ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 1,300 ಪಾಯಿಂಟ್ಸ್ ಜಿಗಿತ

|
Google Oneindia Kannada News

ಭಾರತೀಯ ಷೇರು ಮಾರುಟ್ಟೆಯಲ್ಲಿ ಗೂಳಿ ಓಟ ಮುಂದುವರಿದೆ. ಸೋಮವಾರ ಕೇಂದ್ರ ಬಜೆಟ್ ಮಂಡನೆ ಬಳಿಕ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಮಂಗಳವಾರವೂ ಜಿಗಿತ ಕಂಡಿದೆ. ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲೇ 1,300ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ 350ಕ್ಕೂ ಅಧಿಕ ಪಾಯಿಂಟ್ಸ್‌ ಹೆಚ್ಚಾಗಿದೆ.

ಬೆಳಿಗ್ಗೆ 09.50ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 1370.51 ಪಾಯಿಂಟ್ಸ್‌ ಹೆಚ್ಚಾಗಿ 49,971.12 ಪಾಯಿಂಟ್ಸ್ ತಲುಪಿದೆ. ಇದಕ್ಕೂ ಮೊದಲು 50 ಸಾವಿರ ಗಡಿಯನ್ನು ಮುಟ್ಟಿತ್ತು. ಇನ್ನು ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 2.73ರಷ್ಟು ಅಥವಾ 389.6 ಪಾಯಿಂಟ್ಸ್ ಏರಿಕೆಗೊಂಡು 14,670 ಪಾಯಿಂಟ್ಸ್‌ಗೆ ತಲುಪಿದೆ.

ಆರಂಭದಲ್ಲಿ ಸುಮಾರು 1027 ಷೇರುಗಳು ಏರಿಕೆಗೊಂಡರೆ, 171 ಷೇರುಗಳು ಕುಸಿದವು, ಮತ್ತು 46 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆಟೊಮೊಬೈಲ್ ವಲಯದ ಷೇರುಗಳು, ಬ್ಯಾಂಕಿಂಗ್ ಹಾಗೂ ಟೆಕ್ಸ್‌ಟೈಲ್ಸ್ ಸಂಬಂಧಿತ ಷೇರುಗಳು ಏರಿಕೆಗೊಂಡಿವೆ.

Sensex Up 1,200 Points: Nifty Bank At Record High

ಸೋಮವಾರ ಸೆನ್ಸೆಕ್ಸ್ 2300 ಪಾಯಿಂಟ್ಸ್ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 646 ಪಾಯಿಂಟ್ಸ್‌ ಏರಿಕೆಗೊಂಡಿದೆ. ಇದೀಗ ಮಂಗಳವಾರ ಕೂಡ ಏರಿಕೆಗೊಂಡಿದ್ದು, ಜೊತೆಗೆ ಡಾಲರ್ ಏಳು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ. ರೂಪಾಯಿ ಪ್ರತಿ ಡಾಲರ್‌ಗೆ 73.05 ರಷ್ಟಿದೆ.

English summary
Indian indices continued the Budget day rally on February 2 with Nifty opens above 14,500. Sensex up 1200 Points
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X