ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟ ಸುದ್ದಿ, ವಾತಾವರಣದ ಭಾರಕ್ಕೆ ಕುಸಿದ ಭಾರತೀಯ ಷೇರು ಮಾರುಕಟ್ಟೆ

By ಅನಿಲ್ ಆಚಾರ್
|
Google Oneindia Kannada News

ಸಾಲು ಸಾಲು ಕೆಟ್ಟ ಸುದ್ದಿ, ವಾತಾವರಣದ ಕಾರಣಕ್ಕೆ ಸೋಮವಾರದಂದು ಭಾರತೀಯ ಷೇರು ಮಾರುಕಟ್ಟೆ ಭಾರೀ ಇಳಿಕೆ ಕಂಡಿದೆ. ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ ಹಾಗೂ ಎನ್ ಎಸ್ ಇ ನಿಫ್ಟಿ- 50 ಸೂಚ್ಯಂಕ ಇವೆರಡರ ಜತೆಗೆ ರುಪಾಯಿ ಮೌಲ್ಯ ಕುಸಿತವೂ ಸೇರಿ ಏಷ್ಯಾದ ಮಾರುಕಟ್ಟೆ ಆರೂವರೆ ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಕೂಡ ಇಂದಿನ ಬೆಳವಣಿಗೆಗೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ಚೀನಾದ ಕರೆನ್ಸಿ ಯುವಾನ್ ಕೂಡ ದಶಕದಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚೀನಾ- ಅಮೆರಿಕ ಮಧ್ಯದ ವಾಣಿಜ್ಯ ಸಂಘರ್ಷ ಈಗಿನ ಸನ್ನಿವೇಶಕ್ಕೆ ಕಾರಣ ಎನ್ನಲಾಗುತ್ತಿದ್ದು, ಹೂಡಿಕೆದಾರರಲ್ಲಿ ಆತಂಕವನ್ನಂತೂ ಸೃಷ್ಟಿಸಿದೆ. ಬಾಂಡ್ಸ್, ಚಿನ್ನ ಎಲ್ಲವೂ ಹೊಳಪು ಕಳೆದುಕೊಂಡಿರುವುದರಿಂದ ಸೋಮವಾರ ಸೆನ್ಸೆಕ್ಸ್ 701 ಅಂಶಗಳಷ್ಟು ಕುಸಿದು, 36,443.41 ಅಂಶಕ್ಕೆ ತಲುಪಿದೆ.

ಇನ್ನು ನಿಫ್ಟಿ 50 ಸೂಚ್ಯಂಕವು ತುಂಬ ಪ್ರಮುಖ ಘಟ್ಟವಾದ 10,800ರ ಅಂಶವನ್ನು ಮೀರಿ ಇಳಿಕೆ ಹಾದಿಯಲ್ಲಿದೆ. ಈ ಮಧ್ಯೆ ಜಮ್ಮು- ಕಾಶ್ಮೀರದಲ್ಲಿ ಪ್ರಮುಖ ನಾಯಕರ ಗೃಹ ಬಂಧನ ಹಾಗೂ ಸಂವಿಧಾನದ ಪರಿಚ್ಛೇದ 370 ಅನ್ನು ರದ್ದುಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇರಿಸಿರುವ ಪ್ರಸ್ತಾವ ಕೂಡ ಹೂಡಿಕೆದಾರರನ್ನು ಭಾವನಾತ್ಮಕವಾಗಿ ನಕಾರಾತ್ಮಕ ಚಿಂತನೆಗೆ ದೂಡಿದೆ. ಸಂವಿಧಾನದ ಪರಿಚ್ಛೇದ 370 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತದೆ.

ಕುಸಿತದ ನಡುವೆ ಎದ್ದು ನಿಂತು ಭರವಸೆ ಮೂಡಿಸಿದ ಷೇರುಗಳುಕುಸಿತದ ನಡುವೆ ಎದ್ದು ನಿಂತು ಭರವಸೆ ಮೂಡಿಸಿದ ಷೇರುಗಳು

ಯಾವುದೆಲ್ಲ ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ ಎಂಬುದರ ಪಟ್ಟಿ ಹೀಗಿದೆ:
* ಸೋಮವಾರ ಬೆಳಗ್ಗೆ 11.20ರ ಹೊತ್ತಿಗೆ ಸೆನ್ಸೆಕ್ಸ್ 621 ಅಂಶಗಳು ಹಾಗೂ ನಿಫ್ಟಿ 185 ಆಂಶಗಳ ಕುಸಿತ ಕಂಡವು. ಅಮೆರಿಕ- ಚೀನಾ ಮಧ್ಯದ ವಾಣಿಜ್ಯ ಬಿಕ್ಕಟ್ಟು, ಕಾಶ್ಮೀರದಲ್ಲಿನ ರಾಜಕೀಯ ಸನ್ನಿವೇಶದಿಂದ ಸೃಷ್ಟಿಸಿರುವ ಆತಂಕ ಷೇರು ಮಾರುಕಟ್ಟೆಯಲ್ಲಿ ಭಯ ಹುಟ್ಟಿಸಿವೆ.

Sensex, Nifty falls due to global and domestic cues

* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ $300 ಬಿಲಿಯನ್ ಮೌಲ್ಯದ ಉತ್ಪನ್ನಗಳ ಆಮದಿನ ಮೇಲೆ ದಿಢೀರ್ 10 ಪರ್ಸೆಂಟ್ ಸುಂಕ ವಿಧಿಸಿದ ಹೊಡೆತ ಜೋರಾಗಿ ಬಿದ್ದಿದೆ.

* ಈ ಬೆಳವಣಿಗೆಗೆ ಪ್ರತಿಕ್ರಿಯೆ ಎಂಬಂತೆ ಚೀನಾದ ಕರೆನ್ಸಿಗೆ ಹೊಡೆತ ಬಿದ್ದಿದೆ. ವಾಣಿಜ್ಯ ಬಿಕ್ಕಟ್ಟಿನಿಂದ ಕರೆನ್ಸಿ ಯುದ್ಧಕ್ಕೆ ಮುನ್ನುಡಿ ಬರೆದಿದೆ.

* ಅಂತರರಾಷ್ಟ್ರೀಯ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ವಿದೇಶಿ ಹೂಡಿಕೆದಾರರು 2,888.06 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು 2,812.66 ಕೋಟಿ ಮೌಲ್ಯದ ಷೇರು ಖರೀದಿ ಮಾಡಿದ್ದಾರೆ.

* ವಿದೇಶಿ ಪೋರ್ಟಿಫೋಲಿಯೋ ಹೂಡಿಕೆದಾರರು ಷೇರು ಮಾರಾಟ ಮಾಡುತ್ತಿರುವುದರ ಹಿಂದೆ ಕೂಡ ಕಾರಣ ಇದೆ. ಅದೇನೆಂದರೆ, ಬಜೆಟ್ ವೇಳೆ 2 ಕೋಟಿಗೂ ಹೆಚ್ಚು ಹಾಗೂ 5 ಕೋಟಿಗೂ ಹೆಚ್ಚು ಆದಾಯ ಇರುವವರಿಗೆ ಹೆಚ್ಚಿನ ತೆರಿಗೆ ವಿಧಿಸುವ ನಿರ್ಧಾರ ಮಾಡಿದ ಮೇಲೆ ವಿದೇಶಿ ಪೋರ್ಟ್ ಫೋಲಿಯೋ ವಿದೇಶಿ ಹೂಡಿಕೆದಾರರು 12,418.73 ಕೋಟಿ ಮೌಲ್ಯದ ಷೇರುಗಳನ್ನು ಜುಲೈ ತಿಂಗಳಲ್ಲಿ ಮಾರಾಟ ಮಾಡಿದ್ದಾರೆ.

ಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ: ನೆಲಕಚ್ಚಿದ ಷೇರುಗಳುಸೆನ್ಸೆಕ್ಸ್, ನಿಫ್ಟಿ ಭಾರಿ ಕುಸಿತ: ನೆಲಕಚ್ಚಿದ ಷೇರುಗಳು

* ಸೆನ್ಸೆಕ್ಸ್ ನಲ್ಲಿ 19 ವಲಯಗಳ ಪೈಕಿ 17 ವಲಯದ ಷೇರುಗಳು ಕಡಿಮೆ ದರದಲ್ಲಿ ವಹಿವಾಟು ಆಗುತ್ತಿದೆ. ಆದರೆ ಬಿಎಸ್ ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಮಾತ್ರ 0.7 ಪರ್ಸೆಂಟ್ ಏರಿಕೆ ಆಗಿದೆ. ಅದು ಕೂಡ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿದಿದೆ ಎಂಬ ಕಾರಣಕ್ಕೆ.

* ಮಧ್ಯಮ ಹಾಗೂ ಸಣ್ಣ ಪ್ರಮಾಣದ ಬಂಡವಾಳ ಹೊಂದಿರುವ ಕಂಪೆನಿಗಳು ಸಹ ಮಾರಾಟ ಒತ್ತಡಕ್ಕೆ ಸಿಲುಕಿವೆ.

* ನಿಫ್ಟಿ 50 ಬುಟ್ಟಿಯೊಳಗಿನ ಷೇರುಗಳಲ್ಲಿ 47 ಷೇರು ಕೆಂಪು ಬಣ್ಣದಲ್ಲಿವೆ. ಅರ್ಥಾತ್ ಕುಸಿಯುತ್ತಿದೆ. ಅದರ ಮುಂಚೂಣಿಯಲ್ಲಿ ಇರುವುದು 9 ಪರ್ಸೆಂಟ್ ನಷ್ಟು ಕುಸಿತ ಕಂಡ ಯೆಸ್ ಬ್ಯಾಂಕ್. ಟಾಟಾ ಮೋಟಾರ್ಸ್, ವೇದಾಂತ, ಜೆಎಸ್ ಡಬ್ಲ್ಯು ಸ್ಟೀಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಪವರ್ ಗ್ರಿಡ್, ಹಿಂಡಾಲ್ಕೊ, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಭಾರತ್ ಪೆಟ್ರೋಲಿಯಂ, ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 3ರಿಂದ 5.4 ಪರ್ಸೆಂಟ್ ನಷ್ಟು ಕುಸಿದಿವೆ.

* ಟಿಸಿಎಸ್, ಇನ್ಫೋಸಿಸ್ ಸೇರಿ ಕೆಲವು ಷೇರುಗಳು ಮಂದಗತಿ ಕಾಣುವಂತಾಯಿತು.

English summary
Sino- US trade crisis, Jammu and Kashmir political tension leads to fall in Indian stock market. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X