ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿಯುತ್ತಿರುವ ರುಪಾಯಿ, ಏರುತ್ತಿರುವ ತೈಲದಿಂದ ನಲುಗಿದ ಷೇರುಪೇಟೆ

|
Google Oneindia Kannada News

ಭಾರತದ ಷೇರು ಮಾರುಕಟ್ಟೆಯಲ್ಲಿ ಬುಧವಾರ (ಅಕ್ಟೋಬರ್ 3) ಮತ್ತೊಮ್ಮೆ ತಲ್ಲಣ ಕಾಣಿಸಿಕೊಂಡಿದೆ. ಸೆನ್ಸೆಕ್ಸ್ 550.51 ಅಂಶಗಳಷ್ಟು ಕುಸಿತ ಕಂಡು 35,975.63 ಅಂಶಕ್ಕೆ ದಿನಾಂತ್ಯಕ್ಕೆ ಕೊನೆಯಾಗಿದೆ. ಈ ವರ್ಷದ ಜುಲೈ ನಂತರ ಇದೇ ಮೊದಲ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರಕ್ಕಿಂತ ಕೆಳಗೆ ಇಳಿದಿದೆ.

ನಿಫ್ಟಿ-50 ಸೂಚ್ಯಂಕವು 150.05 ಅಂಶಗಳಷ್ಟು ಕುಸಿತ ಕಂಡು, ದಿನಾಂತ್ಯಕ್ಕೆ 10,858.25ಕ್ಕೆ ಕೊನೆಯಾಗಿದೆ. ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಪ್ರಭಾವದಿಂದಾಗ ಷೇರು ಮಾರುಕಟ್ಟೆ ಕುಸಿತದ ಹಾದಿ ಕಂಡಿದೆ. ಡಾಲರ್ ವಿರುದ್ಧ ರುಪಾಯಿ ಮತ್ತೊಮ್ಮೆ ಸಾರ್ವಕಾಲಿಕ ಕುಸಿತ ಕಂಡಿದ್ದರಿಂದ ಹೂಡಿಕೆದಾರರು ನಿರಾಸೆಗೊಳಗಾದರು.

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ವಿದೇಶಿ ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಸಹ ಹೂಡಿಕೆದಾರರ ಆತಂಕಕ್ಕೆ ಕಾರಣವಾಯಿತು. ಮೂರು ದಿನಗಳ ಆರ್ ಬಿಐ ನೀತಿ ಪರಿಶೀಲನೆ ಆರಂಭವಾಗಲಿದೆ ಎಂಬ ಸುದ್ದಿ ಕೂಡ ಎಚ್ಚರಿಕೆ ಹೆಜ್ಜೆಗಳನ್ನು ಇಡಲು ಕಾರಣವಾಯಿತು.

Sensex plunges more than 500 points, hits 3 month low

ನಿಫ್ಟಿಯಲ್ಲಿ ವಾಹನ ಕ್ಷೇತ್ರದ ಷೇರು ಮೌಲ್ಯಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾದವು. ಎಫ್ ಎಂಸಿಜಿ ಹಾಗೂ ಐಟಿ ಸೂಚ್ಯಂಕಗಳು ಕೂಡ ಇಳಿಕೆ ಕಂಡವು. ಏಷ್ಯಾದ ಜಪಾನ್ ನ ನಿಕೈ ಹಾಗೂ ಹಾಂಕಾಂಗ್ ನ ಹಾಂಗ್ ಸೆಂಗ್ ಸೂಚ್ಯಂಕಗಳು ಕೂಡ ಇಳಿಕೆ ಕಂಡಿವೆ.

English summary
The domestic stock indices Sensex and Nifty plunged to their three-month low levels on Wednesday plagued by crashing rupee and surging crude oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X