ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿ 100 ರೂ ಗೆ ಮಾತ್ರ ಬೆಲೆ

ಪ್ರಧಾನ ಮಂತ್ರಿಗ ಮೋದಿ ಅವರು 500, 1000 ರೂ ನೋಟು ಬಳಕೆ ಕಾನೂನಾತ್ಮಕ ನಿಷೇಧದ ಘೋಷಣೆ ಅನುಸರಿಸಿ ನವೆಂಬರ್ ೦9, 2016 ರಿಂದ ಖಾಸಗಿ ವಲಯದ ಇಂಧನ ಕಂಪನಿಗಳು ತಮ್ಮ ರೀಟೇಲ್ ಸ್ಟೇಷನ್ ಗಳಲ್ಲಿ 500, 1000ರೂ. ಸ್ವೀಕರಿಸುವಂತಿಲ್ಲ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್. 9: ಪ್ರಧಾನ ಮಂತ್ರಿಗ ಮೋದಿ ಅವರು 500, 1000 ರೂ ನೋಟು ಬಳಕೆ ಕಾನೂನಾತ್ಮಕ ನಿಷೇಧದ ಘೋಷಣೆ ಅನುಸರಿಸಿ ನವೆಂಬರ್ ೦9, 2016 ರಿಂದ ಖಾಸಗಿ ವಲಯದ ಇಂಧನ ಕಂಪನಿಗಳು ತಮ್ಮ ರೀಟೇಲ್ ಸ್ಟೇಷನ್ ಗಳಲ್ಲಿ 500, 1000ರೂ. ಸ್ವೀಕರಿಸುವಂತಿಲ್ಲ.

ಗ್ಯಾಲರಿ : ನೋಟು ಬದಲಾವಣೆಗಾಗಿ ನೂಕು ನುಗ್ಗಲು

ಈ ಕುರಿತು ಪ್ರತಿಕ್ರಿಯಿಸಿರುವ ಶೆಲ್ ಇಂಡಿಯಾ ಮಾರ್ಕೆಟ್ ಪ್ರೈ.ಲೀ ನಿರ್ದೇಶಕ ರವಿ ಸುಂದರ್ ರಾಜನ್, ಗ್ರಾಹಕ ಸಂತೃಪ್ತಿ ಮತ್ತು ಅವರ ನಿರೀಕ್ಷೆ ತಲುಪುವುದು ಶೆಲ್ ನ ವಹಿವಾಟಿನ ಪ್ರಧಾನ ಅಂಗ.[ಹೊಸ ನೋಟುಗಳನ್ನು ಬಳಸುವ ಮುನ್ನ ಈ ರೀತಿ ಪರೀಕ್ಷಿಸಿ]

ಇತ್ತೀಚಿನ 500, 1000ರೂ. ನೋಟು ನಿಷೇಧದ ಘೋಷಣೆ ಆಧರಿಸಿ ಖಾಸಗಿ ತೈಲ ಕಂಪನಿಯಾದ ಶೆಲ್ ಈ ನೋಟುಗಳನ್ನು ಸ್ವೀಕರಿಸುವುದಿಲ್ಲ. ಖರೀದಿಗೆ ಪ್ರತಿಯಾಗಿ 100 ನೋಟು ಸ್ವೀಕರಿಸುತ್ತೇವೆ. [ಬ್ಯಾಂಕುಗಳಿಗೆ ವಾರಾಂತ್ಯ ರಜೆ ಇಲ್ಲ, ನ.10 ರಿಂದ ಹೊಸ ನೋಟು!]

Shell India said it would not accept the notes at its outlets

ಪ್ರಧಾನಿಗಳು ತಮ್ಮ ಭಾಷಣದಲ್ಲಿ ಕೇವಲ ಸಾರ್ವಜನಿಕ ರಂಗದ ತೈಲ ಕಂಪನಿಗಳು 500, 1000ರೂ ನೋಟು ಸ್ವೀಕರಿಸಲು ಅನುಮತಿ ಇರುತ್ತದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾನವೀಯ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿರುವ ಔಷಧ ಅಂಗಡಿಗಳು, ರೈಲ್ವೆ ಟಿಕೆಟ್ ಬುಕ್ಕಿಂಗ್ ಕೇಂದ್ರಗಳು, ಸರ್ಕಾರಿ ಬಸ್, ಏರ್ ಲೈನ್ ಟಿಕೆಟ್ ಕೇಂದ್ರಗಳು, ಸರ್ಕಾರಿ ಸಾಮ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್ ಕಂಪನಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ಗ್ರಾಹಕ ಸೇವಾ ಸಹಕಾರಿ ಮಳಿಗೆಗಳು, ಸರ್ಕಾರದಿಂದ ಅನುಮೋದಿತ ಹಾಲಿನ ಕೇಂದ್ರಗಳು ಹಾಗೂ ರುದ್ರಭೂಮಿಯಲ್ಲಿ 500, ಸಾವಿರ ರೂ. ನೋಟು ಸ್ವೀಕರಿಸಬಹುದು ಎಂದಿದೆ.

ಭಾರತದಲ್ಲಿ ಸರಿ ಸುಮಾರು 56,190 ಇಂಧನ ರೀಟೆಲ್ ಮಳಿಗೆಗಳಿವೆ ಇವುಗಳ ಪೈಕಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಸೇರಿದ ಮಳಿಗೆಗಳು 52,604 ರೀಟೆಲ್ ಮಳಿಗೆಗಳಿವೆ. ಉಳಿದಂತೆ ಖಾಸಗಿ ವಲಯದ ಶೆಲ್, ರಿಲಯನ್ಸ್ ಹಾಗೂ ಎಸ್ಸಾರ್ ಆಯಿಲ್ ಗಳು ಕಾರ್ಯ ನಿರ್ವಹಿಸುತ್ತಿವೆ.

English summary
Shell retail stations - like other private fuel retail stations - cannot accept these notes for purchase of fuel. Notes of denominations Rs. 100 and below will continue to be accepted against purchases. We are also accepting all credit and debit cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X