ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಷೇರುಪೇಟೆ ಜಿಗಿತ: ಸೆನ್ಸೆಕ್ಸ್ 500 ಪಾಯಿಂಟ್ಸ್ ಏರಿಕೆ

|
Google Oneindia Kannada News

ಮುಂಬೈ, ಡಿಸೆಂಬರ್ 01: ಭಾರತೀಯ ಷೇರುಪೇಟೆ ಮಂಗಳವಾರ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 505 ಪಾಯಿಂಟ್ಸ್‌ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಏರಿಕೆ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 1.15 ಅಥವಾ 505 ಪಾಯಿಂಟ್ಸ್‌ ಏರಿಕೆ ಕಂಡು 44,655.44 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.08 ಅಥವಾ 140 ಪಾಯಿಂಟ್ಸ್ ಏರಿಕೆಗೊಂಡು 13,109.05 ಸೂಚ್ಯಂಕವನ್ನು ತಲುಪಿದೆ.

ದಾಖಲೆಯ ವಿದೇಶಿ ಹೂಡಿಕೆ: ನವೆಂಬರ್‌ನಲ್ಲಿ FPI ಒಳಹರಿವು 62,951 ಕೋಟಿ ರೂಪಾಯಿ ದಾಖಲೆಯ ವಿದೇಶಿ ಹೂಡಿಕೆ: ನವೆಂಬರ್‌ನಲ್ಲಿ FPI ಒಳಹರಿವು 62,951 ಕೋಟಿ ರೂಪಾಯಿ

ಗೇಲ್, ಮದರ್‌ಸುಮಿ, ಟಾಟಾ ಪವರ್, ಅದಾನಿ ಎಂಟರ್‌ಪ್ರೈಸಸ್, ಕೆನರಾ ಬ್ಯಾಂಕ್, ಸನ್‌ ಫಾರ್ಮಾ ಷೇರುಗಳು ಶೇಕಡಾ 5ಕ್ಕಿಂತ ಹೆಚ್ಚಿನ ಏರಿಕೆ ದಾಖಲಿಸಿದೆ. ಶ್ರೀರಾಮ್ ಟ್ರಾನ್ಸ್‌ಪೋರ್ಟ್, ಮಣಪ್ಪುರಂ ಫೈನಾನ್ಸ್‌, ಐಜಿಎಲ್, ನೆಸ್ಲೆ, ಇನ್ಫೊ ಎಡ್ಜ್‌, ಜಿಎಂಆರ್‌ ಇನ್ಫ್ರಾ, ಎಸ್ಕಾರ್ಟ್ಸ್‌, ಎಂ&ಎಂ ಫೈನಾನ್ಸಿಯಲ್, ಬಾಟಾ ಇಂಡಿಯಾ, ಕೋಟಕ್ ಮಹೀಂದ್ರಾ ಭಾರೀ ಇಳಿಕೆ ಕಂಡಿವೆ.

Sensex Up 500 Points: Nifty Back Above 13100

ಯೆಸ್ ಬ್ಯಾಂಕಿನ ಷೇರುಗಳು ಶೇ. 5ರಷ್ಟು ಸರ್ಕ್ಯೂಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿವೆ. ಆಟೋ ಮಾರಾಟ ವರದಿಯು ವಾಹನ ತಯಾರಕ ಕಂಪನಿ ಷೇರುಗಳ ಮೇಲೆ ಪರಿಣಾಮ ಬೀರಿದೆ. ಮಾರುತಿ ಮಾರಾಟದಲ್ಲಿ ಶೇ. 2.4 ರಷ್ಟು ಕುಸಿತ ಕಂಡಿದೆ, ಆದರೆ ಟಾಟಾ ಮೋಟಾರ್ಸ್ ಅಶೋಕ್ ಲೇಲ್ಯಾಂಡ್‌ನಂತಹ ಇತರ ಕಂಪನಿಗಳು ಮಾರಾಟದಲ್ಲಿ ಹೆಚ್ಚಳವನ್ನು ವರದಿ ಮಾಡಿದೆ.

English summary
India's share market sensex and nifty up on Tuesday. sensex up 500 points and nifty back to 13,100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X