• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಷೇರುಪೇಟೆ ಕುಸಿತ: ಸೆನ್ಸೆಕ್ಸ್ 500 ಪಾಯಿಂಟ್ಸ್‌ ಇಳಿಕೆ

|
Google Oneindia Kannada News

ನವದೆಹಲಿ, ಜನವರಿ 28: ಭಾರತೀಯ ಷೇರುಪೇಟೆಯು ಗುರುವಾರ ಮತ್ತಷ್ಟು ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬೆಳಿಗ್ಗೆ 10.50ರ ಸುಮಾರಿಗೆ 478 ಪಾಯಿಂಟ್ಸ್‌ಗಳು ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್‌ ಇಳಿಕೆಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ಶೇಕಡಾ 1.01ರಷ್ಟು ಅಥವಾ 478 ಪಾಯಿಂಟ್ಸ್‌ ಇಳಿಕೆಗೊಂಡು 46,955 ಪಾಯಿಂಟ್ಸಗಳನ್ನು ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1ರಷ್ಟು ಅಥವಾ 133 ಪಾಯಿಂಟ್ಸ್‌ ಕುಸಿದು 13,843 ಪಾಯಿಂಟ್ಸ್‌ಗೆ ತಲುಪಿದೆ.

ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್ 900 ಪಾಯಿಂಟ್ಸ್ ಕುಸಿತ, ನಿಫ್ಟಿ 271 ಪಾಯಿಂಟ್ಸ್ ಇಳಿಕೆಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್ 900 ಪಾಯಿಂಟ್ಸ್ ಕುಸಿತ, ನಿಫ್ಟಿ 271 ಪಾಯಿಂಟ್ಸ್ ಇಳಿಕೆ

ಇಂದು ಆರಂಭಿಕ ವಹಿವಾಟಿನಲ್ಲಿ 1,178 ಷೇರುಗಳು ಏರಿಕೆಗೊಂಡಿವೆ, 1,113 ಷೇರುಗಳು ಕುಸಿತ ಕಂಡಿದ್ದು 101 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬ್ಯಾಂಕಿಂಗ್, ಫಾರ್ಮಾ ಷೇರುಗಳು ಮತ್ತು ಐಟಿ ಷೇರುಗಳು ಶೇಕಡಾ 1.2ರಷ್ಟು ಇಳಿಕೆಗೊಂಡಿದ್ದು, ಆಟೊಮೊಬೈಲ್‌ ಷೇರುಗಳು ಶೇಕಡಾ 0.8ರಷ್ಟು ಇಳಿಕೆಗೊಂಡಿವೆ.

ಟೆಕ್ ಮಹೀಂದ್ರಾ ಶೇಕಡಾ 2.8ರಷ್ಟು ಇಳಿಕೆಗೊಂಡು 969.20 ರೂಪಾಯಿಗೆ ತಲುಪಿದೆ. ವಿಪ್ರೋ ಷೇರುಗಳು ಶೇಕಡಾ 1.9ರಷ್ಟು ಇಳಿದು 437.75 ರೂಪಾಯಿಗೆ ಇಳಿಕೆಯಾಗಿದೆ. ಇದರ ನಡುವೆ ಯುಪಿಎಲ್, ಸನ್‌ಫಾರ್ಮಾ, ಟಾಟಾ ಮೋಟಾರ್ಸ್, ಹಿಂದೂಸ್ತಾನ್ ಯುನಿಲಿವರ್ , ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಏರಿಕೆ ದಾಖಲಿಸಿದೆ.

English summary
Sensex Was Down 500 Points, Nifty Around 13,850 Points on Thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X