ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಎರಡನೇ ಕುಸಿದ ಸೆನ್ಸೆಕ್ಸ್: 300 ಪಾಯಿಂಟ್‌ಗಳ ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಸೆನ್ಸೆಕ್ಸ್ ಮಂಗಳವಾರ ಸತತ ಎರಡನೇ ವಹಿವಾಟಿನ ದಿನದಂದು ಸುಮಾರು 300 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಸೋಮವಾರ 800 ಪಾಯಿಂಟ್‌ಗಳ ಕುಸಿತದ ಬಳಿಕ ಎರಡನೇ ಸತತ ದಿನ ಇಳಿಮುಖಗೊಂಡಿದೆ.

ಸೋಮವಾರ ನಡೆದ ಶೇಕಡಾ 4 ರ ಕುಸಿತದ ನಂತರ ಜಾಗತಿಕ ಮಾರುಕಟ್ಟೆಗಳು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಶೇ 1 ರಷ್ಟು ಏರಿಕೆ ಕಂಡಿದ್ದು, ಆದರೆ, ಭಾರತೀಯ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಭಾವನೆಗಳು ದುರ್ಬಲವಾಗಿಯೇ ಇದ್ದವು.

ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ ಭಾರೀ ಕುಸಿತಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ ಭಾರೀ ಕುಸಿತ

ಸೆನ್ಸೆಕ್ಸ್ ದಿನವನ್ನು ಸುಮಾರು 300 ಪಾಯಿಂಟ್‌ಗಳಿಂದ ಕೊನೆಗೊಳಿಸಿದರೆ, ನಿಫ್ಟಿ 97 ಪಾಯಿಂಟ್‌ಗಳನ್ನು ಕಳೆದುಕೊಂಡು 11,153 ಪಾಯಿಂಟ್‌ಗಳಿಗೆ ಮುಕ್ತಾಯಗೊಂಡಿತು.

Sensex Drops Again: 1100 Point In 2 Days

ಅಪ್ಲಿಕೇಶನ್ ನಿರ್ವಹಣಾ ಸೇವೆಗಳು, ದತ್ತಾಂಶ ಸೇವೆಗಳು ಮತ್ತು ಸೈಬರ್ ಭದ್ರತಾ ಸೇವೆಗಳಿಗಾಗಿ ಐದು ವರ್ಷಗಳ ಒಪ್ಪಂದದ ಮೂಲಕ ಇಂಗ್ಲೆಂಡ್‌ನ ಪ್ರಮುಖ ಸೂಪರ್‌ ಮಾರ್ಕೆಟ್ ಸರಪಳಿಯಾದ ಮಾರಿಸನ್ಸ್‌ನೊಂದಿಗಿನ ಸಹಭಾಗಿತ್ವವನ್ನು ಕಂಪನಿಯು ವಿಸ್ತರಿಸಿದ ನಂತರ ಟಿಸಿಎಸ್ ಇಂದು ವಹಿವಾಟಿನಲ್ಲಿ ಅಗ್ರ ಲಾಭ ಗಳಿಸಿದೆ.

ಟಿವಿ ಟುಡೆ, ಜೀ ಎಂಟರ್‌ಟೈನ್‌ಮೆಂಟ್‌ನಂತಹ ಷೇರುಗಳು ಶೇಕಡಾ 6 ಕ್ಕಿಂತ ಹೆಚ್ಚು ಕುಸಿದಿದ್ದರಿಂದ ಮಾಧ್ಯಮ ಸೂಚ್ಯಂಕವು ಇಂದು ವ್ಯಾಪಾರದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ಸೂಚ್ಯಂಕಗಳಲ್ಲಿ ಒಂದಾಗಿದೆ. ಕುಸಿದ ಇತರ ಮಾಧ್ಯಮ ಷೇರುಗಳು ಹ್ಯಾಥ್‌ವೇ ಕೇಬಲ್ ಮತ್ತು ಡಾಟಾಕಾಮ್ ಮತ್ತು ಟಿವಿ 18 ಆಗಿವೆ. ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಬ್ಯಾಂಕಿಂಗ್ ಷೇರುಗಳು ಇಂದು ವ್ಯಾಪಾರದಲ್ಲಿ ಕಡಿಮೆ ಹಾನಿಯನ್ನು ಕಂಡವು.

ರಿಲಯನ್ಸ್ ಇಂಡಸ್ಟ್ರೀಸ್ ಶೇ. 2 ರಷ್ಟು ನಷ್ಟದೊಂದಿಗೆ ಸೂಚ್ಯಂಕಗಳನ್ನು ಕೆಳಕ್ಕೆ ಎಳೆಯುವಲ್ಲಿ ಯಶಸ್ವಿಯಾಗಿದೆ.

English summary
The Sensex fell for the second straight trading day in a row on Tuesday by nearly 300 points, adding to the 800 points fall seen on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X