ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರುಮುಖದಲ್ಲೇ ಸಾಗಿದ್ದ ಷೇರುಪೇಟೆ ಕುಸಿತ, ಸೆನ್ಸೆಕ್ಸ್ 263 ಪಾಯಿಂಟ್ಸ್‌ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 06: ಸತತ ಏರುಮುಖದತ್ತ ಸಾಗಿದ್ದ ಭಾರತೀಯ ಷೇರುಪೇಟೆ ರ್ಯಾಲಿ ಬುಧವಾರ ಕೊಂಚ ವಿರಾಮ ನೀಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 263 ಪಾಯಿಂಟ್ಸ್ ಕುಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 53 ಪಾಯಿಂಟ್ಸ್ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 263.72 ಪಾಯಿಂಟ್ಸ್‌ ಅಥವಾ ಶೇಕಡಾ 0.54ರಷ್ಟು ಇಳಿಕೆಗೊಂಡು 48,174.06 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 53.25 ಪಾಯಿಂಟ್ಸ್ ಕುಸಿದು 14,146.25 ಪಾಯಿಂಟ್ಸ್‌ ಮುಟ್ಟಿದೆ. ಇಂದು 1,494 ಷೇರುಗಳು ಏರಿಕೆ ದಾಖಲಿಸಿದ್ದು, 1,543 ಷೇರುಗಳು ಇಳಿಕೆಗೊಂಡಿವೆ ಮತ್ತು 128 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಪ್ರಮುಖ IPOಗಳ ಮಾಹಿತಿ ಇಲ್ಲಿದೆ2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಪ್ರಮುಖ IPOಗಳ ಮಾಹಿತಿ ಇಲ್ಲಿದೆ

ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಮತ್ತು ಎಚ್‌ಯುಎಲ್ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸಿದ ಷೇರುಗಳಾಗಿವೆ. ಪವರ್ ಗ್ರಿಡ್ ಕಾರ್ಪ್, ಶ್ರೀ ಸಿಮೆಂಟ್ಸ್, ಗೇಲ್, ಹಿಂಡಾಲ್ಕೊ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಅನುಭವಿಸಿವೆ.

Sensex Falls 263 Points: Nifty Drag By IT, FMCG Stocks

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 73.11 ರೂಪಾಯಿಗೆ ತಲುಪಿದೆ. ಇದು ಮಂಗಳವಾರ 73.17 ರ ಮುಕ್ತಾಯದ ವಿರುದ್ಧ ಪ್ರತಿ ಡಾಲರ್‌ಗೆ 73.17 ಕ್ಕೆ ವಹಿವಾಟು ಆರಂಭಿಸಿ 73.05-73.19 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

English summary
After a gap up opening, benchmark indices witnessed profit booking in second half which drag the Nifty below 14,150
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X