ಸೆನ್ಸೆಕ್ಸ್ 261 ಪಾಯಿಂಟ್ಸ್ ಏರಿಕೆ, 14,200 ಪಾಯಿಂಟ್ಸ್ ಗಡಿ ಮುಟ್ಟಿದ ನಿಫ್ಟಿ
ನವದೆಹಲಿ, ಜನವರಿ 05: ಭಾರತೀಯ ಷೇರುಪೇಟೆ ಮಂಗಳವಾರ ಮತ್ತೊಂದು ಹಂತಕ್ಕೆ ತಲುಪಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಸೋಮವಾರ 300 ಪಾಯಿಂಟ್ಸ್ ಏರಿಕೆಗೊಂಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಇಂದು 261 ಪಾಯಿಂಟ್ಸ್ ಜಿಗಿತ ಸಾಧಿಸಿದ್ದು, ನಿಫ್ಟಿ 14,200ರ ಗಡಿ ಮುಟ್ಟಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 260.98 ಪಾಯಿಂಟ್ಸ್ ಅಥವಾ ಶೇಕಡಾ 0.54ರಷ್ಟು ಏರಿಕೆಗೊಂಡು 48,437.78 ತಲುಪಿದ್ದು, ಎನ್ಎಸ್ಇ ಸೂಚ್ಯಂಕ ನಿಫ್ಟಿ 66.60 ಪಾಯಿಂಟ್ಸ್ ಅಥವಾ ಶೇಕಡಾ 0.47ರಷ್ಟು ಹೆಚ್ಚಾಗಿ 14,199.50 ತಲುಪಿದೆ. ಇಂದು 1,740 ಷೇರುಗಳು ಏರಿಕೆ ದಾಖಲಿಸಿದ್ದು, 1,268 ಷೇರುಗಳು ಇಳಿಕೆ ಕಂಡಿವೆ. ಇದರ ಜೊತೆಗೆ 159 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
3,000 ರೂಪಾಯಿ ಗಡಿ ದಾಟಿದ ಟಿಸಿಎಸ್ ಷೇರು: ಹೂಡಿಕೆದಾರರಿಗೆ ಹಬ್ಬ!
ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಲೈಫ್, ವಿಪ್ರೊ ಮತ್ತು ಇಂಡಸ್ಇಂಡ್ ಬ್ಯಾಂಕ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಒಎನ್ಜಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಹಿಂಡಾಲ್ಕೊ ಇಳಿಕೆ ಕಂಡಿವೆ.
ನಿಫ್ಟಿ ಬ್ಯಾಂಕ್ ಮತ್ತು ಐಟಿ ಸೂಚ್ಯಂಕಗಳು ಶೇಕಡಾ 1.5-2.5 ರಷ್ಟು ಏರಿಕೆಯಾಗಿದ್ದು, ಲೋಹ ಮತ್ತು ಎನರ್ಜಿ ಸಂಬಂಧಿತ ಷೇರುಗಳಲ್ಲಿ ಏರಿಕೆ ಕಂಡಿದೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 15 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್ಗೆ 73.17 ಕ್ಕೆ ತಲುಪಿದೆ. ಇದು ಪ್ರತಿ ಡಾಲರ್ಗೆ 14 ಪೈಸೆ ಕಡಿಮೆಯಾಗಿ 73.16 ಕ್ಕೆ ತಲುಪಿದ್ದು, 73.08-73.27 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.