ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್‌ ಮತ್ತೆ ಜಿಗಿತ, 529 ಪಾಯಿಂಟ್ಸ್‌ ಏರಿಕೆ: ಸತತ 3ನೇ ವರ್ಷ ರೂಪಾಯಿ ಕುಸಿತ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಭಾರತೀಯ ಷೇರುಪೇಟೆಯು ಸತತ ಮೂರನೇ ದಿನ ಏರಿಕೆ ದಾಖಲಿಸಿದ್ದು, ಕ್ರಿಸ್‌ಮಸ್‌ ಸೇರಿದಂತೆ ವಾರಾಂತ್ಯದ ರಜಾ ದಿನಗಳಿಗೂ ಮೊದಲು ಜಿಗಿತ ಸಾಧಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 529 ಪಾಯಿಂಟ್ಸ್‌ ಏರಿಕೆ ದಾಖಲಿಸಿದ್ದು, ನಿಫ್ಟಿ 148 ಪಾಯಿಂಟ್ಸ್‌ ಜಿಗಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 529 ಪಾಯಿಂಟ್ಸ್‌ ಅಥವಾ ಶೇ. 1.14ರಷ್ಟು ಏರಿಕೆಗೊಂಡು 46,973.54 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 148 ಪಾಯಿಂಟ್ಸ್ ಅಥವಾ ಶೇಕಡಾ 1.09ರಷ್ಟು ಹೆಚ್ಚಳಗೊಂಡು 13,749.25ಕ್ಕೆ ತಲುಪಿದೆ.

ಸೆನ್ಸೆಕ್ಸ್ 437 ಪಾಯಿಂಟ್ಸ್‌ ಜಿಗಿತ: 13,600ರ ಗಡಿ ದಾಟಿದ ನಿಫ್ಟಿಸೆನ್ಸೆಕ್ಸ್ 437 ಪಾಯಿಂಟ್ಸ್‌ ಜಿಗಿತ: 13,600ರ ಗಡಿ ದಾಟಿದ ನಿಫ್ಟಿ

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 0.06 ಮತ್ತು ಶೇ. 0.59 ರಷ್ಟು ಏರಿಕೆಯಾಗಿದೆ. ಎನ್‌ಎಸ್ಇ ನಲ್ಲಿ ವೇದಾಂತ, ಅಂಬುಜಾ ಸಿಮೆಂಟ್ಸ್‌, ಟಾಟಾ ಮೋಟಾರ್ಸ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ಸ್, ಆ್ಯಕ್ಸಿಸ್ ಬ್ಯಾಂಕ್, ಸನ್‌ಫಾರ್ಮಾ, ಒಎನ್‌ಜಿಸಿ, ರಿಲಯನ್ಸ್‌, ಐಒಸಿ ಲಾಭಗಳಿಸಿದ ಪ್ರಮುಖ ಷೇರುಗಳಾಗಿವೆ.

Sensex Jumps 529 Points: Nifty Ends At 13749

ಐಡಿಬಿಐ ಬ್ಯಾಂಕ್, ನೆಸ್ಲೆ, ವಿಪ್ರೋ, ಯುಪಿಎಲ್‌, ಗ್ರೇಸಿಎಂ, ಡಾ. ರೆಡ್ಡಿ ಲ್ಯಾಬ್ಸ್‌, ಈಚರ್ ಮೋಟಾರ್ಸ್‌, ಹೆಚ್‌ಸಿಎಲ್‌ ಟೆಕ್, ಇಂಡಸ್‌ಇಂಡ್ ಬ್ಯಾಂಕ್, ಶ್ರೀ ಸಿಮೆಂಟ್ಸ್‌ ಪ್ರಮುಖ ನಷ್ಟಗೊಂಡ ಷೇರುಗಳಾಗಿವೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

2020 ರಲ್ಲಿ ಭಾರತದ ರೂಪಾಯಿ ಮೌಲ್ಯವು 3.5 ಪ್ರತಿಶತದಷ್ಟು (ವೈಟಿಡಿ) ಕುಸಿದಿದೆ. ಇದು ರೂಪಾಯಿಯ ಕುಸಿತದ ಸತತ ಮೂರನೇ ವರ್ಷವಾಗಿದೆ. ವರ್ಷದ ಆರಂಭದಲ್ಲಿ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 77 ಕ್ಕೆ ತಲುಪಿದೆ. ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಎಫ್‌ಐಐ / ಎಫ್‌ಪಿಐ ಮತ್ತು ಇತರ ಪಿಇ ಹೂಡಿಕೆಗಳಿಂದ ದಾಖಲೆಯ ಒಳಹರಿವಿನ ಹೊರತಾಗಿಯೂ ರೂಪಾಯಿ ಲಾಭಗಳಿಸಲು ವಿಫಲಗೊಂಡಿದೆ.

English summary
Market benchmarks Sensex and Nifty ended in the green for the third consecutive session amid positive global cues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X