ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್ 437 ಪಾಯಿಂಟ್ಸ್‌ ಜಿಗಿತ: 13,600ರ ಗಡಿ ದಾಟಿದ ನಿಫ್ಟಿ

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಸೋಮವಾರ ಕುಸಿತದ ಬಳಿಕ ಸತತ ಎರಡು ದಿನಗಳು ಭಾರತೀಯ ಷೇರುಪೇಟೆಯು ಏರಿಕೆಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಬುಧವಾರ 437 ಪಾಯಿಂಟ್ಸ್‌ ಜಿಗಿದಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 13,600ರ ಗಡಿದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 437 ಪಾಯಿಂಟ್ಸ್‌ ಅಥವಾ ಶೇಕಡಾ 0.95ರಷ್ಟು ಏರಿಕೆಗೊಂಡು 46,444.18 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 134.8 ಪಾಯಿಂಟ್ಸ್ ಏರಿಕೆಗೊಂಡು 13,601.10 ಪಾಯಿಂಟ್ಸ್‌ಗೆ ವಹಿವಾಟು ಅಂತ್ಯಗೊಳಿಸಿತು.

ಮುಗ್ಗರಿಸಿದ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 450 ಪಾಯಿಂಟ್ಸ್‌ ಏರಿಕೆಮುಗ್ಗರಿಸಿದ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 450 ಪಾಯಿಂಟ್ಸ್‌ ಏರಿಕೆ

ಐಟಿ ಮತ್ತು ಎಫ್‌ಎಂಸಿಜಿ ಬೃಹತ್ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಐಟಿಸಿ ಷೇರುಗಳ ಏರಿಕೆಯು ಮಾರುಕಟ್ಟೆಯಲ್ಲಿನ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 2.40 ಮತ್ತು 2.65 ರಷ್ಟು ಹೆಚ್ಚಾಗಿದೆ.

Sensex Jumps 437 Points: Nifty Settles Above 13600

ಮುಂಬರುವ ದಿನಗಳಲ್ಲಿ, ಕಟ್ಟುನಿಟ್ಟಾದ ಲಾಕ್‌ಡೌನ್‌ನಿಂದಾಗಿ ಶೀಘ್ರದಲ್ಲೇ ಅಂತಿಮಗೊಳ್ಳುವ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀಳುವ ನಿರೀಕ್ಷೆಯಿರುವ ಬ್ರೆಕ್ಸಿಟ್ ವ್ಯಾಪಾರ ಒಪ್ಪಂದಗಳ ಬಗ್ಗೆಯೂ ಮಾರುಕಟ್ಟೆ ಗಮನ ಹರಿಸಲಿದೆ. ಹೂಡಿಕೆದಾರರು ಹೊಸ ಕೋವಿಡ್ ರೂಪಾಂತರದ ಆತಂಕದ ಅಶ್ಚಿತತೆಯನ್ನು ಹೊಂದಿದ್ದಾರೆ.

English summary
Mixed golbal cues Sensex closed 437 points, or 0.95 percent, higher at 46,444.18 and Nifty settled 135 points, or 1 percent, higher at 13,601.10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X