ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ: ನೆಲಕಚ್ಚಿದ ಷೇರುಗಳು

|
Google Oneindia Kannada News

ಮುಂಬೈ, ಆಗಸ್ಟ್ 1: ಭಾರತದ ಷೇರು ಮಾರುಕಟ್ಟೆ 2002ರ ಜುಲೈನಿಂದೀಚೆಗೆ ಅತ್ಯಂತ ಕೆಟ್ಟ ಸನ್ನಿವೇಶ ಕಂಡಿದೆ. ನಿಫ್ಟಿ ಶೇ 5.68ರಷ್ಟು ಕುಸಿತ ಕಂಡಿದ್ದರೆ, ಸೆನ್ಸೆಕ್ಸ್ ಶೇ 4.86ರಷ್ಟು ಹಿನ್ನಡೆ ಅನುಭವಿಸಿದೆ. ಕಳೆದ 17 ವರ್ಷಗಳಲ್ಲಿಯೇ ಇದು ಭಾರಿ ದೊಡ್ಡ ಕುಸಿತವಾಗಿದೆ. 2002ರ ಜುಲೈನಲ್ಲಿ ನಿಫ್ಟಿ50 ಶೇ 9.3ರಷ್ಟು ಕುಸಿತ ಕಂಡಿತ್ತು. ಸೆನ್ಸೆಕ್ಸ್ ಶೇ 8ರಷ್ಟು ಕುಸಿದಿತ್ತು.

ಸಾಮಾನ್ಯವಾಗಿ ಮಾರುಕಟ್ಟೆ ವಹಿವಾಟು ಜುಲೈನಲ್ಲಿ ಹಸಿರು ಗುರುತಿನಲ್ಲಿಯೇ ಸಾಗುತ್ತವೆ. ಆದರೆ, ತಡವಾದ ಮುಂಗಾರು, ಕಾರ್ಪೊರೇಟ್ ಫಲಿತಾಂಶಗಳ ನಿಧಾನಗತಿ, ಆರ್ಥಿಕ ಬೆಳವಣಿಗೆಯ ಹಿನ್ನಡೆ ಮತ್ತು ಇತರೆ ವಿವಿಧ ಅಂಶಗಳು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದ ಫಲವಾಗಿ ಅದು ಈ ಫಲಿತಾಂಶಕ್ಕೆ ಕಾರಣವಾಗಿದೆ.

ಇನ್ಫೋಸಿಸ್ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನವಷ್ಟೇ ಅಲ್ಲ, ಷೇರು ಸಹ ಸಿಗಲಿದೆ ಇನ್ಫೋಸಿಸ್ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನವಷ್ಟೇ ಅಲ್ಲ, ಷೇರು ಸಹ ಸಿಗಲಿದೆ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ 37,000 ಅಂಕಗಳ ಗುರಿಯನ್ನು ದಾಟುವಲ್ಲಿ ತಲುಪಲಾಗದೆ ಸೆನ್ಸೆಕ್ಸ್, 700 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ನಿಫ್ಟಿ ಕೂಡ 10,900ರ ಗಡಿ ತಲುಪಿಲ್ಲ. ಅಮೆರಿಕನ್ ಡಾಲರ್ ಎದುರು ರೂಪಾಯಿ ದರವೂ ಕಳೆದ ಐದು ವಾರಗಳಲ್ಲಿಯೇ ಹೆಚ್ಚಿನ ಕುಸಿತ ಕಂಡಿದೆ.

Share Market Slumps Worst in 17 Years

ವೇದಾಂತ, ಎಸ್‌ಬಿಐ ಷೇರುಗಳು ಸೆನ್ಸೆಕ್ಸ್‌ನಲ್ಲಿ ಶೇ 6ರಷ್ಟು ಬಿದ್ದಿವೆ. ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಲ್‌ ಆಂಡ್ ಟಿ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಯೆಸ್ ಬ್ಯಾಂಕ್‌ಗಳು ಕೂಡ ದೊಡ್ಡ ಪ್ರಮಾಣದಲ್ಲಿ ಷೇರು ಮೌಲ್ಯ ಕಳೆದುಕೊಂಡಿವೆ.

ಬಿಎಸ್‌ಇಯಲ್ಲಿ 239 ಕಂಪೆನಿಗಳ ಷೇರುಗಳು ಶೇ 10-50ರವರೆಗೂ ನೆಲಕಚ್ಚಿವೆ. ಟಿವಿಎಸ್ ಮೋಟಾರ್, ಎಸ್ಕಾರ್ಟ್ಸ್, ಟಾಟಾ ಪವರ್, ಇಂಡಿಯಾ ಬುಲ್ಸ್ ವೆಂಚರ್ಸ್, ಪಿಎನ್‌ಬಿ, ಬಿಎಚ್‌ಇಎಲ್ ಮತ್ತು ಜೆಟ್ ಏರ್‌ವೇಸ್ ಸೇರಿವೆ.

Share Market Slumps Worst in 17 Years

ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳುಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು

ನಿಫ್ಟಿಯಲ್ಲಿ 22 ಸಂಸ್ಥೆಗಳ ಷೇರುಗಳು ಶೇ 10-20ರಷ್ಟು ಮೌಲ್ಯ ಕಳೆದುಕೊಂಡಿವೆ. ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ಸ್, ಟೈಟಾನ್ ಕಂಪೆನಿ, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್ ಮುಂತಾದವು ಕುಸಿತ ಕಂಡಿವೆ.

English summary
Sensex and Nifty fell 5.68% and 4.86% on Thursday, its worst fall since July 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X