ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಲಿತಾಂಶ ಅತಂತ್ರದ ಭೀತಿ : ಸೆನ್ಸೆಕ್ಸ್ ನಲ್ಲಿ ಕುಸಿತ, ಷೇರುಪೇಟೆ ತಲ್ಲಣ

|
Google Oneindia Kannada News

ಮುಂಬೈ, ಡಿಸೆಂಬರ್ 11: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಏರಿಳಿತ ದಿನದ ಆರಂಭದಲ್ಲೇ ಕಾಣಿಸಿಕೊಂಡಿದೆ. ಮಂಗಳವಾರದ ದಿನದ ಆರಂಭಿಕ ವಹಿವಾಟಿನಲ್ಲೇ 350 ಅಂಕಗಳನ್ನು ಕಳೆದುಕೊಂಡಿದೆ.ಇಂದು ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 9.40ರ ವೇಳೆಗೆ ಸೆನ್ಸೆಕ್ಸ್ 555.72 ಅಂಕ ಕುಸಿತಗೊಂಡು 35,114.93 ಅಂಶ ಕುಸಿತಕ್ಕೀಡಾಯಿತು.

ಐದು ರಾಜ್ಯಗಳ ಎಕ್ಸಿಟ್ ಪೋಲ್ ಪರಿಣಾಮ: ಸೆನ್ಸೆಕ್ಸ್ ಸೂಚ್ಯಂಕ ಕುಸಿತಐದು ರಾಜ್ಯಗಳ ಎಕ್ಸಿಟ್ ಪೋಲ್ ಪರಿಣಾಮ: ಸೆನ್ಸೆಕ್ಸ್ ಸೂಚ್ಯಂಕ ಕುಸಿತ

ಸೋಮವಾರದಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಇಂದು ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಫಲಿತಾಂಶದ ಟ್ರೆಂಡಿಂಗ್ ನಲ್ಲಿ ಅತಂತ್ರ ಸ್ಥಿತಿ ಕಾಣಿಸಿದ್ದರಿಂದ ಕೆಲ ಷೇರುಗಳು ಆರಂಭಿಕ ಕುಸಿತ ಕಂಡಿವೆ.

ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 572 ಅಂಶ, ನಿಫ್ಟಿ 181 ಅಂಶ ಕುಸಿತ ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ 572 ಅಂಶ, ನಿಫ್ಟಿ 181 ಅಂಶ ಕುಸಿತ

ರುಪಾಯಿ ಮೌಲ್ಯ: ಮಂಗಳವಾರ 72.46 ರು ಪ್ರತಿ ಡಾಲರ್ ನಂತೆ ವಹಿವಾಟು ಆರಂಭವಾಗಿದೆ. ಸೋಮವಾರದಂದು 50 ಪೈಸೆ ಕಳೆದುಕೊಂಡು 71.32ರು ನಂತೆ ಇತ್ತು. ಜಾಗತಿಕ ಮಾರುಕಟ್ಟೆ ವ್ಯತ್ಯಯ, ಊರ್ಜಿತ್ ಪಟೇಲ್ ರಾಜೀನಾಮೆ, ವಿದೇಶಿ ವಿನಿಯಮ ವ್ಯತ್ಯಾಸ ಎಲ್ಲವೂ ಕಾರಣವಾಗಿತ್ತು. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ

346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ 346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ

Sensex down 350 pts on poll outcome uncertainty, Patels exit

ಸೆನ್ಸೆಕ್ಸ್​ 34,458.86 ಅಂಕಗಳಿಗಳಿಷ್ಟಿದ್ದು, 500 ಅಂಕಗಳಷ್ಟು ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಅಂತೆಯೇ ನಿಫ್ಟಿ 10371.80 ಅಂಕಗಳಷ್ಟಿದ್ದು, 116.70 ಅಂಕಗಳಿಗೆ ಕುಸಿತವಾಗಿದೆ. ಕಳೆದ ಕೆಲ ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿಯುತ್ತಲೇ ಇದ್ದು, ಚೇತರಿಕೆ ಕಾಣುವ ಲಕ್ಷಣಗಳಿಲ್ಲ.

English summary
Benchmarks opened lower on Tuesday after the Reserve Bank of India's (RBI) governor Urijit Patel resigned with immediate effect on Monday. That apart outcome of the assembly polls in five states also weighed on investor sentiment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X