ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್‌ 580 ಪಾಯಿಂಟ್ಸ್‌ ಕುಸಿತ: 12,800 ಪಾಯಿಂಟ್ಸ್‌ಗಿಂತ ಕೆಳಗಿಳಿದ ನಿಫ್ಟಿ

|
Google Oneindia Kannada News

ನವದೆಹಲಿ, ನವೆಂಬರ್ 19: ಸತತ ಏರಿಕೆ ಕಂಡಿದ್ದ ಭಾರತದ ಷೇರುಪೇಟೆಯು ಗುರುವಾರ ತಲ್ಲಣಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 580 ಪಾಯಿಂಟ್ಸ್‌ ಕುಸಿತ ಕಂಡಿದೆ. ಇನ್ನು ನಿಫ್ಟಿ 12,800 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 1.31 ಅಥವಾ 580.09 ಪಾಯಿಂಟ್ಸ್‌ ಕುಸಿತ ಕಂಡು 43,599.09 ಪಾಯಿಂಟ್ಸ್‌ ದಾಖಲಿಸಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 1.29ರಷ್ಟು ಇಳಿಕೆಕಂಡು 12,771.70 ಪಾಯಿಂಟ್ಸ್‌ಗೆ ತಲುಪಿದೆ. ಈ ಮೂಲಕ ಷೇರುಪೇಟೆಯಲ್ಲಿ ಲಾಭದ ಬುಕಿಂಗ್ ನಿಫ್ಟಿಯನ್ನು ದಾಖಲೆಯ ಉನ್ನತ ಮಟ್ಟದಿಂದ ಕೆಳಕ್ಕೆ ಎಳೆದಿದೆ.

ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರುಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

"ಹೆಚ್ಚುತ್ತಿರುವ ವೈರಸ್ ಸೋಂಕುಗಳು ಹೆಚ್ಚುವರಿ ನಿರ್ಬಂಧಗಳ ಭಯವನ್ನು ಹೆಚ್ಚಿಸಿವೆ ಮತ್ತು ಜಾಗತಿಕ ಆರ್ಥಿಕ ಚಟುವಟಿಕೆಯ ಮೇಲೆ ಅದರ ಪ್ರಭಾವವನ್ನು ಪರಿಗಣಿಸಿ, ಜಾಗತಿಕ ಮಾರುಕಟ್ಟೆ ಭಾವನೆಗಳು ನಕಾರಾತ್ಮಕವಾಗಿ ಮಾರ್ಪಟ್ಟವು. ಲಸಿಕೆ ಅಭಿವೃದ್ಧಿಯ ಮುಂದುವರಿದ ಹಂತಗಳನ್ನು ಸುತ್ತುವರೆದಿರುವ ಆಶಾವಾದದ ನಡುವೆಯೂ ಇದು ಸಂಭವಿಸಿದೆ. ಭಾರತೀಯ ಮಾರುಕಟ್ಟೆಗಳು ಇತ್ತೀಚಿನ ಗರಿಷ್ಠ ಮಟ್ಟದಿಂದ ಹೂಡಿಕೆದಾರರಿಂದ ಲಾಭ ಕಾಯ್ದಿರಿಸುವಿಕೆಯನ್ನು ಕಂಡವು "ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

Share Market Break 4 Day Winning Streak: Sensex Down By 580 Points

ಎಸ್‌ಬಿಐ, ಕೋಲ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟವನ್ನು ಕಂಡಿದ್ದು, ಪವರ್ ಗ್ರಿಡ್ ಕಾರ್ಪೊರೇಷನ್, ಐಟಿಸಿ, ಎನ್‌ಟಿಪಿಸಿ, ಟಾಟಾ ಸ್ಟೀಲ್ ಮತ್ತು ಟೈಟಾನ್ ಕಂಪನಿ ಏರಿಕೆ ದಾಖಲಿಸಿದೆ.

English summary
Profit booking on Dalal Street dragged the Nifty from the record high level. The BSE Sensex was down 580.09 points, or 1.31%, at 43,599.96, and the Nifty was down 166.60 points, or 1.29%, at 12,771.70.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X