಕವಾಗಿತ್ತು. ಭಾರತದಲ್ಲಿ ಮೆಕ್ಯಾನಿಕ್ ಸಮುದಾಯವನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಶೆಲ್ ಕೈಗೊಂಡಿರುವ ಈ ಕಾರ್ಯಕ್ರಮ ಸ್ವಾಗತಾರ್ಹವಾಗಿದೆ. ಇದಲ್ಲದೇ, ಸ್ಥಳೀಯ ಭಾಷೆಯಲ್ಲಿಯೇ ಮಾಹಿತಿಗಳನ್ನು ಮತ್ತು ತರಬೇತಿಯನ್ನು ನೀಡಿದ್ದು ಸಂತಸ ತಂದಿದೆ" ಎಂದರು.

ಬಳಸಿದ ಬೈಕ್‍ಗಳ ಅತಿದೊಡ್ಡ ಶೋರೂಂ ಉದ್ಘಾಟಿಸಿದ ರಾಗಿಣಿ ದ್ವಿವೇದಿಬಳಸಿದ ಬೈಕ್‍ಗಳ ಅತಿದೊಡ್ಡ ಶೋರೂಂ ಉದ್ಘಾಟಿಸಿದ ರಾಗಿಣಿ ದ್ವಿವೇದಿ

ಮತ್ತೋರ್ವ ಮೆಕ್ಯಾನಿಕ್ ಕುಮಾರ್ ಅವರು ಮಾತನಾಡಿ, "ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಮತ್ತು ಮಾಹಿತಿಗಳನ್ನು ನೀಡಿದ್ದು ಪ್ರಮುಖವಾಗಿತ್ತು ಮತ್ತು ನಮಗೆಲ್ಲರಿಗೂ ಪ್ರಯೋಜನಕಾರಿಯಾಗಿತ್ತು. ಈ ತರಬೇತಿ ಪೂರ್ಣಗೊಳಿಸಿದ ನಂತರ ಶೆಲ್‍ನಿಂದ ನಾನು ಪ್ರಮಾಣಪತ್ರವನ್ನು ಪಡೆದಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ಇದು ನಾನು ಗ್ರಾಹಕರ ನಂಬಿಕೆಯನ್ನು ಗಳಿಸಲು ಪ್ರಯೋಜನವಾಗಲಿದೆ"ಎಂದು ತಿಳಿಸಿದರು.

English summary
Shell Lubricants had organised a masterclass training session in Bengaluru for bike mechanics and independent workshop owners (IWS).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X