ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್ 900 ಪಾಯಿಂಟ್ಸ್ ಕುಸಿತ, ನಿಫ್ಟಿ 271 ಪಾಯಿಂಟ್ಸ್ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 27: ಭಾರತೀಯ ಷೇರುಪೇಟೆಯಲ್ಲಿ ಬುಧವಾರ ಕರಡಿ ಕುಣಿತ ಜೋರಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಬರೋಬ್ಬರಿ 900ಕ್ಕೂ ಅಧಿಕ ಕುಸಿತ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,000 ಗಡಿಯಿಂದ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 937.66 ಪಾಯಿಂಟ್ಸ್ ಅಥವಾ ಶೇಕಡಾ 1.94ರಷ್ಟು ಕುಸಿದು 47,409 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 271.4 ಪಾಯಿಂಟ್ಸ್ ಅಥವಾ ಶೇಕಡಾ 1.91ರಷ್ಟು ಇಳಿಕೆಗೊಂಡು 13,967.50 ಪಾಯಿಂಟ್ಸ್‌ಗೆ ಮುಟ್ಟಿದೆ. ಇಂದು 1053 ಷೇರುಗಳು ಏರಿಕೆ ಕಂಡರೆ, 1809 ಷೇರುಗಳು ಕುಸಿದವು, ಮತ್ತು 141 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 ಭಾರತೀಯ ಷೇರುಪೇಟೆ: ಸೆನ್ಸೆಕ್ಸ್ 764 ಪಾಯಿಂಟ್ಸ್ ಕುಸಿತ, 14,400 ಪಾಯಿಂಟ್ಸ್‌ಗಿಂತ ಕೆಳಗಿಳಿದ ನಿಫ್ಟಿ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್ 764 ಪಾಯಿಂಟ್ಸ್ ಕುಸಿತ, 14,400 ಪಾಯಿಂಟ್ಸ್‌ಗಿಂತ ಕೆಳಗಿಳಿದ ನಿಫ್ಟಿ

ಬ್ಯಾಂಕ್, ಆಟೋ, ಮೆಟಲ್ ಮತ್ತು ಫಾರ್ಮಾ ಸ್ಟಾಕ್‌ಗಳಲ್ಲಿ ಮಾರಾಟ ಹೆಚ್ಚು ಕಂಡು ಬಂದಿದ್ದು, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಗೇಲ್ ಮತ್ತು ಟೈಟಾನ್ ಕಂಪನಿ ನಿಫ್ಟಿಯಲ್ಲಿ ಪ್ರಮುಖ ನಷ್ಟ ಅನುಭವಿಸದ ಷೇರುಗಳಾಗಿವೆ. ಟೆಕ್ ಮಹೀಂದ್ರಾ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ವಿಪ್ರೋ, ಐಟಿಸಿ ಮತ್ತು ಪವರ್ ಗ್ರಿಡ್ ಕಾರ್ಪ್ ಕೊಂಚ ಏರಿಕೆ ಕಂಡಿವೆ.

Sensex Drops 938 Points: Nifty Ends Below 14,000 Points

ಎಫ್‌ಎಂಸಿಜಿಯನ್ನು ಹೊರತುಪಡಿಸಿ, ಇತರ ಎಲ್ಲ ವಲಯ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.5 ರಿಂದ 1.3ರಷ್ಟು ಇಳಿಕೆಗೊಂಡವು.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಲಾಭದ ಬುಕಿಂಗ್ ಕಂಡ ಮಧ್ಯೆ, ಭಾರತೀಯ ರೂಪಾಯಿ ಹೆಚ್ಚಿನ ದಿನದ ಲಾಭವನ್ನು ಅಳಿಸಿಹಾಕಿತು ಮತ್ತು ದಿನದ ಕನಿಷ್ಠ ಮಟ್ಟಕ್ಕೆ ಪ್ರತಿ ಡಾಲರ್‌ಗೆ 72.92 ರೂಪಾಯಿಗೆ ಕೊನೆಗೊಂಡಿತು.

English summary
Sensex was down 938 points or 1.94% at 47,409 Points, and the Nifty was down 133.00 points or 0.93% at 14,238.90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X