ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್‌ ದರ ಇಳಿಕೆಯಿಂದ ವಿಮಾನಯಾನ ಸಂಸ್ಥೆಗಳ ಷೇರುಗಳಲ್ಲಿ ಏರಿಕೆ

|
Google Oneindia Kannada News

ನವದೆಹಲಿ,ಆಗಸ್ಟ್‌ 11: ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಹಿಂದೆ ವಿಧಿಸಿದ್ದ ಟಿಕೆಟ್ ದರಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದ ಒಂದು ದಿನದ ನಂತರ ಭಾರತೀಯ ದೇಶೀಯ ವಿಮಾನಯಾನ ಸಂಸ್ಥೆಗಳ ಷೇರುಗಳು ಗುರುವಾರ ಏರಿತು.

ದೇಶೀಯ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್‌ ಜೆಟ್ ಲಿಮಿಟೆಡ್, ಏರ್ ಇಂಡಿಯಾ, ಗೋ ಫಸ್ಟ್ ಮತ್ತು ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ ಜಂಟಿ ಉದ್ಯಮಗಳು ಈಗ ವಿಮಾನದ ಟಿಕೆಟ್‌ಗಳನ್ನು ಸುಸ್ಥಿತಿಯಲ್ಲಿ ಇಡಬಹುದು ಎಂದು ಭಾವಿಸಲಾಗಿದೆ.

ವಿಮಾನ ಪ್ರಯಾಣ ದರದಲ್ಲಿ ಭಾರೀ ಬದಲಾವಣೆ?ವಿಮಾನ ಪ್ರಯಾಣ ದರದಲ್ಲಿ ಭಾರೀ ಬದಲಾವಣೆ?

ವಿಮಾನ ಟಿಕೆಟ್ ದರ ಇಳಿಕೆಯಿಂದ ಏರ್‌ಲೈನ್ಸ್ ಇಂಡಿಗೋದ ಮಾತೃಸಂಸ್ಥೆ ಇಂಟರ್‌ಗ್ಲೋಬ್ ಏವಿಯೇಷನ್ ​​ಲಿಮಿಟೆಡ್‌ನ ಷೇರುಗಳು 2.3% ರಷ್ಟು ಏರಿಕೆಯಾಗಿ 2084.6 ರೂಪಾಯಿಗಳಿಗೆ ತಲುಪಿದರೆ, ಉದ್ಯಮದ ಸಣ್ಣ ಪ್ರತಿಸ್ಪರ್ಧಿ ಸ್ಪೈಸ್‌ಜೆಟ್ ಲಿಮಿಟೆಡ್ 7% ರಷ್ಟು ಜಿಗಿದು 47.9 ರೂಪಾಯಿಗಳಿಗೆ ತಲುಪಿತು.

Shares of airlines rise due to reduction in ticket prices

ವಿಮಾನ ಪ್ರಯಾಣದ ಮೇಲಿನ ನಿರ್ಬಂಧಗಳು ಸಡಿಲಗೊಂಡ ನಂತರ ಟಿಕೆಟ್ ದರಗಳು ಏರಿಕೆಯಾಗುವುದನ್ನು ತಡೆಯಲು ಸರ್ಕಾರವು ವಿಮಾನದ ಅವಧಿಯನ್ನು ಆಧರಿಸಿ ಕನಿಷ್ಠ ಮತ್ತು ಗರಿಷ್ಠ ಮಿತಿ ವಿಧಿಸಿದೆ. ಆಕಾಶ ಏರ್‌ನ ಲೋಕಾರ್ಪಣೆ ಮತ್ತು ಜೆಟ್ ಏರ್‌ವೇಸ್‌ನ ಪುನರುಜ್ಜೀವನದೊಂದಿಗೆ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಸ್ಪರ್ಧೆಯು ಮತ್ತಷ್ಟು ಗರಿಗೆದರುವ ನಿರೀಕ್ಷೆಯಿದೆ.

Shares of airlines rise due to reduction in ticket prices

ಮುಂಬರುವ ಹಬ್ಬದ ಋತುವಿನಲ್ಲಿ ವಿಮಾನ ಪ್ರಯಾಣದ ಬೇಡಿಕೆಯು ಹೆಚ್ಚಳವಾಗುವ ನಿರೀಕ್ಷೆಯಿದೆ. ಪ್ರಯಾಣಿಕರ ಸಂಖ್ಯೆಯು ಈಗಾಗಲೇ ಪೂರ್ವ ಕೋವಿಡ್‌ ಮಟ್ಟವನ್ನು ಮುಟ್ಟಿದೆ. ಆದರೆ ಹೆಚ್ಚಿನ ಇಂಧನ ವೆಚ್ಚವು ತುಟ್ಟಿಯಾಗಿ ಉದ್ಯಮದಲ್ಲಿ ಮುಂದುವರಿದಿದೆ. ಭಾರತದಲ್ಲಿ ಕೋವಿಡ್‌ ಸಾಂಕ್ರಮಿಕದಿಂದ ಉಂಟಾದ ಭೀಕರ ಪರಿಣಾಮದಿಂದ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನದ ಟಿಕೆಟ್‌ ದರಗಳ ಏರಿಕೆ ನಿಷೇಧ ಹೇರಿತ್ತು. ಬುಧವಾರ ಇದನ್ನು ತೆರವು ಮಾಡಲಾಗಿತ್ತು.

Recommended Video

ಚಾಮರಾಜಪೇಟೆ ಈದ್ಗಾ ಕುರಿತು ಮುಸ್ಲಿಂ ನಾಯಕರ ಜೊತೆ ಶಾಂತಿ‌ ಸಭೆ | Oneindia Kannada

English summary
Shares of Indian domestic airlines on Thursday announced a day after the civil aviation ministry lifted restrictions on ticket prices imposed two years ago due to the Covid pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X