ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

346 ಅಂಶ ನೆಲ ಕಚ್ಚಿದ ಸೆನ್ಸೆಕ್ಸ್, 103 ಅಂಶ ಇಳಿಕೆ ದಾಖಲಿಸಿದ ನಿಫ್ಟಿ

|
Google Oneindia Kannada News

ಬಿಎಸ್ ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಸೋಮವಾರದಂದು 346 ಅಂಶಗಳಷ್ಟು ಕುಸಿತ ಕಂಡಿದೆ. ಆಟೋಮೊಬೈಲ್ ಹಾಗೂ ಇಂಧನ ಕ್ಷೇತ್ರದ ಕಂಪನಿಗಳ ಷೇರುಗಳುಗಳಲ್ಲಿ ಮಾರಾಟದ ಒತ್ತಡ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತದ ಕಾರಣಕ್ಕೆ ಷೇರು ಮಾರುಕಟ್ಟೆ ಕುಸಿತ ಕಂಡಿತು.

ದೀಪಾವಳಿ ಮುಹೂರ್ತ್ ಟ್ರೇಡಿಂಗ್: ಷೇರು ಮಾರುಕಟ್ಟೆ ಭರ್ಜರಿ ಏರಿಕೆ ದೀಪಾವಳಿ ಮುಹೂರ್ತ್ ಟ್ರೇಡಿಂಗ್: ಷೇರು ಮಾರುಕಟ್ಟೆ ಭರ್ಜರಿ ಏರಿಕೆ

ಅದೇ ರೀತಿ ನಿಫ್ಟಿ ಕೂಡ 103 ಅಂಶಗಳು ಇಳಿಕೆ ಕಂಡು, 10,482.20 ಅಂಶ ತಲುಪಿತು. ಕಳೆದ ನಾಲ್ಕು ದಿನದಿಂದ ಕಚ್ಚಾ ತೈಲ ಬೆಲೆ ಇಳಿಕೆ ಹಾದಿಯಲ್ಲಿ ಇದ್ದಿದ್ದು, 2.09 ಪರ್ಸೆಂಟ್ ಏರಿಕೆ ಕಂಡು, ಬ್ಯಾರೆಲ್ ಗೆ $ 71.62 ತಲುಪಿತು. ಮುಂದಿನ ತಿಂಗಳಿಂದ ತೈಲ ಉತ್ಪಾದನೆ ಕಡಿಮೆ ಮಾಡಲಾಗುವುದು ಎಂದು ಸೌದಿ ಅರೇಬಿಯಾ ಭಾನುವಾರ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ

ಇನ್ನು ಡಾಲರ್ ವಿರುದ್ಧ ರುಪಾಯಿ ಮೌಲ್ಯ 57 ಪೈಸೆ ಕುಸಿತವಾಗಿ 73.07 ತಲುಪಿತು. ಕೈಗಾರಿಕೆ ಉತ್ಪಾದನೆ ಸೂಚ್ಯಂಕದ ಆತಂಕ, ಗ್ರಾಹಕ ದರ ಸೂಚ್ಯಂಕ ಬಿಡುಗಡೆ ಆಗಬೇಕಿರುವ ಹಿನ್ನೆಲೆಯಲ್ಲಿನ ಕಾರಣಕ್ಕೆ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದಾರೆ. ಏಷ್ಯಾದ ಬಹುತೇಕ ಷೇರು ಮಾರುಕಟ್ಟೆಗಳು ಇಳಿಕೆ ದಾಖಲಿಸಿವೆ. ಯುರೋಪ್ ಮಾರುಕಟ್ಟೆ ಕೂಡ ಇಳಿಕೆ ಹಾದಿಯಲ್ಲಿತ್ತು.

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಸೆನ್ಸೆಕ್ಸ್ 732 ಅಂಶ ಏರಿಕೆ ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಸೆನ್ಸೆಕ್ಸ್ 732 ಅಂಶ ಏರಿಕೆ

Sensex dives 346 points concerns over crude, rupee

ಮಾರಾಟದ ಒತ್ತಡದ ಕಾರಣಕ್ಕೆ ನಿಫ್ಟಿ ಸೂಚ್ಯಂಕ 10,500 ಅಂಶಗಳಿಗಿಂತ ಕೆಳಗೆ ವಹಿವಾಟು ಕೊನೆಗೊಳಿಸಿತು. ಜಾಗತಿಕ ಮಾರುಕಟ್ಟೆಯು ದುರ್ಬಲಗೊಂಡಿರುವುದು, ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ದರ, ಗ್ರಾಹಕ ದರ ಸೂಚ್ಯಂಕ 3.6% ತಲುಪಬಹುದು ಎಂಬ ಅಂದಾಜಿನ ಕಾರಣಕ್ಕೆ ಹೀಗಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary
The BSE Benchmark Sensex on Monday plunged by about 346 points owing to an intense fag-end selling mainly in auto and energy stocks amid renewed concerns over rupee fall and rising global crude oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X