ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಶೆಲ್ ಇಕೋ-ಮ್ಯಾರಥಾನ್-2019 ರಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಸಾರಿಗೆ ಪರಿಹಾರಗಳ ಪ್ರದರ್ಶನಕ್ಕೆ, ಉತ್ಸಾಹಿ, ಯುವ ಇಂಜಿನಿಯರ್ಸ್ ಗಳ ಹೊಸ ಆಲೋಚನೆಗೆ ವೇದಿಕೆ ಒದಗಿಸಲಿದೆ. ಪ್ರದರ್ಶನ ಮಾಡಲಿದ್ದಾರೆ.

ಬೆಂಗಳೂರಿನ ಶೆಲ್ ಟೆಕ್ನಾಲಜಿ ಸೆಂಟರ್ ನಲ್ಲಿ 2019 ರ ನವೆಂಬರ್ 19 ರಿಂದ 22 ರವರೆಗೆ ನಡೆಯಲಿರುವ ಈ ಮ್ಯಾರಥಾನ್‍ನ ವಿಷಯ 'ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾ' ಆಗಿದೆ. ಇದಕ್ಕೆ ಪೂರಕವಾಗಿ ಭವಿಷ್ಯದ ಚಲನಶೀಲತೆ ಅಥವಾ ಸಾರಿಗೆ ವ್ಯವಸ್ಥೆಯಲ್ಲಿ ಮಾಡಬಹುದಾದ ಸುಧಾರಣೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಗಮನಹರಿಸಲಾಗುತ್ತಿದೆ.

ಈ ಮ್ಯಾರಥಾನ್‍ನಲ್ಲಿ ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯೂ ಹಾರಿಜಾನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಆರ್‍ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದಂತೆ ಒಟ್ಟು 39 ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಈ ತಂಡಗಳು ಸ್ಪರ್ಧಿಸಲಿವೆ.

ಶೆಲ್ ಲ್ಯೂಬ್ರಿಕೆಂಟ್ಸ್ ಬೈಕ್ ಮೆಕ್ಯಾನಿಕ್‍ಗಳಿಗೆ ತರಬೇತಿಶೆಲ್ ಲ್ಯೂಬ್ರಿಕೆಂಟ್ಸ್ ಬೈಕ್ ಮೆಕ್ಯಾನಿಕ್‍ಗಳಿಗೆ ತರಬೇತಿ

ಭಾರತದ ಭವಿಷ್ಯದ ಸಾರಿಗೆ ವ್ಯವಸ್ಥೆಯು ಶುದ್ಧ ಚಲನಶೀಲತೆಯಿಂದ ಕೂಡಿರುತ್ತದೆ ಮತ್ತು ಆಟೋಮೋಟಿವ್ ಉದ್ಯಮವು ಸುಸ್ಥಿರ ಮತ್ತು ಅತ್ಯುತ್ತಮವಾದ ವಾಹನಗಳ ತಯಾರಿಕೆಯತ್ತ ಸಾಗುತ್ತದೆ. ಈ ಮೂಲಕ ಈ ಕ್ಷೇತ್ರದಲ್ಲಿ ಆಮೂಲಾಗ್ರ ಆವಿಷ್ಕಾರ ಆಗಲಿದೆ. ಈ ಹಿನ್ನೆಲೆಯಲ್ಲಿ ನಗರದ ಇಂಜಿನಿಯರಿಂಗ್ ಕಾಲೇಜುಗಳ ಯುವ ಮತ್ತು ಉತ್ಸಾಹಿ ವಿದ್ಯಾರ್ಥಿಗಳಲ್ಲಿರುವ ಅಗಾಧ ಪ್ರತಿಭೆಯನ್ನು ಅನಾವರಣಗೊಳಿಸಲೆಂದೇ ಈ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ. ಶೆಲ್‍ನ ವಾರ್ಷಿಕ ಕಾರ್ಯಕ್ರಮವಾದ ಭವಿಷ್ಯದ ಉತ್ಸವದ ಭಾಗವಾಗಿ ಶೆಲ್ ಇಕೋ-ಮ್ಯಾರಥಾನ್ ಅನ್ನು ಆಯೋಜಿಸಲಾಗುತ್ತಿದೆ.

'ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾ' ಪರಿಕಲ್ಪನೆ

'ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾ' ಪರಿಕಲ್ಪನೆ

2018 ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎರಡನೇ ವರ್ಷವಾದ ಈಗ ಮೇಕ್ ದಿ ಫ್ಯೂಚರ್ ಲೈವ್ ಇಂಡಿಯಾ' ಪರಿಕಲ್ಪನೆಯನ್ನಿಟ್ಟುಕೊಂಡು ಈ ಮ್ಯಾರಥಾನ್ ಅನ್ನು ಆಯೋಜಿಸಲಾಗುತ್ತಿದೆ. ಈ ಮ್ಯಾರಥಾನ್‍ನಲ್ಲಿ ಇಂಧನ ಮತ್ತು ವಿದ್ಯುತ್ ಕ್ಷಮತೆಯ ವಾಹನಗಳನ್ನು ನೋಡಬಹುದಾಗಿದೆ. ಜಾಗತಿಕ ಮಟ್ಟದಲ್ಲಿ ಶೆಲ್ ಬಾರಿಗೆ ಭವಿಷ್ಯವನ್ನು ರೂಪಿಸುವ ಕುರಿತಾದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಜಾಗತಿಕ ಮಟ್ಟದಲ್ಲಿ ತನ್ನ ಮೂರು ಸಂಶೋಧನೆ ಮತ್ತು ಅಭಿವೃದ್ಧಿ ಹಬ್‍ಗಳಲ್ಲಿ ಬೆಂಗಳೂರಿನ ಎಸ್‍ಟಿಸಿಬಿಯೂ ಒಂದಾಗಿದೆ. ಈ ಮೂಲಕ ಶೆಲ್ ಯುವ ಇಂಜಿನಿಯರ್‍ಗಳಿಗೆ ಆವಿಷ್ಕಾರಕ ಶುದ್ಧ ಚಲನಶೀಲತೆ ಪರಿಹಾರಗಳನ್ನು ಅನಾವರಣ ಮಾಡುವ ವೇದಿಕೆಯನ್ನು ಒದಗಿಸಿಕೊಡುತ್ತಿದೆ.

ಕಡಿಮೆ ವೆಚ್ಚದ ವಿದ್ಯುತ್ ಚಾಲಿತ ವಾಹನ

ಕಡಿಮೆ ವೆಚ್ಚದ ವಿದ್ಯುತ್ ಚಾಲಿತ ವಾಹನ

ಎಇಎಂ ಏಷ್ಯಾ 2016 ರಲ್ಲಿ 9 ನೇ ರ್ಯಾಂಕ್ ಪಡೆದು, ಅದೇ ವರ್ಷ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದ್ದ ಸರ್ ಎಂ.ವಿಶ್ವೇಶ್ವರಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇನ್‍ಫೆರ್ನೋ ತಂಡವು ಈ ಮ್ಯಾರಥಾನ್‍ನಲ್ಲಿ ಸ್ಪರ್ಧೆ ಮಾಡುತ್ತಿದೆ. ಅತ್ಯಂತ ಕಡಿಮೆ ವೆಚ್ಚದ ವಿದ್ಯುತ್ ಚಾಲಿತ ವಾಹನವನ್ನು 35 ಸದಸ್ಯರ ತಂಡವು ಅಭಿವೃದ್ಧಿಪಡಿಸಿದ್ದು, ಈ ಮ್ಯಾರಥಾನ್‍ನಲ್ಲಿ ಇದರ ಪರೀಕ್ಷಾರ್ಥ ಚಾಲನೆಯನ್ನೂ ನಡೆಸಲಿದೆ. ಹಲವಾರು ಪ್ರಾಥಮಿಕ ಪರೀಕ್ಷೆಗಳನ್ನು ಕೈಗೊಂಡಿರುವ ತಂಡವು ಅಂತಿಮವಾಗಿ 200 ಕಿಲೋಮೀಟರ್/ಕಿಲೋವ್ಯಾಟ್ ಮೈಲೇಜ್ ಅನ್ನು ನಿರೀಕ್ಷಿಸುತ್ತಿದೆ.

ಆರ್ ವಿ ಕಾಲೇಜಿನ ಪ್ರಾಜೆಕ್ಟ್ ಗರುಡ

ಆರ್ ವಿ ಕಾಲೇಜಿನ ಪ್ರಾಜೆಕ್ಟ್ ಗರುಡ

ಕಠಿಣವಾದ ಸ್ಪರ್ಧೆ ನೀಡುವ ಮತ್ತೊಂದು ತಂಡವೆಂದರೆ ಪ್ರಾಜೆಕ್ಟ್ ಗರುಡ. ಆರ್‍ವಿ ಕಾಲೇಜ್ ಆಫ್ ಇಂಜಿನಿಯರಿಂಗ್‍ನ 50 ಸದಸ್ಯರ ಈ ಪ್ರಾಜೆಕ್ಟ್ ಗರುಡ ತಂಡವು ಬ್ಯಾಟರಿ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿದೆ. ಇದನ್ನು ದೇಸೀಯವಾಗಿ ವಿನ್ಯಾಸಗೊಳಿಸಲಾಗಿದ್ದು, ಲಿಥೀಯಂ ಐಯಾನ್ ಬ್ಯಾಟರಿಯನ್ನು ಬಳಸಲಾಗಿದ್ದು, ಈ ಕಾರು 70-80 ಕಿಲೋಮೀಟರ್/ಕೆಡಬ್ಲ್ಯೂಎಚ್‍ನಷ್ಟು ಮೈಲೇಜ್ ನೀಡಲಿದೆ.

ನ್ಯೂ ಹಾರಿಜಾನ್ ಕಾಲೇಜಿನ ಟೀಂ ಆಕೃತ್

ನ್ಯೂ ಹಾರಿಜಾನ್ ಕಾಲೇಜಿನ ಟೀಂ ಆಕೃತ್

ಇನ್ನು ನ್ಯೂ ಹಾರಿಜಾನ್ ಕಾಲೇಜ್ ಆಫ್ ಇಂಜಿನಿಯರಿಂಗ್‍ನ 11 ಸದಸ್ಯರ ಟೀಂ ಆಕೃತ್ ಲೀಥಿಯಂ ಐಯಾನ್ ಬ್ಯಾಟರಿ ಆಧಾರಿತ ವಾಹನವನ್ನು ಅಭಿವೃದ್ಧಿಪಡಿಸಿದೆ. ಚೆನ್ನೈನಲ್ಲಿ 2018 ರಲ್ಲಿ ನಡೆದ ಎಂಟಿಎಫ್ ಇಂಡಿಯಾ ಪ್ರದರ್ಶನದ ಮೂಲಕ ಸ್ಪರ್ಧೆಕೂಟಕ್ಕೆ ಪದಾರ್ಪಣೆ ಮಾಡಿದ್ದ ಈ ತಂಡ, ಬೆಂಗಳೂರಿನಲ್ಲಿ ನಡೆಯಲಿರುವ ಸ್ಪರ್ಧೆಯ ಮೂಲಕ ಎರಡನೇ ಬಾರಿ ಸ್ಪರ್ಧೆಗಿಳಿದಿದೆ.

ಈ ತಂಡವು ಲಿಥೀಯಂ ಬ್ಯಾಟರಿ ಬ್ಯಾಕ್‍ನೊಂದಿಗೆ ವಾಹನವನ್ನು ಅಭಿವೃದ್ಧಿಪಡಿಸಿದೆ. ಕಂಟ್ರೋಲರ್‍ನಲ್ಲಿ ಎಲೆಕ್ಟ್ರಿಕಲ್ ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಈ ವಾಹನವನ್ನು ತಯಾರಿಸಿದ್ದು, 250-300 ಕಿಲೋಮೀಟರ್/ಕೆಡಬ್ಲ್ಯೂಎಚ್ ಮೈಲೇಜ್ ನೀಡಲಿದೆ ಎಂಬ ನಿರೀಕ್ಷೆ ಇದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ವಾಹನದ ಸಂರಚನೆಯು ಹಗುರವಾಗಿದ್ದು, ಕಂಟ್ರೋಲ್ಡ್ ಔಟ್‍ಪುಟ್ ಅನ್ನು ಹೊಂದಿದೆ ಹಾಗೂ ಸ್ವಯಂ ವಿನ್ಯಾಸದ ಮೋಟರ್ ಕಂಟ್ರೋಲರ್ ಅನ್ನು ಒಳಗೊಂಡಿದೆ. ಈ ಮೂಲಕ ಬಯಸಿದ ವೇಗದಲ್ಲಿ ಅತ್ಯುತ್ಕೃಷ್ಠವಾದ ಕಾರ್ಯಕ್ಷಮತೆಯನ್ನು ನೀಡಲಿದೆ.

ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಇನ್ನು ಕೇಂಬ್ರಿಡ್ಜ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 10 ಸದಸ್ಯರ ರಿವಿಯಾನ್ ತಂಡವು ಏರೋಡೈನಾಮಿಕ್ ವಿನ್ಯಾಸದ ಭವಿಷ್ಯದ ಕಾರನ್ನು ಪ್ರದರ್ಶಿಸಲಿದೆ. ಲಿಥಿಯಂ ಐಯಾನ್ ಫೋಸ್ಪೇಟ್ ಬ್ಯಾಟರಿ ಚಾಲಿತ ಈ ಎಲೆಕ್ಟ್ರಿಕಲ್ ಕಾರು 500 ಕಿಲೋಮೀಟರ್/ಕೆಡಬ್ಲ್ಯೂಎಚ್ ಮೈಲೇಜ್ ನೀಡುವ ಸಾಧ್ಯತೆಗಳಿವೆ.

English summary
Make the Future Live to be held from November 19 – 22, 2019, Young engineering students to compete with their self-designed and built energy-efficient vehicles in the Shell Eco-marathon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X