ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಆಗಸ್ಟ್‌ 25: ಭಾರತದ ಆದಾಯ ತೆರಿಗೆ ಕಾನೂನು ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ಹಲವಾರು ರೀತಿಯ ತೆರಿಗೆ ಪ್ರಯೋಜನಗಳಿವೆ. ಭಾರತದ ನಿವಾಸಿಗಳು ಮಾತ್ರ ಈ ವಿಶೇಷ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.

Recommended Video

Congressನಲ್ಲಿ ಒಂದೇ ದಿನಕ್ಕೆ ಕೊನೆಗೊಂಡ ನಾಯಕತ್ವದ ಬಿಕ್ಕಟ್ಟು | Oneindia Kannada

60 ವರ್ಷ ಮತ್ತು 80 ವರ್ಷ ವಯಸ್ಸಿನ ವ್ಯಕ್ತಿಯನ್ನು 'ಹಿರಿಯ ನಾಗರಿಕ' ಎಂದು ಕರೆಯಲಾಗುತ್ತದೆ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯನ್ನು 'ಅತ್ಯಂತ ಹಿರಿಯ ನಾಗರಿಕ' ಎಂದು ಕರೆಯಲಾಗುತ್ತದೆ. ನಿವಾಸಿ ಹಿರಿಯ ಮತ್ತು ಅತ್ಯಂತ ಹಿರಿಯ ನಾಗರಿಕರಿಗೆ ಲಭ್ಯವಿರುವ ಆದಾಯ ತೆರಿಗೆ ಪ್ರಯೋಜನಗಳು ವೈದ್ಯಕೀಯ ವೆಚ್ಚಗಳು ಮತ್ತು ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯ ಕಾರಣದಿಂದಾಗಿ ವಿವಿಧ ವಿಭಾಗಗಳ ಅಡಿಯಲ್ಲಿ ಹೆಚ್ಚಿನ ವಿನಾಯಿತಿ ಮಿತಿಯಿಂದ ಕಡಿತಗಳವರೆಗೆ ಇರುತ್ತದೆ.

 ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಗಳು: ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ? ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಗಳು: ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ?

ಹಿರಿಯ ನಾಗರಿಕರು ಮತ್ತು ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ಪ್ರಯೋಜನಗಳ ಪಟ್ಟಿ ಇಲ್ಲಿದೆ:

ಹೆಚ್ಚಿನ ತೆರಿಗೆ ವಿನಾಯಿತಿ ಮಿತಿ

ಹೆಚ್ಚಿನ ತೆರಿಗೆ ವಿನಾಯಿತಿ ಮಿತಿ

ಸಾಮಾನ್ಯ ಅಥವಾ ಹಿರಿಯರಲ್ಲದ ನಾಗರಿಕ ತೆರಿಗೆ ಪಾವತಿದಾರರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಹೆಚ್ಚಿನ ವಿನಾಯಿತಿ ಮಿತಿಯನ್ನು ನೀಡಲಾಗುತ್ತದೆ. ವಿನಾಯಿತಿ ಮಿತಿ ಎಂದರೆ ಒಬ್ಬ ವ್ಯಕ್ತಿಯು ಸರ್ಕಾರಕ್ಕೆ ತೆರಿಗೆ ಪಾವತಿಸಲು ಹೊಣೆಗಾರನಾಗಿರದ ಆದಾಯದ ಮಟ್ಟವಾಗಿದೆ.

2020-21ನೇ ಹಣಕಾಸು ವರ್ಷದಲ್ಲಿ, ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿ 3,00,000 ರೂಪಾಯಿ. ಹಿರಿಯರಲ್ಲದ ನಾಗರಿಕರಿಗೆ ವಿನಾಯಿತಿ ಮಿತಿ 2,50,000 ರೂಪಾಯಿ. ಸಾಮಾನ್ಯ ತೆರಿಗೆ ಪಾವತಿದಾರರಿಗೆ ಹೋಲಿಸಿದರೆ ಹೆಚ್ಚಿನ ವಿನಾಯಿತಿ ಮಿತಿಯ ರೂಪದಲ್ಲಿ 50,000 ರೂಪಾಯಿ ಹೆಚ್ಚುವರಿ ಲಾಭವು ಹಿರಿಯ ನಾಗರಿಕರಿಗೆ ಲಭ್ಯವಿದೆ.

ಅತ್ಯಂತ ಹಿರಿಯ ನಾಗರಿಕನಿಗೆ ಹೆಚ್ಚಿನ ವಿನಾಯಿತಿ ಮಿತಿಯನ್ನು, 5,00,000 ರೂಪಾಯಿವರೆಗೆ ನೀಡಲಾಗುತ್ತದೆ.

ಮುಂಗಡ ತೆರಿಗೆ ಪಾವತಿಸುವುದರಿಂದ ವಿನಾಯಿತಿ

ಮುಂಗಡ ತೆರಿಗೆ ಪಾವತಿಸುವುದರಿಂದ ವಿನಾಯಿತಿ

ಸೆಕ್ಷನ್ 208ರ ಪ್ರಕಾರ, ವರ್ಷಕ್ಕೆ ಅಂದಾಜು ತೆರಿಗೆ ಹೊಣೆಗಾರಿಕೆ 10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದಾದ ಪ್ರತಿಯೊಬ್ಬ ವ್ಯಕ್ತಿಯು ತನ್ನ ತೆರಿಗೆಯನ್ನು 'ಮುಂಗಡ ತೆರಿಗೆ' ರೂಪದಲ್ಲಿ ಮುಂಚಿತವಾಗಿ ಪಾವತಿಸಬೇಕು. ಆದಾಗ್ಯೂ, ಸೆಕ್ಷನ್ 207 ಪ್ರಕಾರ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿಸುವುದರಿಂದ ಪರಿಹಾರ ನೀಡುತ್ತದೆ.

ಹಿರಿಯ ನಾಗರಿಕರಿಗೆ SBI ವಿಶೇಷ ಫಿಕ್ಸೆಡ್ ಡೆಪಾಸಿಟ್ ವಿವರ ಇಲ್ಲಿದೆಹಿರಿಯ ನಾಗರಿಕರಿಗೆ SBI ವಿಶೇಷ ಫಿಕ್ಸೆಡ್ ಡೆಪಾಸಿಟ್ ವಿವರ ಇಲ್ಲಿದೆ


ಸೆಕ್ಷನ್ 207 ರ ಪ್ರಕಾರ ನಿವಾಸಿ ಹಿರಿಯ ನಾಗರಿಕರಿಗೆ ವ್ಯವಹಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವಿಲ್ಲದಿದ್ದರೆ, ಮುಂಗಡ ತೆರಿಗೆ ಪಾವತಿಸಲು ಜವಾಬ್ದಾರನಾಗಿರುವುದಿಲ್ಲ.

ಐಟಿಆರ್ ಪೇಪರ್ ಫೈಲಿಂಗ್

ಐಟಿಆರ್ ಪೇಪರ್ ಫೈಲಿಂಗ್

ಐಟಿಆರ್ 1 ಅಥವಾ ಐಟಿಆರ್ 4 ರಲ್ಲಿ ಆದಾಯವನ್ನು ಹಿಂದಿರುಗಿಸುವ ಅತ್ಯಂತ ಹಿರಿಯ ನಾಗರಿಕನು ತನ್ನ ಆದಾಯವನ್ನು ಪೇಪರ್ ಮೋಡ್‌ನಲ್ಲಿ ಕೂಡ ಸಲ್ಲಿಸಬಹುದು. ಅಂದರೆ, ಅವನಿಗೆ ಐಟಿಆರ್ 1 ಅಥವಾ ಐಟಿಆರ್ 4 ರ ಎಲೆಕ್ಟ್ರಾನಿಕ್ ಫೈಲಿಂಗ್ ಕಡ್ಡಾಯವಲ್ಲ. ಆದಾಗ್ಯೂ, ಅವರು ಬಯಸಿದರೆ ಇ-ಫೈಲಿಂಗ್‌ಗೆ ಹೋಗಬಹುದು.

ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ಆದಾಯದ ಕಡಿತ

ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ಆದಾಯದ ಕಡಿತ

ಹಿರಿಯ ನಾಗರಿಕನು ತಾವು ಗಳಿಸಿದ 50,000 ರೂಪಾಯಿವರೆಗಿನ ಮೊತ್ತಕ್ಕೆ ಠೇವಣಿ ಉಳಿತಾಯ ಮತ್ತು ಬ್ಯಾಂಕುಗಳು ಅಥವಾ ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಗಳಿಸಿದ ಬಡ್ಡಿ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿದೆ.

ಅಲ್ಲದೆ, ಮೂಲದಲ್ಲಿ 50,000 ರೂಪಾಯಿವರೆಗಿನ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ. 50,000 ರೂಪಾಯಿಯ ಈ ಮಿತಿಯನ್ನು ಪ್ರತಿ ಬ್ಯಾಂಕ್‌ಗೆ ಪ್ರತ್ಯೇಕವಾಗಿ ಲೆಕ್ಕ ಹಾಕಬೇಕಾಗುತ್ತದೆ.

ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿ ಪ್ರಯೋಜನ

ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿ ಪ್ರಯೋಜನ

ಹಿರಿಯ ನಾಗರಿಕರು ಒಂದು ವರ್ಷದಲ್ಲಿ ಪಾವತಿಸುವ ವಿಮೆಯು 50,000 ರೂಪಾಯಿವರೆಗೂ ಇದ್ದರೆ, ವೈದ್ಯಕೀಯ ವಿಮಾ ಪ್ರೀಮಿಯಂ ಅನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ಕಡಿತವಾಗಿ ಅನುಮತಿಸಲಾಗಿದೆ.


ಒಂದು ವೇಳೆ ಹಿರಿಯ ನಾಗರಿಕನು ತನ್ನ ಅಥವಾ ಅವರ ಪೋಷಕರಿಗೆ ವೈದ್ಯಕೀಯ ವಿಮಾ ಕಂತುಗಳನ್ನು ಪಾವತಿಸುತ್ತಿದ್ದರೆ, ಅವನು ಅಥವಾ ಅವಳು ಹೆಚ್ಚುವರಿ ಕಡಿತವನ್ನು 50,000 ವರೆಗೆ ಪಡೆಯಬಹುದು.

ನಿರ್ದಿಷ್ಟ ರೋಗಗಳ ವೈದ್ಯಕೀಯ ಚಿಕಿತ್ಸೆಗಾಗಿ ಕಡಿತ

ನಿರ್ದಿಷ್ಟ ರೋಗಗಳ ವೈದ್ಯಕೀಯ ಚಿಕಿತ್ಸೆಗಾಗಿ ಕಡಿತ

ಸೆಕ್ಷನ್ 80 ಡಿಡಿಬಿ ಪ್ರಕಾರ, ಹಿರಿಯ ನಾಗರಿಕ ತೆರಿಗೆದಾರನು ನಿರ್ದಿಷ್ಟಪಡಿಸಿದ ಕಾಯಿಲೆಗಳ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ಖರ್ಚಿಗೆ 1,00,000 ವರೆಗೆ ತೆರಿಗೆ ಕಡಿತವನ್ನು ಪಡೆಯಬಹುದು. ಈ ಮೂಲಕ ಹಿರಿಯ ನಾಗರಿಕರಿಗೆ ಬಹುತೇಕ ಗರಿಷ್ಠ ಪ್ರಯೋಜನಗಳನ್ನು ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ.

English summary
India's income tax law pampers senior citizens and very senior citizens with several tax benefits. Only residents of the country can avail of these special benefits. Here's the list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X