ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನ ಹಾದಿಗೆ ಬಂದ ಬಿಜೆಪಿ, ಚೇತರಿಕೆ ಕಂಡ ಶೇರು ಪೇಟೆ

By Sachhidananda Acharya
|
Google Oneindia Kannada News

ಮುಂಬೈ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಲ್ಲಿ ಭರ್ಜರಿ ಜಯದ ಕನಸು ಕಂಡಿದ್ದ ಬಿಜೆಪಿಗೆ ಆರಂಭದಲ್ಲಿ ಕಾಂಗ್ರೆಸ್ ತಣ್ಣೀರೆರೆಚಿತ್ತು. ಕೇಸರಿ ಪಕ್ಷದ ಜಯ ತೂಗುಯ್ಯಾಲೆಯಲ್ಲಿದ್ದು ಪರಿಣಾಮ ಶೇರುಪೇಟೆಯಲ್ಲಿ ತಲ್ಲಣ ಕಾಣಿಸಿಕೊಂಡಿತ್ತು.

ಆದರೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡೂ ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆಯುವತ್ತ ಮುಂದುವರಿದಿದ್ದು ಶೇರು ಪೇಟೆಯಲ್ಲಿ ಮತ್ತೆ ಚೇತರಿಕೆ ಕಂಡು ಬಂದಿದೆ.

ಗುಜರಾತ್ ನಲ್ಲಿ ಬಿಜೆಪಿಗೆ ಮೊದಲ ಗೆಲುವುಗುಜರಾತ್ ನಲ್ಲಿ ಬಿಜೆಪಿಗೆ ಮೊದಲ ಗೆಲುವು

11.05 ನಿಮಿಷಕ್ಕೆ ಸೆನ್ಸೆಕ್ಸ್ 296 ಅಂಕ ಏರಿಕೆ ಕಂಡು 33,759 ಅಂಕಗಳಲ್ಲಿ ನೆಲೆ ನಿಂತಿತ್ತು. ಇನ್ನು ನಿಫ್ಟಿ 93 ಅಂಕಗಳ ಏರಿಕೆ ಕಂಡು 10,426 ರಲ್ಲಿ ನೆಲೆ ನಿಂತಿದೆ.

Markets regain following Gujarat BJP win

ಈ ಹಿಂದೆ ಸೆನ್ಸೆಕ್ಸ್ ನಲ್ಲಿ 600.51 ಅಂಕಗಳ ಕುಸಿತ ಕಂಡು ಬಂದಿದ್ದು 9 ಗಂಟೆ 30 ನಿಮಿಷದ ಹೊತ್ತಿಗೆ 32,862.46 ಅಂಕಗಳಲ್ಲಿ ನೆಲೆ ನಿಂತಿತ್ತು. ಇನ್ನು 9.30ರ ವೇಳೆಗೆ ನಿಫ್ಟಿ ಸೂಚ್ಯಂಕ 10,134.35 ಇತ್ತು.

ಸದ್ಯ ಚುನಾವಣಾ ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 98, ಕಾಂಗ್ರೆಸ್ 73 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇತರರು 6 ಸ್ಥಾನಗಳಲ್ಲಿ ಮುನ್ನಡೆಯಲಿದ್ದಾರೆ. 182 ಸದಸ್ಯಬಲದ ಗುಜರಾತ್ ನಲ್ಲಿ ಬಹುಮತಕ್ಕೆ 92 ಸ್ಥಾನಗಳು ಅಗತ್ಯವಾಗಿವೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 39, ಕಾಂಗ್ರೆಸ್ 21, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 68 ಸದಸ್ಯಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿವೆ.

English summary
Sensex down over 600 points after BJP starts trailing in Gujarat assembly election results 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X