ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 431 ಪಾಯಿಂಟ್ಸ್‌ ಏರಿಕೆ

|
Google Oneindia Kannada News

ಮುಂಬೈ, ನವೆಂಬರ್ 26: ಲಾಭದ ಬುಕ್ಕಿಂಗ್ ಕಾರಣ ಬುಧವಾರ ಕುಸಿತಕ್ಕೆ ಕಾರಣವಾಗಿ ಭಾರತೀಯ ಷೇರುಪೇಟೆಯು ಗುರುವಾರ ಚೇತರಿಸಿಕೊಂಡಿದೆ. ಮಂಬೈ ಷೇರುಪೇಟೆ ಸೆನ್ಸೆಕ್ಸ್ 431 ಪಾಯಿಂಟ್ಸ್‌ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 100ಕ್ಕೂ ಅಧಿಕ ಪಾಯಿಂಟ್ಸ್‌ ಏರಿಕೆ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.98ರಷ್ಟು ಅಥವಾ 431.64 ಪಾಯಿಂಟ್ಸ್ ಏರಿಕೆಗೊಂಡು 44,259 ಪಾಯಿಂಟ್ಸ್ ದಾಖಲಿಸಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 128.6 ಪಾಯಿಂಟ್ಸ್‌ ಹೆಚ್ಚಳಗೊಂಡು 12,987 ಪಾಯಿಂಟ್ಸ್‌ ತಲುಪಿದೆ.

2025ರ ಯೋಜನೆಯನ್ನು ಬಿಚ್ಚಿಟ್ಟ ಮದರ್ಸನ್ ಸುಮಿ ಸಿಸ್ಟಮ್ಸ್ : ಷೇರುಗಳ ಬೆಲೆ ಏರಿಕೆ2025ರ ಯೋಜನೆಯನ್ನು ಬಿಚ್ಚಿಟ್ಟ ಮದರ್ಸನ್ ಸುಮಿ ಸಿಸ್ಟಮ್ಸ್ : ಷೇರುಗಳ ಬೆಲೆ ಏರಿಕೆ

ಗುರುವಾರ ಸುಮಾರು 1726 ಷೇರುಗಳು ಏರಿಕೆ ದಾಖಲಿಸಿದ್ದು, 986 ಷೇರುಗಳು ಕುಸಿದವು, ಮತ್ತು 179 ಷೇರುಗಳು ಯಾವುದೇ ಬದಲಾವಣೆಯಾಗಿಲ್ಲ.

 Sensex Up 431 Points, Nifty Near 13,000 Mark

ಲಾಭಗಳಿಸಿದ ಷೇರುಗಳು:

ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಗ್ರಾಸಿಮ್ ಇಂಡಸ್ಟ್ರೀಸ್, ಹಿಂಡಾಲ್ಕೊ ಮತ್ತು ಶ್ರೀ ಸಿಮೆಂಟ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಕಂಪನಿಗಳಾಗಿವೆ.

ನಷ್ಟ ಅನುಭವಿಸಿದ ಷೇರುಗಳು:

ಈಚರ್ ಮೋಟಾರ್ಸ್, ಬಿಪಿಸಿಎಲ್, ಮಾರುತಿ ಸುಜುಕಿ, ಒಎನ್‌ಜಿಸಿ ಮತ್ತು ಎಚ್‌ಡಿಎಫ್‌ಸಿ ಲೈಫ್ ನಷ್ಟ ಅನುಭವಿಸಿದ್ದು, ಲೋಹದ ಸೂಚ್ಯಂಕವು ಸುಮಾರು 4 ಪ್ರತಿಶತ ಮತ್ತು ನಿಫ್ಟಿ ಬ್ಯಾಂಕ್ ಮತ್ತು ಫಾರ್ಮಾ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಗಳಿಸಿವೆ.

English summary
After Wednesday loss India's share market sensex and nifty up on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X